ಜಿಲ್ಲಾ ಸುದ್ದಿಗಳು
ಸಿದ್ದಾಪುರ
ಭವಿಷ್ಯದ ಕಬಡ್ಡಿ ಆಟಗಾರರನ್ನು ಸಮಾಜಕ್ಕೆ ಅರ್ಪಿಸುವ ನಿಟ್ಟಿನಲ್ಲಿ ಸಿದ್ದಾಪುರ ತಾಲೂಕಾ ಕಬಡ್ಡಿ ಅಸೋಸಿಯೇಷನ್ ಹಾಗೂ ಹೊಸೂರು ಸಂಘಟನೆಯ ವತಿಯಿಂದ ಹೊಸೂರಿನ ಬಂಕೇಶ್ವರ ದೇವಸ್ಥಾನದ ಆವರಣದಲ್ಲಿ15 ದಿನಗಳ ಉಚಿತ ಕಬಡ್ಡಿ ಟ್ರೈನಿಂಗ್ ಕ್ಯಾಂಪ್ ಆರಂಭಗೊಂಡಿತು. ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ಅವರು ದೇಶದ ಹೆಮ್ಮೆಯ ಮಣ್ಣಿನ ಕ್ರೀಡೆ ಕಬಡ್ಡಿಯ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಲ್ಲಿ ಅಭಿಮಾನ ಮತ್ತು ಆಸಕ್ತಿ ಹುಟ್ಟಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅವರಿಗಾಗಿಯೇ ಉಚಿತ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ಇಂತಹ ಕ್ರೀಡೆಯಲ್ಲಿ ತೊಡಗಿದ್ದಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಬೆಳವಣಿಗೆ ಕಾಣುವುದಲ್ಲದೆ, ದುರಭ್ಯಾಸಗಳಿಂದಲೂ ದೂರವಾಗುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ತಾಲ್ಲೂಕು ನಮ್ಮ ಜಿಲ್ಲೆಯಿಂದ ಅನೇಕ ಕಬಡ್ಡಿ ಕ್ರೀಡಾಪಟುಗಳು ಉತ್ತಮ ಆಟಗಾರರಾಗುವುದ ಜೊತೆಗೆ ದೇಶ ವಿದೇಶಗಳಲ್ಲಿ ಕೂಡ ಆಟ ಆಡುವ ಕ್ರೀಡಾಪಟು ಆಗಲಿ ಎಂದು ಶುಭ ಹಾರೈಸಿದರು, ಹಾಗೂ ಮುಂದಿನ ದಿನಗಳಲ್ಲಿ ರಾಜ್ಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲ್ಲಿಕ್ಕೆ ಎಲ್ಲ ರೀತಿಯ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು. ಈ ಸಂಧರ್ಬದಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಭೀಮಣ್ಣ ನಾಯ್ಕ, ಸಿದ್ದಾಪುರ ಭಾಗದ ಹಿರಿಯರಾದ ಕೆ ಜಿ ನಾಗರಾಜ್, ಅಬ್ಬಾಸ್ ಟೋನ್ಸೆ, ಎಸ್ ಕೆ ಭಾಗವತ, ಎಸ್ ಕೆ ನಾಯ್ಕ, ಕಾನಸೂರ ಸುಭಾಷ್ ನಾಯ್ಕ. ಹಾಗೂ ಅನೇಕರು ಹಿರಿಯರು ಭಾಗವಹಿಸಿದರು. ಕಬಡ್ಡಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದಂತಹ ಎಲ್ಲ ಕ್ರೀಡಾ ಪಟ್ಟುಗಳಿಗೆ ಸಂಘಟನೆಯ ವತಿಯಿಂದ ಉಚಿತ ಊಟ ಹಾಗೂ ವಸತಿ ಸೌಕರ್ಯ ಆಯೋಜಿಸಲಾಗಿತ್ತು.
Be the first to comment