ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಚಾಮರಾಜಪೇಟೆ ಪೌರಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಮಾಡುವ ಶಾಸಕ ಜಮೀರ್ ಅಹ್ಮದ್ ರವರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ರವರು ಮಾತನಾಡಿ ಮುಸ್ಲಿಂ ರಕ್ತ ಬೇಕಾದರೆ ಪಡೆದು ನಂತರ ಅವರನ್ನು ಬಿಜೆಪಿಯವರು ವಿರೋಧಿಸುತ್ತಾರೆ ಎಂದು ನೀಡಿದ ಹೇಳಿಕೆ ಕರ್ನಾಟಕ ಮುಸ್ಲಿಂ ಕೌನ್ಸಿಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಿಸಾಲ್ದಾರ ರವರು ಖಂಡಿಸಿದ್ದಾರೆ.
ಜಮೀರ್ ಅಹಮ್ಮದ್ ರವರ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಂರ ಮನವೊಲಿಸಲು ಇಂತಹ ಹೇಳಿಕೆ ನೀಡಿದ್ದು ಸಮುದಾಯಕ್ಕೆ ವಂಚಿಸುವ ತಂತ್ರವಾಗಿದೆ ಎಂದು ಅವರು ಹೇಳಿದ್ದಾರೆ. ಬಿಜೆಪಿಗೆ ಮುಸ್ಲಿಂ ಸಮುದಾಯ ಓಟು ಹಾಕುವುದಿಲ್ಲ ಅವರು ಮುಸ್ಲಿಮರನ್ನು ಅಧಿಕಾರದಿಂದ ದೂರ ಇಡುವುದು ಸಾಮಾನ್ಯವಾಗಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಈ ಸಮುದಾಯ ವೋಟ್ ಹಾಕುತ್ತಾರೆ ಇವರೇನು ಮಾಡಿದರು ಸಾಚಾರ, ರಂಗನಾಥ್ ಮಿಶ್ರ ಹಲವರು ಆಯೋಗಗಳು ನೀಡಿದ ವರದಿಯನ್ನು ಏನು ಮಾಡಿದರು ಎಂಬುದು ದೇಶದ ಪ್ರಜ್ಞಾವಂತ ನಾಗರಿಕರಿಗೆ ಗೊತ್ತಿದೆ.
ಅದೇ ರೀತಿ ಈಗ ಕೆಪಿಸಿಸಿ ಹಾಗೂ ಇತರ ಮಹತ್ವದ ಕಾಂಗ್ರೆಸ್ ಪಕ್ಷ ಮುಸ್ಲಿಂ ನಾಯಕರಿಗೆ ಯಾವ ಸ್ಥಾನ ನೀಡಿದ್ದಾರೆ ಗೊತ್ತಿದೆ ಸಿದ್ದರಾಮಯ್ಯರವರ ಮುಸ್ಲಿಂ ರಕ್ತ ಎಂಬ ರಾಜಕೀಯ ಹೇಳಿಕೆ ಕೈಬಿಡಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
Be the first to comment