ರಾಜ್ಯ ಸುದ್ದಿಗಳು
ಕಾರವಾರ
ಹೊನ್ನಾವರದಲ್ಲಿ ಮೇ 7 ರಂದು ಜರುಗಲಿರುವ ಅರಣ್ಯವಾಸಿಗಳನ್ನ ಉಳಿಸಿ ಬೃಹತ್- ರ‍್ಯಾಲಿಗೆ ಕಾರವಾರ ತಾಲೂಕಿನ ಅತೀಕ್ರಮಣದಾರರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಅರಣ್ಯ ಭೂಮಿ ಹಕ್ಕಿಗಾಗಿ ಹಕ್ಕೊತ್ತಾಯ ಮಾಡಲಾಗುವುದೆಂದು ಸಭೆಯಲ್ಲಿ ಅತೀಕ್ರಮಣದಾರರು ತೀರ್ಮಾನಿಸಿದರು.ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಕಾರವಾರದ ಪತ್ರಿಕಾ ಭವನದ ಸಭಾಂಗಣದಲ್ಲಿ ಜರುಗಿದ ಬೃಹತ್ ಅರಣ್ಯ ಅತೀಕ್ರಮಣದಾರರ ಸಭೆಯಲ್ಲಿ ಮೇಲಿನಂತೆ ತೀರ್ಮಾನಿಸಲಾಯಿತು.
ಅರಣ್ಯ ಭೂಮಿ ಹಕ್ಕಿಗಾಗಿ ನಿರಂತರ ಹೋರಾಟ, ಅರಣ್ಯ ಸಿಬ್ಬಂದಿಗಳ ದೌರ್ಜನ್ಯವನ್ನು ಖಂಡಿಸುವುದು, ಅತೀ ಶೀಘ್ರದಲ್ಲಿ ಅರಣ್ಯ ಹಕ್ಕು ಕಾಯಿದೆಯಲ್ಲಿ ಮಂಜೂರಿ ಪ್ರಕ್ರೀಯೆಗೆ ಒತ್ತಾಯಿಸುವುದು ಹಾಗೂ ಹಕ್ಕಿಗಾಗಿ ಸಾಂಘೀಕ ಮತ್ತು ಕಾನೂನಾತ್ಮಕ ಹೋರಾಟ ಮುಂದುವರೆಸಲು ತೀರ್ಮಾನಿಸಲಾಯಿತು.ಸಭೆಯಲ್ಲಿ ಕುಮಟ ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ, ಅಂಕೋಲಾ ತಾಲೂಕ ಅಧ್ಯಕ್ಷ ರಮಾನಂದ ನಾಯ್ಕ ಅಚಿವೆ, ವಿಲ್ಸನ್ ಕಾರವಾರ, ರಘುನಾಥ ವೈಂಗನಕರ್, ಉಲ್ಲಾಸ ಗ್ರಾಮ ಪಂಚಾಯತ ಅಧ್ಯಕ್ಷ, ರಾಜೇಶ ಗೌಡ ದೇವಳಮಕ್ಕ ಮುಂತಾದವರು ಉಪಸ್ಥಿತರಿದ್ದರು.
Be the first to comment