ಕಾಂಗ್ರೆಸ್ ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವ ಏಕೈಕ ಪಕ್ಷ  – ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಕಾಂಗ್ರೆಸ್ ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವ ಏಕೈಕ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷ ಸಂಘಟನೆಯಿಂದ ಮುಂದಿನ ಚುನಾವಣೆಗಳಲ್ಲಿ ಅಧಿಕ ಮತಗಳನ್ನು ಪಡೆದು ರಾಜ್ಯ ಮತ್ತು ಕೇಂದ್ರದಲ್ಲಿ ಮತ್ತೇ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ ತಿಳಿಸಿದರು. ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾಧ್ಯಕ್ಷ ಕೆ.ಆರ್.ನಾಗೇಶ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ “ಬೆಂಗಳೂರು ಗ್ರಾಮಾಂತರ ಯುವ ಕಾಂಗ್ರೆಸ್ ಕಾರ್ಯಕರಣಿ ಸಭೆ”ಯಲ್ಲಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಮಹಿಳೆಯರಿಗೆ ಕುಟುಂಬದ ಆಸ್ತಿಯಲ್ಲಿ ಅರ್ಧ ಭಾಗ ಕೊಡುವಂತಹದ್ದು, ಇಡೀ ರಾಷ್ಟ್ರದ ಮಹಿಳೆಯರಿಗೆ ಕುಟುಂಬದ ಆಸ್ತಿಯಲ್ಲಿ ಅರ್ಧ ಭಾಗ ಕೊಡಬೇಕು ಎಂಬುವುದನ್ನು ನಾನು ಕಾನೂನು ಮಂತ್ರಿಯಾಗಿದ್ದಾಗ ಮಾಡಿದ್ದೇನೆ. ನನ್ನ ಅಧಿಕಾರವಧಿಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವನ್ನು ನೀಡುವ ನಿಟ್ಟಿನಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಅದು ಕರ್ನಾಟಕ ರಾಜ್ಯದಲ್ಲಿ. ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಡ್ಡಾಯಗೊಳಿಸಿದ್ದು ಮೊಟ್ಟಮೊದಲು ಕರ್ನಾಟಕದಲ್ಲಿ, ಹೀಗೆ ಹಲವಾರು ಯಶಸ್ವಿ ಕಾರ್ಯಕ್ರಮಗಳನ್ನು ಮಾಡಿದ್ದೇನೆ ಎಂದು ಸಭೆಯ ಗಮನಕ್ಕೆ ತಂದರು. 

CHETAN KENDULI

ಸದಸ್ಯತ್ವದಲ್ಲಿ ಮೀಸಲಾತಿ ಇದ್ದರೂ ಸಹ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಗ್ರಾಪಂ, ಪುರಸಭೆಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರನ್ನಾಗಿಸುವಂತೆ ಮಾಡಲಾಗಿತ್ತು. ಸೋನಿಯ ಗಾಂಧೀಯವರು ಶೇ.೩೩% ಮೀಸಲಾತಿಯನ್ನು ಮಹಿಳೆಯರಿಗೆ ನೀಡಲಾಗಿತ್ತು. ನಾನು ಕಾನೂನು ಮಂತ್ರಿಯಾಗಿದ್ದಾಗ ಸೋನಿಯ ಗಾಂಧಿಯವರೊಂದಿಗೆ ಚರ್ಚಿಸಿ ಶೇ.೫೦%ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಲಾಗಿತ್ತು. ಕಾಂಗ್ರೆಸ್ ಎಲ್ಲವನ್ನು ಅಭಿವೃದ್ಧಿಗೊಳಿಸಿದೆ. ಪಿಣ್ಯದಲ್ಲಿ ಲಕ್ಷಾಂತರ ಕೆಲಸ ಮಾಡುವ ಕೈಗಾರಿಕಾ ವಲಯವನ್ನು ಪ್ರಾರಂಭಿಸಿದ್ದು ನಾನು ಸಣ್ಣ ಕೈಗಾರಿಕೆ, ಸಣ್ಣ ಮಂತ್ರಿಯಾಗಿದ್ದಾಗ ಸಾಧ್ಯವಾಯಿತು. ಕರ್ನಾಟಕ ಇಡೀ ದೇಶದಲ್ಲಿ ಸಿಲಿಕಾನ್ ವ್ಯಾಲಿ ಆಫ್ ದಿ ಕಂಟ್ರಿ ಎಂದೇ ಖ್ಯಾತಿಯಾಗಿದೆ ಎಂದು ಮಾಹಿತಿ ನೀಡಿದರು. 

ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ನಾಗೇಶ್ ಮಾತನಾಡಿ, ಯುವ ಕಾಂಗ್ರೆಸ್‌ಗೆ ತುಂಬ ಯುವ ಹೊಸ ಮುಖಗಳು ಬಂದಿರುವುದು ಸ್ವಾಗತಾರ್ಹ, ಯುವ ಕಾಂಗ್ರೆಸ್‌ಗೆ ಸದಸ್ಯರಾಗಲೂ ಅಭಿಯಾನವನ್ನು ವರಿಷ್ಠರು ಜವಾಬ್ದಾರಿ ನೀಡಿದ್ದಾರೆ. ನಮ್ಮ ಗ್ರಾಮಾಂತರ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್‌ಗೆ ಬಂದು ೯ ವರ್ಷವಾಗಿದೆ. ಈ ಮಟ್ಟದಲ್ಲಿ ಗುರ್ತಿಸಿ ರಾಜಕಾರಣದಲ್ಲಿ ಬೆಳೆಯಲು ಮಾಜಿ ಮುಖ್ಯಮಂತ್ರಿಗಳ ಪ್ರೇರಣೆ ಇದೆ. ನಾನು ಒಂದು ಗ್ರಾಪಂನಲ್ಲಿ ೨೬ ಸದಸ್ಯರ ಪೈಕಿ ಅತೀ ಕಡಿಮೆ ವಯಸ್ಸಿನವನಾಗಿದ್ದ ನನಗೆ ಅಧ್ಯಕ್ಷರ ಸ್ಥಾನ ಸಿಕ್ಕಿದೆ ಎಂದರೆ ಅದು ನಾನು ಯುವಕಾಂಗ್ರೆಸ್‌ನಲ್ಲಿ ಕೆಲಸ ಮಾಡಿದ್ದರಿಂದ ವರಿಷ್ಠರು ನಮ್ಮನ್ನು ಗುರ್ತಿಸುತ್ತಾರೆ. ಎಲ್ಲರಿಗೂ ಅವಕಾಶ ಸಿಕ್ಕೆ ಸಿಗುತ್ತೆ ಶ್ರಮವಹಿಸಬೇಕಷ್ಟೆ ಎಂದು ಉರಿದುಂಬಿಸಿದರು. 

ಈ ವೇಳೆಯಲ್ಲಿ ಕಾರ್ಯಕ್ರಮದಲ್ಲಿ ಯುವಕಾಂಗ್ರೆಸ್‌ಗೆ ಜೊತೆಗೂಡಿ ಬ್ಲಾಕ್ ಕಾಂಗ್ರೆಸ್‌ನ ಹಿರಿಯ ಮುಖಂಡರು, ಪದಾಧಿಕಾರಿಗಳು ಪಾಲ್ಗೊಂಡು ಸಭೆಗೆ ಮತ್ತಷ್ಟು ಬಲತುಂಬಿದರು. ಈ ವೇಳೆ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂದೀಪ್, ಕಾರ್ಯದರ್ಶಿ ಶ್ರೀಜಿತ್, ತಾಲೂಕು ಅಧ್ಯಕ್ಷ ಆರ್.ಸುಮಂತ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪ್ರಸನ್ನಕುಮಾರ್, ಕೆಪಿಸಿಸಿ ಸದಸ್ಯ ಚೇತನ್‌ಗೌಡ, ಖಾದಿಬೋರ್ಡ್ ಅಧ್ಯಕ್ಷ ನಾಗೇಗೌಡ, ತಾಪಂ ಮಾಜಿ ಸದಸ್ಯ ಲಕ್ಷ್ಮಣ್, ಕಾರಹಳ್ಳಿ ಗ್ರಾಪಂ ಸದಸ್ಯ ಜಯರಾಮ್.ಆರ್, ಯುವ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.

Be the first to comment

Leave a Reply

Your email address will not be published.


*