ವಸತಿ, ವಾಣಿಜ್ಯ ಮೂಲೆ ನಿವೇಶನಗಳ ಬಹಿರಂಗ ಹರಾಜು

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಯುನಿಟ್-1ರಲ್ಲಿ ಬರುವ ವಸತಿ, ವಾಣಿಜ್ಯ ಮೂಲೆ ನಿವೇಶನಗಳ ಬಹಿರಂಗ ಹರಾಜು ಪ್ರಕ್ರಿಯೆ ಜನವರಿ 27 ರಿಂದ ಫೆಬ್ರವರಿ 19 ವರೆಗೆ ಜರುಗಲಿದೆ ಎಂದು ಶಾಸಕರು ಹಾಗೂ ಬಿಟಿಡಿಎ ಅಧ್ಯಕ್ಷರಾದ ವೀರಣ್ಣ ಚರಂತಿಮಠ ತಿಳಿಸಿದರು.

ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರವು ಯುನಿಟ್-1ರಲ್ಲಿ ಬಾಕಿ ಉಳಿದ 1129 ಮೂಲೆ ನಿವೇಶನಗಳ ಪೈಕಿ ಈಗ 200 ಮೂಲೆ ನಿವೇಶನಗಳನ್ನು ಬಹಿರಂಗ ಹರಾಜು ಮಾಡಲು ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ಜನವರಿ 21 ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

200 ಮೂಲೆ ನಿವೇಶನಗಳ ಪೈಕಿ 145 ವಸತಿ ಮೂಲೆ ನಿವೇಶನಗಳಲ್ಲಿ ಎ ಮಾದರಿಯ 35 ನಿವೇಶನಗಳು, ಎ.ಎಸ್.ಪಿ.ಎಲ್ ಮಾದರಿಯ 2, ಬಿ ಮಾದರಿಯ 58, ಸಿ ಮಾದರಿಯ 35, ಡಿ ಮಾದರಿಯ 11, ಇ ಮಾದರಿಯ 3, ಇಎಸ್‍ಪಿಎಲ್ ಮಾದರಿಯ 1 ಇದ್ದು, ಪ್ರತಿ ಚದರ ಅಡಿಗೆ 1130 ರೂ., 26 ಸಂತ್ರಸ್ಥರಲ್ಲದವರ ಮೂಲೆ ನಿವೇಶನಗಳಲ್ಲಿ ಎಸ್ ಮಾದರಿಯ 15, ಎಂ ಮಾದರಿಯ 9, ಎಲ್ ಮಾದರಿಯ 2 ನಿವೇಶನಗಳಿದ್ದು, ಪ್ರತಿ ಚರದ ಅಡಿಗೆ 1480 ರೂ.ಗಳಿಗೆ ನಿಗಧಿಪಡಿಸಲಾಗಿದೆ ಎಂದರು.

19 ವಾಣಿಜ್ಯ ಮೂಲೆ ನಿವೇಶನಗಳಲ್ಲಿ ಎ ಮಾದರಿಯ 3, ಎ1 ಮಾದರಿಯ 1, ಬಿ ಮಾದರಿಯ 4, ಬಿ2 ಮಾದರಿಯ 1, ಸಿ ಮಾದರಿಯ 4, ಸಿ1 ಮಾದರಿಯ 1, ವಿಎಫ್ ಮಾದರಿಯ 1, ಓಡಿಡಿ ಮಾದರಿಯ 4 ನಿವೇಶನಗಳಿಗೆ ಪ್ರತಿ ಚರದ ಅಡಿಗೆ 2540 ರೂ, 10 ಆಟೋ ಸೆಕ್ಟರ ಮೂಲೆ ನಿವೇಶನಗಳಲ್ಲಿ ಆಟೋ ಎಸ್ ಮಾದರಿಯ 4, ಆಟೋ ಎಸ್‍ಆರ್ ಮಾದರಿಯ2, ಆಟೋ ಓಡಿಡಿ ಮಾದರಿಯ 4 ನಿವೇಶಗಳಿಗೆ ಪ್ರತಿ ಚರದ ಅಡಿಗೆ 910 ರೂ.ಗಳನ್ನು ನಿಗಧಿಪಡಿಸಿದೆ ಎಂದರು.

ನಿವೇಶನಗಳ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಜನವರಿ 21 ಸಂಜೆ 5.30 ರೊಳಗಾಗಿ ಡಿಡಿಯೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಎ.ಬಿ.ಎಸ್ ವಸತಿ ಹಾಗೂ ಎ, ಎ1, ಬಿ, ಬಿ1, ಬಿ2, ಎಸ್, ಹಾಗೂ ವಿ.ಎಫ್ ವಾಣಿಜ್ಯ ನಿವೇಶನಗಳಿಗೆ 50 ಸಾವಿರ ರೂ.ಗಳ ಡಿಡಿಯನ್ನು ಸಲ್ಲಿಸಬೇಕು. ಸಿ, ಡಿ, ಇ, ಇ ಸ್ಪೇಷಲ್ ವಸತಿ ಹಾಗೂ ಸಿ, ಸಿ1, ಎಸ್.ಆರ್ ವಿಷಮ ಅಳತೆಯ ವಾಣಿಜ್ಯ ನಿವೇಶನಗಳಿಗೆ 1 ಲಕ್ಷ ರೂ.ಗಳ ಡಿಡಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.

ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ದಿನ 10 ನಿವೇಶನಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಬಿಟಿಡಿಎ ಯಿಂದ ಕಳೆದ ನಿವೇಶನ ಹರಾಜಿನಲ್ಲಿ 95 ಕೋಟಿ ರೂ.ಗಳು ಬಂದಿದ್ದು, ಅದನ್ನು ಕಾರ್ಪಸ್ ಪಂಡ್‍ನಲ್ಲಿ ಇಡಲಾಗಿದೆ. ಈ ಹಣವನ್ನು ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕುಮಾರ ಯಳ್ಳಿಗುತ್ತಿ, ಮೋಹನ ನಾಡಗೌಡ, ಶಿವಾನಂದ ಟವಳಿ, ಬಿಟಿಡಿಎ ಮುಖ್ಯ ಅಭಿಯಂತರ ಮನ್ಮಥಯ್ಯಸ್ವಾಮಿ, ಬಿಟಿಡಿಎ ಆಯುಕ್ತ ಗಣಪತಿ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*