ಕುಡಿತದ ಚಟ ಹೊಂದಿದ್ದ ಮಗ ಸಾಂಬಾರ್​ ಸರಿಯಾಗಿ ಮಾಡಿಲ್ಲವೆಂದು , ತಾಯಿ ಮತ್ತು ತಂಗಿಗೆ ಗುಂಡು ಹಾರಿಸಿ ಕೊಲೆ..

ವರದಿ-ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಸಿದ್ದಾಪುರ

: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ದೊಡ್ಮನೆ ಗ್ರಾಮದ ಕುಡಗೋಡು ಬಳಿ ನಡೆದಿದ್ದು ,ಸಾಂಬಾರ್​ ಸರಿಯಾಗಿ ಮಾಡಿಲ್ಲವೆಂದು ಜಗಳ ತೆಗೆದು ನಾಡ ಬಂದೂಕಿನಿಂದ ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿದ ಭಯಾನಕ ಘಟನೆಯಾಗಿದೆ..

CHETAN KENDULI

ಮಂಜುನಾಥ ಹಸ್ಲರ್ (24) ಕುಡಿತದ ಚಟ ಹೊಂದಿದ್ದು, ಕಳೆದ ರಾತ್ರಿ ಸಾಂಬಾರ್​ ಸರಿಯಾಗಿಲ್ಲವೆಂದು ಜಗಳ ತೆಗೆದಿದ್ದಾನೆ. ಈ ವೇಳೆ ರೊಚ್ಚಿಗೆದ್ದ ಆರೋಪಿ, ನಾಡ ಬಂದೂಕಿನಿಂದ ತಾಯಿ ಮತ್ತು ತಂಗಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ‌. ಪಾರ್ವತಿ ನಾರಾಯಣ ಹಸ್ಲರ್ (42), ರಮ್ಯಾ ನಾರಾಯಣ ಹಸ್ಲರ್(19) ಮೃತ ದುರ್ದೈವಿಗಳು.

ಮಗನ ದುಷ್ಕೃತ್ಯವನ್ನು ಖಂಡಿಸಿ ಆತನ ವಿರುದ್ಧ ಸ್ವತಃ ತಂದೆಯೇ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Be the first to comment

Leave a Reply

Your email address will not be published.


*