ಜಿಲ್ಲಾ ಸುದ್ದಿಗಳು
ಮಸ್ಕಿ
ಪಟ್ಟಣದ ತಾಲೂಕ ಪಂಚಾಯತ್ ಕಾರ್ಯಾಲಯ ಕಚೇರಿಯ ಮುಂದೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರಣಾಂತಗಳಿಂದ ಗೈರಾಗಿದ್ದ ಕಾರಣ ಇವರ ಪರವಾಗಿ ಸಹಾಯಕ ನಿರ್ದೇಶಕರಿಗೆ ಮನವಿ ನೀಡಿದರು.ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಹಳ್ಳಿಗಳಲ್ಲಿನ ಸಿಬ್ಬಂದಿಗಳಾದ ಸ್ವೀಪರ್, ವಾಟರ್ ಮ್ಯಾನ್, ಕಚೇರಿ ಸಹಾಯಕ, ಬಿಲ್ ಕಲೆಕ್ಟರ್/ಗುಮಾಸ್ತ ಇತ್ಯಾದಿ ಸಿಬ್ಬಂದಿ ಪ್ರತಿದಿನ ರಾಜ್ಯದ 6024 ಗ್ರಾಮ ಪಂಚಾಯಿತಿಗಳಲ್ಲಿ 15ನೇ ಹಣಕಾಸು, ಹಾಗೂ ಎಸ್ ಕ್ರೋ, ಗ್ರಾಮ ಪಂಚಾಯತ್ ಸ್ವಂತ ಸಂಪನ್ಮೂಲದಿಂದ ಸಿಬ್ಬಂದಿಗಳಿಗೆ ವೇತನ ನೀಡಲು ದಿನಾಂಕ:- 25/11/2021 ರಂದು ಆದೇಶ ಮಾಡಿದ್ದರೂ ಈ ಅನುದಾನ ಗಳಿಂದ ಸಾಕಷ್ಟು ಗ್ರಾಮಪಂಚಾಯಿತಿಗಳಲ್ಲಿ ವೇತನ ಪಾವತಿ ಮಾಡದಿರುವ ಕಾರಣ ಸಿಬ್ಬಂದಿಗಳಿಗೆ
8 ರಿಂದ 15 ತಿಂಗಳು ವೇತನ ಸಿಗದೆ ಜೀವನಕ್ಕೆ ಬಹಳ ತೊಂದರೆಯಾಗಿದೆ. ತಕ್ಷಣ ವೇತನ ನೀಡಬೇಕು ಉಲ್ಲೇಖದ ಆದೇಶದ ಪತ್ರದ ಪ್ರಕಾರ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ವೇತನ ನೀಡಿರುವುದಿಲ್ಲ. ಉಲ್ಲೇಖ (2)ರಂತೆ ನಾವುಗಳು ಅರ್ಜಿ ಸಲ್ಲಿಸಿದ್ದು ಇರುತ್ತದೆ. ಇದಕ್ಕೆ ತಮ್ಮ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿರುವುದಿಲ್ಲ. ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ರಾಯಚೂರು ನಗರ ವಿಡಿಯೋಕಾನ್ ಫ್ರೆಂಡ್ಸ್ ಮೂಲಕ ಎಲ್ಲಾ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ವೇತನ ಪಾವತಿಸಬೇಕೆಂದು ಮೌಖಿಕವಾಗಿ ಹೇಳಿದರು ಮತ್ತು ಆದೇಶ ಮಾಡಿದರೂ ಇದುವರೆಗೂ ಮಸ್ಕಿ ತಾಲೂಕಿನ ಯಾವುದೇ ಗ್ರಾಮ ಪಂಚಾಯತ್ ನೌಕರರಿಗೆ ವೇತನ ಪಾವತಿ ಆಗಿರುವುದಿಲ್ಲ. ಆದಕಾರಣ ಮಸ್ಕಿ ತಾಲೂಕಿನ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶ ಮಾಡಲು ಮನವಿ ಪತ್ರದ ಮೂಲಕ ಮತ್ತೊಮ್ಮೆ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಒಂದು ವೇಳೆ ವೇತನವನ್ನು ಒಂದು ವಾರದಲ್ಲಿ ಪಾವತಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ನಾವು ಅನಿರ್ದಿಷ್ಟ ಹೋರಾಟವನ್ನು ತಾಲೂಕ ಪಂಚಾಯತ್ ಕಾರ್ಯಾಲಯದ ಮುಂದೆ ಹಮ್ಮಿಕೊಳ್ಳಲಾಗುತ್ತದೆ ಎಂದು ತಾಲೂಕ ಪಂಚಾಯತ ಸಹಾಯಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮೌನೇಶ್ ಮಟ್ಟೂರು ಅಧ್ಯಕ್ಷರು ಕ.ರಾ.ಗ್ರಾ. ಪಂ. ನೌಕರರ ಸಂಘ ಮಸ್ಕಿ, ಷಣ್ಮುಖಪ್ಪ ಬೆಳ್ಳಿಗನೂರು ಪ್ರಧಾನ ಕಾರ್ಯದರ್ಶಿ ಕ.ರಾ.ಗ್ರಾ. ಪಂ. ನೌಕರರ ಸಂಘ ಮಸ್ಕಿ, ಶಿವರಾಜ ಸ್ವಾಮಿ ಮಲ್ಕಾಪುರ ಖಜಾಂಚಿ ಕ.ರಾ.ಗ್ರಾ. ಪಂ. ನೌಕರರ ಸಂಘ ಮಸ್ಕಿ, ತೋಮಸ್.ಡಿ ಮಸ್ಕಿ ಕರವಸೂಲಿಗಾರರು ಗ್ರಾ.ಪಂ ಹಾಲಾಪೂರ, ಅಮರೇಗೌಡ ಉದ್ಬಾಳ ಯು, ತಿರುಪತಿ, ರಾಜಸಾಬ್, ವೀರೇಶ್ ಕರವಸೂಲಿಗಾರರು ಗ್ರಾ.ಪಂ ಮೆದಿಕಿನಾಳ, ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
Be the first to comment