ಬಾಗಲಕೋಟೆ:(ಗುಡೂರ) ಇಳಕಲ್ಲ ತಾಲೂಕಿನ ಗುಡೂರ ಎಸ್ ಸಿ ಗ್ರಾಮದ ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘದ ಪ್ರಧಾನ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘದ ಸನ್ ೨೦೨೦-೨೧ ನೇ ಸಾಲಿನ ಸರ್ವ ಸಾಧಾರಣ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎನ್ ಎಚ್ ಆವಿನ ಅವರು ಗ್ರಾಹಕರು ಬ್ಯಾಂಕಿನ ಜೀವಾಳವಾಗಿದ್ದು. ಸೂಕ್ತವಾದ ಸಮಯದಲ್ಲಿ ಸಾಲವನ್ನು ಮರುಪಾವತಿ ಮಾಡಬೇಕು ಇದರಿಂದ ಸಂಘದ ಅಭಿವೃದ್ಧಿಯಾಗುತ್ತದೆ ಮತ್ತು ಠೇವಣಿದಾರರ ಠೇವಣಿ ಹಣವನ್ನು ನೀಡಲು ಸುಲಭವಾಗುತ್ತದೆ ಎಂದು ಹೇಳಿದರು.
ಗ್ರಾಹಕರು ಬ್ಯಾಂಕಿನಿಂದ ಪಡೆದ ಸಾಲವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು ಅಲ್ಲದೇ ಸೂಕ್ತ ಸಮಯದಲ್ಲಿ ಮರಳಿ ಪಾವತಿಸಬೇಕು ಎಂದು ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್ ಎಚ್ ಆವಿನ ತಿಳಿಸಿದರು.
ಶಾಖಾ ವ್ಯವಸ್ಥಾಪಕರಾದ ಕಿರಣ ಕಳಸಾ ಸಂಘದ ೨೦೨೦-೨೧ ರ ವಾರ್ಷಿಕ ವರದಿಯನ್ನು ಓದಿದರು. ಸಂಘದ ವತಿಯಿಂದ ರಚಿಸಲ್ಪಟ್ಟ ೨೦೨೨ ರ ಕ್ಯಾಲೆಂಡರಗಳನ್ನು ಬಸವರಾಜ ಅಂಟರದಾನಿ ಗ್ರಾಹಕರಿಗೆ ನೀಡಿದರು. ಮತ್ತು ಸಂಘದ ಉತ್ತಮ ಗ್ರಾಹಕರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಯ ಶಿವಪುತ್ರಪ್ಪ ಕಲಾದಗಿ ನಿರ್ದೇಶಕರಾದ ಗಣೇಶ ಕುರುಬರ ಫಕೀರಪ್ಪ ಕುರಿ ನೀಲನಗೌಡ ಗೌಡರ ಹುಲ್ಲಪ್ಪ ಬೆಳ್ಳಿ ಹನಮನಗೌಡ ಗೌಡರ ಮಲ್ಲಿಕಾರ್ಜುನ ಸೂಡಿ ದೇವಕ್ಕೆವ್ವ ಕೆಲೂರ ಮಹಾದೇವಿ ಬಾಗಲಿ ಬಸವರಾಜ ಮ್ಯಾಗೇರಿ ಹನಮಂತ ಹೆಬ್ಬಳ್ಳಿ ಚಂದಪ್ಪ ಮಾದರ ಹಾಗೂ ಮುಖ್ಯ ಅತಿಥಿಗಳಾದ ಬಸವರಾಜ ರೋಣದ ಮಲ್ಲಿಕಾರ್ಜುನ ವಸ್ತ್ರದ ತಿಪ್ಪಣ್ಣ ತಿಪ್ಪನ್ನವರ ಮೋಹನಸಾ ಬಸವಾ ನಿಂಗಯ್ಯ ಓಡಿಯರ ಎಸ್ ಎಮ್ ಪೂಜಾರ ಹಾಜರಿದ್ದರು.
ನಿಂಗಪ್ಪ ಮಾರೆನ್ನವರ ಪ್ರಾರ್ಥಿಸಿದರು ಶ್ರೀಕಾಂತ ಆವಿನ ನಿರೂಪಿಸಿದರು. ಪ್ರಧಾನ ವ್ಯವಸ್ಥಾಪಕ ಎನ್ ಬಿ ಚಿತ್ತರಗಿ, ಎಚ್ ಎನ್ ಆವಿನ, ಚಿದಾನಂದ ಕಳಸಾ, ಸೋಮನಗೌಡ ಗೌಡರ, ಬಸವರಾಜ ಎಮ್ಮಿ, ಮಲ್ಲಿಕಾರ್ಜುನ ಯರಗೇರಿ, ಶರಣು ಮರಡಿ, ರವಿ ವಾಲ್ಮೀಕಿ, ಆನಂದ ಕಂಠಿ, ಗಣಪತಿ ದಾನಿ ಸೇರಿದಂತೆ ಸಂಘದ ಗ್ರಾಹಕರು ಸದಸ್ಯರು ಸಾರ್ವಜನಿಕರು ಹಾಗೂ ಇತರರಿದ್ದರು.
Be the first to comment