ಜಿಲ್ಲಾ ಸುದ್ದಿಗಳು
ಭಟ್ಕಳ
ಇಲ್ಲಿನ ತಲಾಂದ ಗ್ರಾಮದ ಆಶ್ರಯ ಕಾಲೋನಿಯಲ್ಲಿ ಶಾಸಕರ ಅನುದಾನದಡಿಯಲ್ಲಿ ಮಂಜುರಾದ 40 ಲಕ್ಷದ ಕಾಂಕ್ರೀಟ್ ರಸ್ತೆಯ ಕಾಮಗಾರಿಯು 75 ಪ್ರತಿಷತದಷ್ಟು ಕಾಮಗಾರಿ ಮುಗಿದಿದ್ದು ಇನ್ನುಳಿದ ಕಾರ್ಯ ಪೂರ್ಣಗೊಳಿಸುವಂತೆ ಆಗ್ರಹಿಸಿ ಮುಟ್ಟಳ್ಳಿ ಪಂಚಾಯತ ಗೆ ಮುತ್ತಿಗೆ ಹಾಕಿದ ಪ್ರಸಂಗ ಇಂದು ನಡೆದಿದೆ. ಇಲ್ಲಿನ ಆಶ್ರಯ ಕಾಲೋನಿಯಲ್ಲಿ ಅಜಮಾಸು 25 ವರ್ಷಗಳಿಂದ ಸ್ಥಳಿಯರು ವಾಸಿಸುತಿದ್ದು ಇಲ್ಲಿಯ ವರೆಗೆ ಮೂಲ ಸೌಕರ್ಯವಾದ ರಸ್ತೆಯ ಸೌಲಭ್ಯವಿದ್ದಿರಲ್ಲಿಲ ಈ ಸಲ ಶಾಸಕರು ತಮ್ಮ ಅನುದಾನದಡಿ 40 ಲಕ್ಷಗಳ ಕಾಂಕ್ರಿಟ್ ರಸ್ತೆಯನ್ನು ತಲಾಂದನ ಆಶ್ರಯ ಕಾಲೋನಿಗೆ ಮಂಜುರುಗೋಳಿಸಿ ಭುಮಿ ಪೂಜೆಯು ಸಹ ಜರುಗಿತ್ತು ಆ ತತ್ಸಂಭಂದ ಗುತ್ತಿಗೆದಾರರು ಕಾರ್ಯ ಆರಂಭಿಸುತಿದ್ದಂತೆ ಶಿರಾಲಿ ಮೂಲದ ವ್ಯಕ್ತಿಯೋರ್ವ ಕಾಮಗಾರಿ ಆರಂಭಿಸಿದ ರಸ್ತೆಯು ಸರ್ಕಾರ ತನಗೆ ನೀಡಿದ ತನ್ನ ಜಮೀನಾಗಿದ್ದು ಆ ಜಾಗವನ್ನು ಗುರುತಿಸಿ ತದನಂತರ ಕಾಮಗಾರಿಯನ್ನು ನಡೆಸುವಂತೆ ಪಂಚಾಯತ ಗೆ ಅರ್ಜಿ ನೀಡಿದ್ದ ಆಸಂಭಂದವಾಗಿ ವಿಚಾರಣೆ ನಡೆಸಿ ಕಾಮಗಾರಿಯನ್ನು ಆರಂಭಿಸಲು ಪಂಚಾಯತ್ ತೀರ್ಮಾನಿಸಿ ಕಾಮಗಾರಿಯನ್ನು ಮುಂದುಡಿದ ಬಗ್ಗೆ ಅಸಮಾಧಾನ ಗೊಂಡ ಸ್ಥಳಿಯರು ರಸ್ತೆ ಕಾಮಗಾರಿ ಕಾರ್ಯವನ್ನು ಪೂರ್ಣಗೊಳಿಸುವಂತೆ ಮಹಿಳೆಯರು ಸೇರಿದಂತೆ 50 ರಿಂದ 100 ಜನರು ಪಂಚಾಯತ್ ಗೆ ಮುತ್ತಗೆ ಹಾಕಿ ಪ್ರತಿಭಟನೆ ನಡೆಸಿದರು ಈ ಸಂಧರ್ಭದಲ್ಲಿ ಪಂಚಾಯತಗೆ ಆಗಮಿಸಿದ ಪಂಚಾಯತ ಅಧ್ಯಕ್ಷರಾದ ಶೇಷು ನಾಯ್ಕ ಸದಸ್ಯರಾದ ಗಣಪತಿ ನಾಯ್ಕ ಜನರ ಸಮಸ್ಯೆಯನ್ನು ಆಲಿಸಿ ಕಾಂಕ್ರೆಟ್ ರಸ್ತೆ ಪೂರ್ಣಗೋಳಿಸುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾದ ಸಮಸ್ಯೆಗಳೆನಾದರು ಉದ್ಬವಿಸಿದರೆ ಸಾರ್ವಜನಿಕರು ಪಂಚಾಯತನೊಂದಿಗೆ ಸಹಕರಿಸುವುದಾಗಿ ಸ್ಥಳಿಯರಾದ ರೋಕಿ ಫರ್ನಾಂಡಿಸ್, ರವಿ ನಾಯ್ಕ ,ಮಾದೇವ ನಾಯ್ಕ ಸೇರಿದಂತೆ ಉರ ನಾಗರಿಕರು ಆಶ್ವಾಸನೆ ನೀಡಿದರು.
Be the first to comment