ಜಿಲ್ಲಾ ಸುದ್ದಿಗಳು
ಮಸ್ಕಿ
ಪಟ್ಟಣದ ಹೊರ ವಲಯದ ಮುದುಗಲ್ ರಸ್ತೆ ಬಳಿಯ ಮೊರಾರ್ಜಿ ದೇಸಾಯಿ ವಸತಿ ನಿಲಯ ಆವರಣದಲ್ಲಿ ಇಂದು ಬೆಳಗ್ಗೆ 6:00 ಗಂಟೆಯಿಂದ ಆರಂಭವಾಗಿ 7:30 ನಿಮಿಷದ ವರೆಗೆ ಮೊರಾರ್ಜಿ ದೇಸಾಯಿ ಪ.ಜಾ ಹಾಗೂ ಬಿಸಿಎಂ ವಸತಿ ನಿಲಯ ವಿಧ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದ ಸರ್ವರು ಸೇರಿ ಯೋಗಾಸನವನ್ನು ಮಾಡುವ ಮೂಲಕ ಅಂತರ್ ರಾಷ್ಟ್ರೀಯ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.
11 ಡಿಸೆಂಬರ್ 2014 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜೂನ್ 21 ಅನ್ನು ವಿಶ್ವ ಯೋಗ ದಿನವೆಂದು ಘೋಷಿಸಿತು. ಯೋಗ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಯೋಗದ ಮಹತ್ವವನ್ನು ತಿಳಿಸಲು ಮತ್ತು ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ಬಾರಿಯೂ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಅಂತರಾಷ್ಟ್ರೀಯ ಯೋಗ ದಿನದ 8ನೇ ಆವೃತ್ತಿಯ ಥೀಮ್ ಏನೆಂದರೆ, “ಮಾನವೀಯತೆಗಾಗಿ ಯೋಗ”. ಎಂಬ ವಿಷಯದ ಮೇಲೆ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
ಯೋಗ ದಿನದ ಮಹತ್ವ ಮತ್ತು ಇತಿಹಾಸಡಿಸೆಂಬರ್ 11, 2014 ರಂದು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಜೂನ್ 21ನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿರುವುದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ. ಅದರ ನಂತರ 2015 ರಲ್ಲಿ ಜೂನ್ 21 ರಂದು ಪ್ರಪಂಚದಾದ್ಯಂತ ಯೋಗ ದಿನವನ್ನು ಆಚರಿಸಲಾಯಿತು ಮತ್ತು ಈ ಪ್ರಕ್ರಿಯೆಯು ನಿರಂತರವಾಗಿ ಮುಂದುವರೆದಿದೆ. ಆದಾಗ್ಯೂ, ಭಾರತದಲ್ಲಿ ಯೋಗದ ಇತಿಹಾಸವು ಬಹಳ ಅನಾದಿಕಾಲದಿಂದ ಬಂದಿರುವಂತಹದು ಅದೇ ರೀತಿ ಮಸ್ಕಿ ಪಟ್ಟಣದ ಹೊರ ವಲಯದ ಮುದುಗಲ್ ರಸ್ತೆ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು ವಿಶ್ವ ಯೋಗ ದಿನದ ಅಂಗವಾಗಿ ಸೂರ್ಯನಮಸ್ಕಾರ ದಿಂದ ಆರಂಭವಾದ ಆಸನವು ಚಕ್ರಾಸನ,ಭುಜಂಗಾಸನ,ದಂಡಾಸನ,ಪದ್ಮಾಸನ ಹೀಗೆ ಹತ್ತು ಹಲವು ಆಸನಗಳನ್ನು ಮಾಡಿದರು.
ದೈಹಿಕ ಶಿಕ್ಷಕರಾದ ಶರಣಪ್ಪ ಹಾಗೂ ಶಾಲೆಯ ಸಿಬ್ಬಂದಿ ವರ್ಗ ಮಕ್ಕಳಿಗೆ ಆಸನದ ಅಭ್ಯಾಸ ಮಾಡಿಸುತ್ತಾ ತಾವೂ ಜೊತೆ ಜೊತೆಗೆ ಯೋಗವನ್ನು ಮಾಡುವ ಮೂಲಕ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.ಇದೇ ಸಂದರ್ಭದಲ್ಲಿನಾಗೇಶ್ ಪ್ರಾಂಶುಪಾಲರು ಬಿಸಿಎಂ ಮೊ. ದೇ. ವಸತಿ ಶಾಲೆ, ಯಮನೂರಪ್ಪ ಪ್ರಾಂಶುಪಾಲರು ಪ. ಜಾ ಮೊ. ದೇ ವಸತಿ ಶಾಲೆ, ಶರಣಪ್ಪ ದೈಹಿಕ ಶಿಕ್ಷಕರು ಹಾಗೂ ನಿಲಯ ಪಾಲಕರು, ಅಂಜಪ್ಪ ಗಣಿತ ಶಿಕ್ಷಕರು, ರೇವಣಸಿದ್ದಪ್ಪ ನಿಲಯ ಪಾಲಕರು, ಪ್ರಶಾಂತ್ ಸ್ಟಾಫ್ ನರ್ಸ್, ಇಬ್ರಾಹಿಂ ಗಣಕಯಂತ್ರ ಶಿಕ್ಷಕರು, ಶರಣಬಸವ ಎಫ್.ಡಿ.ಎ, ಕಲ್ಪಾ ಶ್ರೀ ವಿಜ್ಞಾನ ಶಿಕ್ಷಕಿ, ಗಿರಿಜಮ್ಮ ಸಮಾಜ ಶಿಕ್ಷಕಿ, ಮಹೇಶ್ವರಿ ಸಮಾಜ ಶಿಕ್ಷಕಿ ಸೇರಿದಂತೆ ಮಾದ್ಯಮ ಮಿತ್ರರು ಭಾಗಿಯಾಗಿದ್ದರು.
Be the first to comment