ಜಿಲ್ಲಾ ಸುದ್ದಿಗಳು
ಬಾಗಲಕೋಟೆ : ಹೊಸದಾಗಿ ಮತದಾರರ ನೊಂದಣಿ ಹಾಗೂ ಇತರೆ ಮಾಹಿತಿಗಾಗಿ ಕಚೇರಿಗೆ ಭೇಟಿ ನೀಡುವದನ್ನು ತಪ್ಪಿಸುವ ನಿಟ್ಟಿನಲ್ಲಿ ಭಾರತ ಚುನಾವಣೆ ಆಯೋಗವು ಮತದಾರರ ಸಹಾಯವಾಣಿ ಆ್ಯಪ್‍ನ್ನು ಅಭಿವೃದ್ದಿಪಡಿಸಿದೆ ಎಂದು ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ಕೆ ಭಾರತ ಚುನಾವಣಾ ಆಯೋಗವು ಹೊಸದಾಗಿ ಮೊಬೈಲ್ ಆ್ಯಪ್‍ನ್ನು ವಿನ್ಯಾಸಗೊಳಿಸಿದ್ದು, ಮತದಾರರು ಮತದಾನ ಮತ್ತು ಮತದಾನಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಮೊಬೈಲ್ ಆ್ಯಪ್ ಮೂಲಕ ಪಡೆಯಬಹುದಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನವೆಂಬರ 8 ರಿಂದ ಆರಂಭಗೊಳ್ಳಲಿದ್ದು, ಮತದಾರನಾಗಲು ಕಚೇರಿಗೆ ಭೇಟಿ ನೀಡುವದನ್ನು ತಪ್ಪಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಸಹಾಯವಾಣಿ ಆ್ಯಪ್ ಸಿದ್ದಪಡಿಸಿದೆ.
ಮತದಾನಕ್ಕೆ ಸಂಬಂಧಿಸಿದ ಸಂಬಂಧಿಸಿದ ಎಲ್ಲ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಮತ್ತು ದೋಷಗಳನ್ನು ತೆಗೆದು ಹಾಕಲು ಈ ಎಲ್ಲ ಕೆಲಸಗಳನ್ನು ಮನೆಯಲ್ಲಿಯೇ ಕುಳಿತು ಮಾಡಬಹುದಾಗಿದೆ. ಇದಕ್ಕಾಗಿ ಅಂಡ್ರಾಯ್ಡ ಮೊಬೈಲ್‍ನಲ್ಲಿ ಸಹಾಯವಾಣಿ ಆ್ಯಪ್‍ನ್ನು ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್‍ಲೋಡ್ ಮಾಡಿಕೊಳ್ಳುವ ಮೂಲಕ ಮತದಾರರ ಎಲ್ಲ ಸಮಸ್ಯೆಗಳನ್ನು ಮನೆಯಲ್ಲಿಯೇ ಕುಳಿತು ಪರಿಹರಿಸಲು ಇದು ಪರಿಣಾಮಕಾರಿಯಾಗಿದೆ. ಯಾರಾದರೂ ತಮ್ಮ ಹೆಸರನ್ನು ಒಂದು ಮತಕ್ಷೇತ್ರದಿಂದ ಮತ್ತೊಂದು ಮತಕ್ಷೇತ್ರಕ್ಕೆ ವರ್ಗಾಯಿಸಿಕೊಳ್ಳಬಹುದಾಗಿದೆ
ಯಾವುದೇ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಮಾಹಿತಿ ಮತ್ತು ಚುನಾವಣೆಯ ಫಲಿತಾಂಶಗಳನ್ನು ಮನೆಯಲ್ಲಿಯೇ ಕುಳಿತು ಮತದಾರರ ಸಹಾಯವಾಣಿ ಆ್ಯಪ್ ಮೂಲಕ ಪಡೆದುಕೊಳ್ಳಬಹುದಾಗಿದೆ. ದೇಶದಾದ್ಯಂತ ಮತದಾರರಿಗೆ ಒಂದೇ ಹಂತದ ಸೇವೆ ಮತ್ತು ಮಾಹಿತಿ ತಲುಪಿಸುವ ಉದ್ದೇಶ ಈ ಆ್ಯಪ್ ಹೊಂದಿದೆ.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಜನವರಿ 1, 2022ನ್ನು ಅರ್ಹತಾ ದಿನಾಂಕವನ್ನಾಗಿ ನಿಗದಿಗೊಳಿಸಿದ್ದು, ನವೆಂಬರ 8 ರಂದು ಕರುಡು ಮತದಾರರ ಪಟ್ಟಿ ಹೊರಡಿಸಲಾಗುತ್ತಿದೆ. ನವೆಂಬರ 8 ರಿಂದ ಡಿಸೆಂಬರ 8 ವರೆಗೆ ಹಕ್ಕು ಮತ್ತು ಆಕ್ಷೇಪಣೆ ಕೋರಿ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ನವೆಂಬರ 7, 14, 21 ಹಾಗೂ 28 ರಂದು ಮತದಾರರ ಪರಿಷ್ಕರಣೆ ನಿಮಿತ್ಯ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಡಿಸೆಂಬರ 27 ರೊಳಗಾಗಿ ಹಕ್ಕು ಮತ್ತು ಆಕ್ಷೇಪಣೆ ಕೋರಿ ಸ್ವೀಕೃತವಾದ ಅರ್ಜಿಗಳನ್ನು ತಂತ್ರಾಂಶದಲ್ಲಿ ವಿಲೇಗೊಳಿಸುವ ಮೂಲಕ ಜನವರಿ 13, 2022 ರಂದು ಅಂತಿಮ ಮತದಾರರ ಪಟ್ಟಿಯ ಪ್ರಕಟಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Be the first to comment