ಅರ್ಹ ಫಲಾನುಭವಿಗಳಿಗೆ ಪರಿಹಾರ ನಿಧಿ ಚೆಕ್ ವಿತರಿಸಿದ ಸಚಿವ ಹೆಬ್ಬಾರ್

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿ 

CHETAN KENDULI

ಯಲ್ಲಾಪುರ: ಅರ್ಹ ಫಲಾನುಭವಿಗಳಿಗೆ ವಿಕೋಪ ಪರಿಹಾರ ನಿಧಿಯಡಿ ಮಂಜೂರಿಯಾದ ಚೆಕ್‍ನ್ನು ಕಾರ್ಮಿಕ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಶಿವರಾಮ ಹೆಬ್ಬಾರ ವಿತರಿಸಿದರು.ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೊನ್ನಗದ್ದೆ ಶ್ರೀ ವೀರಭದ್ರೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ ಸುಮಾರು 5 ಲಕ್ಷ ರೂಪಾಯಿ ಚೆಕ್ ವಿತರಿಸಿದರು. ಪ್ರಕೃತಿ ವಿಕೋಪದಿಂದ ಜಾನುವಾರ ಹಾನಿಯಾದ ಸಂತೃಸ್ಥ ನರಸಿಂಹ ವಿಶ್ವೇಶ್ವರ ಭಟ್ ಅವರಿಗೆ 30000 ಸಾವಿರಗಳ ಚೆಕ್ ಹಾಗೂ ಮಳೆಗಾಳಿಯಿಂದಾಗಿ ಹಾನಿಗೊಳಗಾದ ಜೈನಬಿ ಅಲ್ಲಾಬಕ್ಷ ಶೇಖ್ ಉದ್ಯಮನಗರ ಹಾಗೂ ಮಹಾಬಲೇಶ್ವರ ಗಾಗು ನಾಯ್ಕ ನೂತನ ನಗರ ಅವರಿಗೆ ತಲಾ 95,100 ರೂಪಾಯಿಗಳ ಪರಿಹಾರ ಧನದ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ಯುವ ನಾಯಕ ವಿವೇಕ್ ಹೆಬ್ಬಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಫಲಾನುಭವಿಗಳು ಹಾಜರಿದ್ದರು.

Be the first to comment

Leave a Reply

Your email address will not be published.


*