ಜಿಲ್ಲಾ ಸುದ್ದಿ
ಹೊನ್ನಾವರ :ಪ್ರಕರಣ ದಾಖಲಾದ ಒಂದೇ ದಿನದಲ್ಲಿ ಮನೆಗಳವು ಆರೋಪಿಯನ್ನು ಬಂಧಿಸಿ, ಕಳುವಾಗಿದ್ದ ಆಭರಣಗಳನ್ನು ಪೊಲೀಸರು ಜಪ್ತಿ ಮಾಡಿಸಿಕೊಂಡಿದ್ದಾರೆ . ತಾಲೂಕಿನ ಕಕ್ಕಿ ತೋಪಲಕೇರಿ ಕೃಷ್ಣ ಪಟಗಾರ್ ಅವರು ಮೇ 2 ರಂದು ತಮ್ಮ ಮನೆಯಲ್ಲಿದ್ದ ಚಿನ್ನದ ನಕ್ಲೇಸ್ , 10,ಸಾವಿರ ರೂಪಾಯಿ ಕಳೆದುಕೊಂಡಿದ್ದರು. ಈ ಬಗ್ಗೆ ಒಂದು ತಿಂಗಳ ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪ್ರಕರಣ ದಾಖಲಾದ ಒಂದೇ ದಿನದೊಳಗೆ ಆರೋಪಿಯನ್ನು ಹಾವೇರಿಯ, ಹಾನಗಲ್ ತಾಲೂಕಿನ ಹೇರೂರು ನಿವಾಸಿಯಾದ ಸಚಿನ್ ರಾಮಪುರ ನನ್ನು ಪತ್ತೆಹಚ್ಚಿ ದಸ್ತಗಿರಿ ಮಾಡಿ ,ಆರೋಪಿ ಯಿಂದ 18ಗ್ರಾಂ ತೂಕದ , ಅಂದಾಜು 82 ಸಾವಿರ ರೂಪಾಯಿ ಮೌಲ್ಯದ ಚಿನ್ನದ ನಕ್ಲೇಸ್ ಪಡಿಸಿಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಕೃಷ್ಣ ಪಟಗಾರ ಅವರ ಮನೆಯ ಗಾರೆ ಕೆಲಸಕ್ಕಾಗಿ ಏಪ್ರಿಲ್ ನಲ್ಲಿ ಆರೋಪಿ ಸಚಿನ್ ಬಂದಿದ್ದ ಎನ್ನಲಾಗಿದೆ. ಗಾರೆ ಕೆಲಸ ಮಾಡುತ್ತಿದ್ದ ಸಮಯದಲ್ಲಿ ರಾಜ್ಯದಲ್ಲಿ ಕೊರೊನಾ ಸಂಬಂಧಿತ ಲಾಕ್ ಡೌನ್ ಜಾರಿಯಾದ ಕಾರಣ ಊರಿಗೆ ಹಿಂತಿರುಗಲು ಸಾಧ್ಯವಾಗದಿದ್ದಾಗ, ಕೃಷ್ಣ ಪಟಗಾರ ಕುಟುಂಬದವರು ಮಾನವೀಯತೆ ದೃಷ್ಟಿಯಿಂದ ತಮ್ಮ ಮನೆಯಲ್ಲಿಯೇ ಆಶ್ರಯ ಕೊಟ್ಟು ಊಟ-ತಿಂಡಿ ನೀಡಿದ್ದರು. ಆದರೆ ಮೇ ತಿಂಗಳ ಮೊದಲ ವಾರದಲ್ಲಿ ಈಗ ಇದ್ದಕ್ಕಿದ್ದಂತೆ ಮನೆಯವರು ಪೊಲೀಸ್ ದೂರು ದಾಖಲಿಸಲು ಹಿಂದೇಟು ಹಾಕಿದರು ಒಂದು ತಿಂಗಳಾದರೂ ಕಳುವಾದ ವಸ್ತು ಸಿಗದ ಹಿನ್ನೆಲೆಯಲ್ಲಿ ಕೊನೆಗೆ ವಿಧಿಯಿಲ್ಲದೆ ದೂರು ನೀಡಿದ್ದರು.
ಸದ್ಯ ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಡಿವೈಎಸ್ಪಿ ಬೆಳ್ಳಿಯಪ್ಪ ಕೆ .ಯು ಅವರ ಮಾರ್ಗದರ್ಶನದಲ್ಲಿ ಸಿ.ಪಿ.ಐ ಶ್ರೀಧರ್ ಎಸ್.ಆರ್ ನೇತೃತ್ವದಲ್ಲಿ ಪಿ.ಎಸ್.ಐ ಗಳಾದ ಸಾವಿತ್ರಿ ನಾಯಕ್ ಶಶಿಕುಮಾರ್ ಮಹಾಂತೇಶ್ ನಾಯಕ , ಶಾಂತಿನಾಥ್ ಹಾಗೂ ಸಿಬ್ಬಂದಿ ರಮೇಶ್ ಲಮಾಣಿ ,ಕೃಷ್ಣಗೌಡ, ಮಹಾವೀರ್, ರಯಿಸ್ ಭಗವಾನ್ ಕಾರ್ಯಾಚರಣೆ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅಭಿನಂದಿಸಿದ್ದಾರೆ.
Be the first to comment