ಪಟ್ಟದಕಲ್ಲ, ಐಹೊಳೆ ಸ್ಮಾರಕಗಳಲ್ಲಿ ಬೆಳಕಿನ ಅಭಿಯಾನ

ವರದಿ:ಬಸವರಾಜ ಹೆಳವರ ಬಾಗಲಕೋಟ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ :  ಜಿಲ್ಲೆಯ ವಿಶ್ವ ಪಾರಂಪರಿಕ‌ ತಾಣಗಳಾದ‌ ಪಟ್ಟದಕಲ್ಲಿನ ಸಮೂಹ ದೇವಾಲಯಗಳ ಹತ್ತು ಸ್ಮಾರಕಗಳು ಹಾಗೂ ಐಹೊಳೆ ಸಮೂಹ ದೇವಾಲಯಗಳಲ್ಲಿ ಅ. 14 ರ ಸಂಜೆ 6 ಗಂಟೆಯಿಂದ ಅ.15ರ ಬೆಳಿಗ್ಗೆ 1 ಗಂಟೆವರೆಗೆ ಬೆಳಕಿನ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಭಾರತ ಕರೋನಾ ಲಸಿಕೆ ಅಭಿಯಾನದಲ್ಲಿ ಯಶಸ್ವಿಯಾಗಿ 100 ಕೋಟಿ ಕರೋನಾ ಲಸಿಕೆ ಹಾಕಿರುವುದರ ಪ್ರತೀಕವಾಗಿ ಕೇಂದ್ರ‌ ಸರಕಾರದ‌ ಸಂಸ್ಕೃತಿ ಮಂತ್ರಾಲಯವು ದೇಶದ 100 ಸ್ಮಾರಕಗಳನ್ನು ಗುರುತಿಸಿ ರಾತ್ರಿ ದೀಪದ ಅಲಂಕಾರ ಮಾಡಲು ನಿರ್ಧರಿಸಿದೆ.

ಈ ಪೈಕಿ ಭಾರತೀಯ ಪುರಾತತ್ವ ಸರ್ವೇಕ್ಷಣ ಧಾರವಾಡ ವಲಯದ 3 ಸ್ಮಾರಕಗಳಾದ ಪಟ್ಟದಕಲ್ಲ, ಐಹೊಳೆ ಮತ್ತು ವಿಜಯಪುರದ ಗೋಲಗುಂಬಜ ಆಯ್ಕೆಯಾಗಿವೆ. ಅಯ್ಕೆಯಾದ ಸ್ಮಾರಕಗಳಲ್ಲಿ 3 ದಿನಗಳ ಕಾಲ ಬೆಳಕಿನ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಭಾರತ ಸರಕಾರವು ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ಭಾರತದ‌ ಸಾಂಸ್ಕೃತಿಕ ಶ್ರೀಮಂತಿಕೆಗೆ ಪ್ರತೀಕವಾಗಿರುವ ಈ ಸ್ಮಾರಕಗಳ ದೀಪಾಲಂಕಾರದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರಧ್ವಜ ಮಾದರಿಯ ದೀಪಾಲಂಕಾರ ಮಾಡಿ ರಾಷ್ಟ್ರಗೀತೆಯನ್ನು ನಿರಂತರವಾಗಿ ಮಂದ‌ಸ್ವರದಲ್ಲಿ ನುಡಿಸಲಾಗುತ್ತಿದೆ ಎಂದು ಅಧೀಕ್ಷಣ‌ ಪುರಾತತ್ವ ವಿದ ಡಾ.ವಿಠಲ ಬಡಿಗೇರ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*