ಸಾವಿನ ಮನೆಯಾಗಿ ಬದಲಾದ ಮದುವೆಮನೆ, ಟೆಂಪೋ ಪಲ್ಟಿಯಾಗಿ ಮದುಮಗಳ ತಂಗಿ ಸಾವು

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಹೊನ್ನಾವರ

ಮದುವೆಯ ಮನೆ ಸಾವಿನ ಮನೆಯಾಗಿ ಬದಲಾಗ ಬಹುದೆನ್ನುವ ಸಣ್ಣದೊಂದು ಸೂಚನೆಯೂ ಇಲ್ಲದೆ ಇಡೀ ದಿನ ಲವ ಲವಿಕೆಯಿಂದ ಸಂತಸ ಸಂಭ್ರಮ ತುಂಬಿ ತುಳುಕುತ್ತಿದ್ದ ಸಂಶಿ ಊರಿನಲ್ಲಿ ಸ್ಮಶಾನ ಮೌನ ಆವರಿಸಿದೆ. ಅಕ್ಕನ ಮದುವೆಯ ಸಂಭ್ರಮದಲ್ಲಿ ಮಿಂದೆಂದು ಬಂಧು ಬಳಗದೊಟ್ಟಿಗೆ ಖುಷಿ ಖುಷಿಯಾಗಿ ಮನೆಗೆ ಮರಳುತ್ತಿರುವಾಗ ಟೆಂಪೋ ಪಲ್ಟಿಯಾಗಿ ಮದುಮಗಳ ತಂಗಿ ದುರ್ಮರಣ ಹೊಂದಿದ ಹೃದಯ ವಿದ್ರಾವಕ ಘಟನೆ ರವಿವಾರ ರಾತ್ರಿ ತಾಲೂಕಿನ ಮಾಗೋಡ ಸಮೀಪ ಸಂಭವಿಸಿದೆ.

CHETAN KENDULI

ಮಾಗೋಡ ಸಮೀಪ ಕುಚ್ಚೋಡಿ ಎಂಬಲ್ಲಿ ನಿನ್ನೆ ರಾತ್ರಿ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆಯಲ್ಲಿ ಟೆಂಪೋದಲ್ಲಿದ್ದ 22 ರ ಹರೆಯದ ಯುವತಿ ಪ್ರಿನ್ಸಿಟಾ ಪ್ರಾನ್ಸಿಸ್ ಮಿರಾಂಡಾ ಸ್ಥಳದಲ್ಲಿಯೇ ಅಸು ನೀಗಿದ್ದಳು.

ಘಟನೆಯಲ್ಲಿ ಅನಸ್ಟಲ್ ಮಿರಾಂಡಾ, ಫಿಯದಾದ್ ಲೊಪೀಸ್, ರೇಕಲ್ ಮಿರಾಂಡಾ, ಕ್ಲೇರಾ ಮಿರಾಂಡಾ, ರೇಖಾ ಮಾರಿಯೋ ಮಿರಾಂಡಾ, ಕ್ಲೇರಾ ಮಿರಾಂಡಾ, ಲೆನ್ಸಿಟಾ ಮಿರಾಂಡಾ, ಫಿಲೋಮಿನಾ ಮಿರಾಂಡಾ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Be the first to comment

Leave a Reply

Your email address will not be published.


*