ರಾಜ್ಯ ಸುದ್ದಿಗಳು
ಬ್ಯಾಟರಾಯನಪುರ
ಪರಿಸರ ಸಂರಕ್ಷಣೆಯ ಮಹತ್ವದ ಉದ್ದೇಶದೊಂದಿಗೆ ವಾತಾವರಣದಲ್ಲಿ ಇಂಗಾಲದ ಪ್ರಮಾಣ ಇಳಿಕೆ ಮಾಡುವ ನಿಟ್ಟಿನಲ್ಲಿ ಲಾಗ್9 ಮೆಟೀರಿಯಲ್ಸ್ ಸಂಸ್ಥೆಯ ವತಿಯಿಂದ ಕ್ಷೇತ್ರದ ಜಕ್ಕೂರು ಮುಖ್ಯರಸ್ತೆಯಲ್ಲಿ ನಿರ್ಮಿಸಲಾಗಿದ್ದ ಮೊದಲ ಇನ್‌ಸ್ಟಾಚಾರ್ಜ್ ಕೇಂದ್ರವನ್ನು ಸಂಸ್ಥೆಯ ಸಂಸ್ಥಾಪಕ, ಸಿಇಒ ಡಾ. ಅಕ್ಷಯ್ ಸಿಂಘಾಲ್ ಗುರುವಾರ ಉದ್ಘಾಟಿಸಿದರು.ನಂತರ ಅವರು ಮಾತನಾಡಿ ಜವಾಬ್ದಾರಿಯುತ ವಿತರಣಾ ಚಳವಳಿ’ ಎಂಬ ಅಭಿಯಾನದ ಮೂಲಕ ನಗರದಲ್ಲಿಯೇ ಮೊದಲ ಇನ್‌ಸ್ಟಾಚಾರ್ಜ್ ಕೇಂದ್ರವನ್ನು ಇಲ್ಲಿ ಆರಂಭಿಸಿದ್ದು, ಈ ಕೇಂದ್ರದಲ್ಲಿ ಇನ್‌ಸ್ಟಾ ಚಾರ್ಜ್ ಬ್ಯಾಟರಿಗಳಿಂದ ಚಲಿಸುವ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ತ್ವರಿತವಾಗಿ ಚಾರ್ಜ್ ಮಾಡುವ ಪಾಯಿಂಟ್‌ಗಳಿದ್ದು, ಇವುಗಳಲ್ಲಿ ಕೇವಲ 15 ನಿಮಿಷಗಳ ಕಾಲ ವಾಹನವನ್ನು ಚಾರ್ಜಿಂಗ್ ಮಾಡಿದರೆ ಸುಮಾರು 70ರಿಂದ 80 ಕಿ.ಮೀ.ಗಳಷ್ಟು ಕ್ರಮಿಸಬಹುದಾದಷ್ಟು ಕ್ಷಮತೆಯ ಚಾರ್ಜಿಂಗ್ ಲಭಿಸಲಿದೆ. ಇದಕ್ಕೆ ತಗಲುವ ವೆಚ್ಚ ಕೇವಲ 20 ರು.ಗಳಿರುತ್ತದೆ. ಪೆಟ್ರೋಲ್ ಬೆಲೆ ಗಗನಕ್ಕೇರಿರುವ ಈ ದಿನಗಳಲ್ಲಿ ಇದೊಂದು ರೀತಿಯ ವರದಾನವಾಗಬಲ್ಲ ಎಲ್ಲಾ ಅವಕಾಶಗಳಿವೆ.
ಲಾಗ್9 ಸಂಸ್ಥೆಯು ನವೀನ ತಂತ್ರಜ್ಞಾನ ಮತ್ತು 2ವ್ಯಾ. ಇನ್‌ಸ್ಟಾಚಾರ್ಜ್ ಬ್ಯಾಟರಿಗಳ ಸಂಯೋಜನೆಯೊಂದಿಗೆ ಸಿದ್ಧಗೊಂಡಿರುವ ಅತ್ಯಾಧುನಿಕ ಎಲೆಕ್ಟ್ರಿಕಲ್ ವಾಹನಗಳ ಬ್ಯಾಟರಿ ಮತ್ತು ಇಂಧನ ಸಂಗ್ರಹ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿರುವ ಜವಾಬ್ದಾರಿಯುತ ಸಂಸ್ಥೆಯಾಗಿದ್ದು, ಕಡಿಮೆ ದರದಲ್ಲಿ ಹೆಚ್ಚು ಸಂಚರಿಸಲು ಅವಕಾಶ ಕಲ್ಪಿಸಿಕೊಡುವ ಉದ್ದೇಶದೊಂದಿಗೆ ಇನ್‌ಸ್ಟಾಚಾರ್ಜ್ ಕೇಂದ್ರವನ್ನು ಆರಂಭಿಸಿದೆ. ಈ ತಂತ್ರಜ್ಞಾನವನ್ನು ಭಾರತದ ಮಾರುಕಟ್ಟೆಗೆ ಹೇಗೆ ತರುತ್ತಿದ್ದೇವೆ ಎಂಬುದನ್ನು ಪ್ರದರ್ಶನ ವಾಹನದೊಂದಿಗೆ ಪ್ರದರ್ಶಿಸಲಾಗುತ್ತಿದೆ.
ಲಾಗ್9 ಬ್ಯಾಟರಿಗಳ ಕಾರ್ಯಕ್ಷಮತೆ ಏಕ ರೀತಿಯಲ್ಲಿದ್ದು, ಭಾರತದ ಎಲ್ಲ ಕಡೆಗಳಲ್ಲೂ ಲಭ್ಯವಿರುತ್ತದೆ. ಗ್ರಾಹಕರ ಸಹಭಾಗಿತ್ವಕ್ಕಾಗಿ ಈ ಅವಕಾಶ ನೀಡಲಾಗಿದ್ದು, ಈ ಮೂಲಕ ಗ್ರಾಹಕರು ಜವಾಬ್ದಾರಿಯುತ ವಿತರಣಾ ಚಳವಳಿಯ ಭಾಗವಾಗಲಿದ್ದಾರೆ. ತಂತ್ರಜ್ಞಾನದ ಸಂಪೂರ್ಣ ಮಾಹಿತಿ ನೀಡಿದ ಬಳಿಕ ಹಾಗೂ ಚಾರ್ಜಿಂಗ್ ಪಾಯಿಂಟ್‌ಗಳ ಮೂಲ ಸೌಲಭ್ಯವನ್ನು ದೇಶಾದ್ಯಂತ ಅಭಿವೃದ್ಧಿಪಡಿಸಿದ ನಂತರ ಚಾಲಕರು ಮತ್ತು ವಿತರಣಾ ಪ್ರತಿನಿಧಿಗಳು ಸಹ ಸ್ವಾಭಾವಿಕವಾಗಿಯೇ ಜವಾಬ್ದಾರಿಯುತ ವಿತರಣೆ ವ್ಯವಸ್ಥೆಯ ಭಾಗವಾಗಲಿದ್ದಾರೆ. ಜವಾಬ್ದಾರಿಯುತ ವಿತರಣಾ ಚಳವಳಿಯು ಭವಿಷ್ಯವನ್ನು ಉಜ್ವಲಗೊಳಿಸುವ ಒಂದು ಪರಿಸರ ಸ್ನೇಹಿ ಚಳವಳಿಯಾಗಿದ್ದು, ವಾತಾವರಣದಲ್ಲಿ ಹೆಚ್ಚುತ್ತಿರುವ ಇಂಗಾಲದ ಪ್ರಮಾಣವನ್ನು ಇಳಿಸಲು ಎಲೆಕ್ಟ್ರಿಕ್ ವಾಹನಗಳ ಬಳಕೆ ಇಂದಿನ ಅನಿವಾರ್ಯವಾಗಿದ್ದು, ಬ್ಯಾಟರಿ ಬಾಳಿಕೆ ವ್ಯಾಪ್ತಿಯ ಆತಂಕದಿಂದದಾಗಿ ಸದ್ಯಕ್ಕೆ ಭಾರತದ ವಾಣಿಜ್ಯ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳು ಅಷ್ಟಾಗಿ ಚಾಲ್ತಿಯಲ್ಲಿಲ್ಲ. ಆದರೆ ಲಾಗ್9 ರ್‍ಯಾಪಿಡ್ ಎಕ್ಸ್ ಬ್ಯಾಟರಿ ಪ್ಯಾಕ್‌ಗಳು ಕೇವಲ 15 ನಿಮಿಷಗಳಲ್ಲಿ 0 ಯಿಂದ 100 ರವರೆಗೂ ಚಾರ್ಜ್ ಆಗುತ್ತವೆ. ಭಾರತದ ಕಠಿಣ ಹವಾಮಾನ ಹಾಗೂ ರಸ್ತೆ ಸ್ಥಿತಿಯನ್ನು ತಾಳಿಕೊಳ್ಳುವಂತೆ ಅವುಗಳನ್ನು ವಿನ್ಯಾಸಗೊಳಿಸಲಾಗಿದೆ. ಆತಂಕವಿಲ್ಲದೆ ಆರಾಮದಾಯಕ ಸವಾರಿಯನ್ನು ಅನುಭವಿಸಬಹುದು ಎಂದು ಸಂಸ್ಥೆಯ ಗುರಿ ಮತ್ತು ಧ್ಯೇಯ ಕುರಿತು ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ಲಾಗ್9 ಸಂಸ್ಥೆಯ ಸಹ ಸಂಸ್ಥಾಪಕ ಕಾರ್ತೀಕ್ ಹಜೇಲಾ, ಅಂತಾರಾಷ್ಟ್ರೀಯ ಪ್ರೇರಕ ಭಾಷಣಕಾರ, ಲೇಖಕ ಡಾ.ಪವನ್ ಅಗರ್‌ವಾಲ್ ಸೇರಿದಂತೆ ಇನ್ನಿತರರಿದ್ದರು.
Be the first to comment