ರಾಜ್ಯ ಸುದ್ದಿಗಳು
ದೇವನಹಳ್ಳಿ
ಪಟ್ಟಣದ ಸರ್ಕಿಟ್ ಹೌಸ್ ಮುಂಭಾಗದಲ್ಲಿ ತಾಲೂಕು ಛಲವಾದಿ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಿಯಾಂಕ ಖರ್ಗೆ ಅವರ ಬಗ್ಗೆ ಹೀನಾಯವಾಗಿ ಮಾತನಾಡಿರುವ ಪ್ರತಾಪ್ ಸಿಂಹ ಹೇಳಿಕೆಗೆ ಛಲವಾದಿ ಮಹಾಸಭಾ ಮುಖಂಡರು ವಿರೋಧ ವ್ಯಕ್ತಪಡಿಸಿದರು.ಛಲವಾದಿ ಮಹಾಸಭಾ ಮುಖಂಡ ಸಿ.ಮುನಿಯಪ್ಪ ಮಾತನಾಡಿ, ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಸಂವಿಧಾನ ವಿರುದ್ಧವಾಗಿ ಮಾತನಾಡುವ ನಿಮಗೆ ಮಾನ ಮರ್ಯಾದೆ ಇದೆಯೇ, ನಾಚಿಕೆಯಾಗಬೇಕು ನಿಮಗೆ, ಏನು ಪ್ರಿಯಾಂಕ ಖರ್ಗೆ ಅವರ ಬಗ್ಗೆ ಹೀನಾಯವಾಗಿ ಮಾತನಾಡುತ್ತಿರಾ… ನೀವೇನು ಎಷ್ಟು ತಪ್ಪುಗಳು ಮಾಡಿದ್ದೀರಿ… ನಿಮಗೆ ನಾಚಿಕೆ ಮಾನ ಮರ್ಯಾದೆ ಇದ್ದರೆ, ಸಂವಿಧಾನದ ಬಗ್ಗೆ ಗೌರವಿದ್ದರೆ ಕೂಡಲೇ ರಾಜೀನಾಮೆಕೊಟ್ಟು, ಇಂಡಿಪೆಂಡೆಂಟ್ ಆಗಿ ಗೆಲ್ಲಿ. ಸಂವಿಧಾನ ಹೆಸರಿನಲ್ಲಿ ಪ್ರಮಾಣ ಮಾಡ್ತಿರಿ, ಬಾಬಾಸಾಹೇಬ್ ಹೆಸರಿನಲ್ಲಿ ಅಧಿಕಾರ ಮಾಡ್ತಿರಿ… ಬಾಬಾ ಸಾಹೇಬ್ ವಂಶಸ್ತರ ಮೇಲೆಯೇ ಈ ರೀತಿ ಮಾತಾಡ್ತೀರಿ ಅಂದರೆ ಕಿಂಚಿತ್ತು ನಿಮಗೆ ಮಾನ ಮರ್ಯಾದೆ ಇದೆಯಾ ಎಂದು ಗುಡುಗಿದರು.
ಛಲವಾದಿ ಸಮುದಾಯದಿಂದ ಪ್ರಿಯಾಂಕ ಖರ್ಗೆ ಅವರ ಬಗ್ಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ಖಂಡಿಸಿ, ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಲಾಗುತ್ತದೆ. ಪ್ರಿಯಾಂಕ ಖರ್ಗೆಯವರ ಬಗ್ಗೆ ಮಾತನಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಅದನ್ನು ಬಿಟ್ಟು ಬೇರೆ ರೀತಿಯಲ್ಲಿ ಮಾತಾಡಲಿ… ಬಿಟ್‌ಕಾಯಿನ್ ವಿಚಾರದ ಬಗ್ಗೆ ಯಾಕೆ ಮಾತಾಡ್ತಿಲ್ಲ ಇವರು… ಪ್ರತಾಪ್ ಸಿಂಹ ಎನ್ನುವ ಹೆಸರು ಇಟ್ಟುಕೊಂಡು ಪ್ರಾಣಿ ಜನ್ಮದ ಹೆಸರು ಇಟ್ಟುಕೊಂಡು, ಸಮುದಾಯದ ಲೀಡರ್ ಪ್ರಿಯಾಂಕ ಖರ್ಗೆ ಅವರ ಬಗ್ಗೆ ಹೀನಾಯವಾಗಿ ಹೇಳಿಕೆ ನೀಡಿರುವುದು ಖಂಡಿಸುತ್ತೇವೆ. ಕೂಡಲೇ ಕ್ಷಮೆಯಾಚಿಸಬೇಕು. ಹಂಸಲೇಖ ಅವರ ಹೇಳಿಕೆಗೆ ನಮ್ಮ ಸಮುದಾಯದವರು ಇರುತ್ತೇವೆ. ಎಂದು ದೇವನಹಳ್ಳಿ ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಕೆ.ವಿ.ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ದೇವನಹಳ್ಳಿ ತಾಲೂಕು ಛಲವಾದಿ ಮಹಾಸಭಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಡಿಎಸ್‌ಎಸ್ ತಾಲೂಕು ಸಂಚಾಲಕ ನರಸಪ್ಪ, ಸುಮದಾಯದ ಸದಸ್ಯರು, ಮುಖಂಡರು, ವಿಜಯಪುರ ಪುರಸಭಾ ಸದಸ್ಯ ನಾರಾಯಣಸ್ವಾಮಿ, ಸಮಾಜದ ಪದಾಧಿಕಾರಿಗಳು, ಉಪಸ್ಥಿತಿ ಇದ್ದರು.
Be the first to comment