ಕೊರಗ ಸಮುದಾಯದ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡಿಸಿ ಪ್ರತಿಭಟನಾ ಪ್ರದರ್ಶನ ಹಾಗೂ ಹಕ್ಕೊತ್ತಾಯ

ವರದಿ : ಇಬ್ರಾಹಿಂ ಕೋಟ ಕುಂದಾಪುರ

ಜಿಲ್ಲಾ ಸುದ್ದಿಗಳು 

ಕುಂದಾಪುರ

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಜಿಲ್ಲಾ ಸಂಘಟನಾ ಸಮಿತಿ, ಉಡುಪಿ, ಇವರ ನೇತೃತ್ವದಲ್ಲಿ ಆದಿವಾಸಿ ಕೊರಗ ಸಮುದಾಯದ ಮನೆಯಲ್ಲಿ ನಡೆದ ಮಹೆಂದಿ ಕಾರ್ಯಕ್ರಮದಲ್ಲಿ ಪೊಲೀಸರು ನಡೆಸಿದ ದೌರ್ಜ್ಯನ್ಯವನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಿನಾಂಕ 3 ರಂದು ಕುಂದಾಪುರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ಹಾಗೂ ಹಕ್ಕೊತ್ತಾಯ ನಡೆಯಿತು.ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರ್ನಾಟಕ ಅದಿವಾಸಿ ಹಕ್ಕುಗಳ ಜಿಲ್ಲಾ ಕಾರ್ಯದರ್ಶಿ ಶ್ರೀಧರ್ ನಾಡ ಮಾತನಾಡಿ ಡಿ. 27 ರಂದು ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮದಲ್ಲಿ ನಡೆದ ಪೊಲೀಸ್ ದೌರ್ಜನ್ಯದಲ್ಲಿ ಮದುಮಗ ಸೇರಿದಂತೆ ಕೊರಗ ಸಮುದಾಯದ ಮಹಿಳೆಯರು, ಯುವಕರು, ಮಕ್ಕಳ ಮೇಲೆ ನಡೆದಂತ ಲಾಠಿ ಚಾರ್ಜ್ ಯಿಂದ ಇಡೀ ಕೊರಗ ಸಮುದಾಯಕ್ಕೆ ನೋವುಂಟಾಗಿದೆ.

CHETAN KENDULI

ಅಳಿವಿನಚಿನಲ್ಲಿರುವ ಕೊರಗ ಸಮುದಾಯ ಕೃಷಿ ಪೂರ್ವ ನಾಗರಿಕತೆಯ ಸಮುದಾಯ ಇತ್ತೀಚಿನ ವರ್ಷಗಳಲ್ಲಿ ಆಧುನಿಕತೆಗೆ ಮುಖಾಮುಖಿ ಆಗಲು ಅಂಬೆಗಾಲು ಇಡಲು ಪ್ರಾರಂಭಿಸಿದ್ದಾರೆ. ಕೊರಗರಲ್ಲಿ ಬೆರಳೆಣಿಕೆಯಷ್ಟು ಜನ ಶಿಕ್ಷಣ ಪಡೆದು ಎಲ್ಲರಂತೆ ಘನತೆ ಗೌರವದಿಂದ ಬದುಕಲು ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಹಲವಾರು ದಶಕಗಳಿಂದ ಸಮುದಾಯದ ಜನಸಂಖ್ಯೆ ಅತ್ಯಂತ ಗಂಭೀರ ಸ್ಥಿತಿಯಲ್ಲಿ ಕಡಿಮೆ ಆಗುತ್ತಿದೆ. ಸಮುದಾಯ ವಿನಾಶದ ಅಂಚಿಗೆ ಸರಿದಿದೆ. ಸಮುದಾಯದ ವಿನಾಶದೊಂದಿಗೆ ಭಾಷೆ, ಬದುಕು, ಕಲೆ, ಸಂಸ್ಕೃತಿ ನಾಶವಾಗಲಿದೆ. ಈಗಾಗಲೇ ಕೊರಗ ಸಮುದಾಯದಲ್ಲಿ ಕೇವಲ ನಾಲ್ಕು ಸಾವಿರ ಜನ ಮಾತ್ರ ಕೊರಗ ಭಾಷೆಯನ್ನು ಮಾತನಾಡುತ್ತಾರೆ. ಕೇಂದ್ರ ಸರಕಾರ ಕೊರಗ ಸಮುದಾಯವನ್ನು ಪಿ.ವಿ.ಟಿ.ಜೆ ಸಮುದಾಯದ ಪಟ್ಟಿಗೆ ಸೇರಿಸಿದೆ. ಅಂದರೆ ಅತ್ಯಂತ ಅಂಚಿಗೆ ತಳ್ಳಲ್ಪಟ, ದಮನಕೆ ಒಳಾಗದ ಸಮುದಾಯವೆಂದು ಸರಕಾರವೇ ಗುರುತಿಸಿದೆ. ಅಂತಹ ಸಮುದಾಯವನ್ನು ಆಡಳಿತ ವ್ಯವಸ್ಥೆ ಉಳಿಸಿ ಬೆಳಸಲು ನಿರಂತರವಾಗಿ ಕಾರ್ಯಕ್ರಮ ರೂಪಿಸಿ ಜಾರಿಗೆ ತರುವ ಬದಲು ಆಡಳಿತವೆ ಅವರ ಮೇಲೆ ದೌರ್ಜನ್ಯ ನಡೆಸಿರುವುದು ಕ್ಷಮೆಗೆ ಅರ್ಹವಲ್ಲ ಎಂದು ಹೇಳಿದರು.

ಕೊರಗರ ಮೇಲೆ ದಾಳಿ ನಡೆಸಿದ ಪೊಲೀಸ್ ಠಾಣಾಧಿಕಾರಿ ಸಂತೋಷ್ ಬಿ ಪಿ ಎನ್ನುವವರನ್ನು ಅಮಾನತುಗೊಳಿಸಿದ್ದು, ಇನ್ನು ಉಳಿದ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಇದು ರಾಜ್ಯಾದ್ಯಂತ ಬಂದಿರುವ ಆಕ್ರೋಶ ಮತ್ತು ಪ್ರತಿರೋಧದ ಭಾಗವಾಗಿ ಆಗಿರುತ್ತದೆ, ಪೊಲೀಸ್‌ ಸಬ್‌ ಇನ್ಸ್ಪೆಕ್ಟರ್ ಅಮಾನತು ಮಾಡಿರುವುದನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸ್ವಾಗತಿಸುತ್ತದೆ, ಆದರೆ ಅಮಾನತು ಮಾಡಿದಕ್ಷಣ ಅವರಿಗೆ ಶಿಕ್ಷೆ ಆಗಿದೆ ಎಂದು ಅರ್ಥವಲ್ಲ. ಸಂಬಂಧಿಸಿದ ಪೊಲೀಸರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಿ ಬಂಧಿಸಬೇಕು ನೊಂದ ಕೊರಗ ಸಮುದಾಯದ ಬಂಧುಗಳಿಗೆ ಪೂರ್ಣ ಪ್ರಮಾಣದ ಪರಿಹಾರ ಕೂಡಲೇ ನೀಡಬೇಕು. ಹಾಗೆ ದೌರ್ಜನ್ಯ ನಡೆಸಿರುವ ಪೊಲೀಸ್ ಅಧಿಕಾರಿಗಳು ಇಡೀ ಕೊರಗ ಸಮುದಾಯದ ಕುರಿತು ಕ್ಷಮೆ ಕೇಳಬೇಕು. ಮುಖವಾಗಿ ಈ ಘಟನೆ ಹಿಂದೆ ಕೊರಗರ ಕುರಿತು ಅಸೂರ, ಕೀಳು ಮನೋಭಾವ ಹೊಂದಿರುವ ಕಾಣದ ಕೈ ಕುರಿತು ತನಿಖೆ ಆಗಬೇಕು ಅವರಿಗೂ ಶಿಕ್ಷೆ ಆಗಬೇಕು ಎಂದು ಆಡಳಿತವನ್ನು ಒತ್ತಾಯಿಸುತ್ತೇವೆ ಎಂದು ಶ್ರೀಧರ್ ನಾಡ ಹೇಳಿದರು. ಅಲ್ಲದೆ ಈ ಸಂದರ್ಭದಲ್ಲಿ ಈ ಕೆಳಗಿನ ಹಲವು ಬೇಡಿಕೆಗಳನ್ನು ಇಡಲಾಯಿತು.

ಕೊರಗ ಸಮುದಾಯದ ಮೇಲೆ ದಾಳಿ ನಡೆಸಿದ ಪೋಲಿಸರನ್ನು ಖಾಯಂ ಕರ್ತವ್ಯದಿಂದ ವಜಾಗೊಳಿಸಬೇಕು, ದೌರ್ಜನ್ಯಕ್ಕೆ ಒಳಗಾದ ಕೊರಗ ಬಂಧುಗಳಿಗೆ ಪರಿಹಾರ ನೀಡಬೇಕು, ಸಮಗ್ರ ತನಿಖೆಯಾಗಬೇಕು. ತಪ್ಪಿಸ್ಥರನ್ನು ಕೂಡಲೇ ಬಂಧಿಸಬೇಕು. ಅಮಾಯಕ ಕೊರಗ ಸಮುದಾಯದವರ ಮೇಲೆ ಸುಳ್ಳು ಕೇಸು ದಾಖಲಿಸಿದ್ದನ್ನು ಕೂಡಲೇ ಸರಕಾರ ಹಿಂದಕ್ಕೆ ಪಡೆಯಬೇಕು. ಕೊರಗರ ಭೂಮಿಗೆ ಸಂಬಂಧಿಸಿದ ಖಾತೆ ಬದಲಾವಣೆ ಮತ್ತು ಇತರೆ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು, ಕೇಂದ್ರ, ರಾಜ್ಯ ಸರ್ಕಾರ ಕಳೆದ 6 ವರ್ಷಗಳಿಂದ ಕೊರಗರಿಗೆ ನೀಡಬೇಕಿರುವ ಅನುದಾನಗಳನ್ನು ಕೂಡಲೇ ಬಿಡುಗಡೆಗೊಳಿಸಬೇಕು, ಮನೆ, ನೀರಾವರಿ, ವಿದ್ಯಾರ್ಥಿವೇತನ ಇತರ ಸೌಲಭ್ಯಕ್ಕೆ ಐಟಿಡಿಪಿ ಗೆ ಅರ್ಜಿ ಸಲ್ಲಿಸಿದ ಕೊರಗರಿಗೆ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು. ನಿರುದ್ಯೋಗಿ ಕೊರಗ ಯುವಜನರಿಗೆ 2 ವರ್ಷದಿಂದ ನೀಡಬೇಕಾದ ನಿರುದ್ಯೋಗ ಭತ್ಯೆ ನೀಡಬೇಕು. ಆಲೂರು ಕೊರಗ ಸಮುದಾಯವನ್ನು ಅಜಲು ಮುಕ್ತಗೊಳಿಸಿ, ಮಹಮ್ಮದ್ ಪೀರ್ವರದಿ ಪ್ರಕಾರ ಕನಿಷ್ಠ 2.50 ಎಕರೆ ಭೂಮಿ ಪ್ರತಿ ಕುಟುಂಬಕ್ಕೆ ನೀಡುವುದು. ಹೀಗೆ ಇನ್ನು ಹಲವು ಬೇಡಿಕೆಗಳೊಂದಿಗೆ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿಯನ್ನು ಕುಂದಾಪುರ ತಹಸೀಲ್ದಾರರಾದ ಕಿರಣ್ ಗೌರಯ್ಯರ ಮೂಲಕ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಸಂಘದ ಮುಖಂಡರಾದ ಚಂದ್ರ ಶೇಖರ್ ವಿ., ದಲಿತ ಸಂಘಟನೆಯ ಸಂಚಾಲಕ ರವಿ ವಿ. ಎಂ., ಕುಂದಾಪುರ ಡಿವೈಎಫ್ ಐ ಮುಖಂಡ ರಾಜು ಬಿ. ಟಿ., ದಲಿತ ಸಂಘಟನೆ ಮುಖಂಡ ಮಹಾಬಲ, ಗಣೇಶ್ ಆಲೂರು, ಶಿವರಾಜ್ ನಾಡ, ಮೊದಲದವರು ಉಪಸ್ಥಿತರಿದ್ದರು.ಡಿವೈಎಫ್ ಐ ಕಾರ್ಯದರ್ಶಿ ರಾಜೇಶ್ ವಿ. ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿದರು.

Be the first to comment

Leave a Reply

Your email address will not be published.


*