ಲಿಂಗಸ್ಗೂರ ಶಾಸಕರ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ವರದಿ : ಗೌತಮ ಚವ್ಹಾಣ ಲಿಂಗಸ್ಗೂರ

ಲಿಂಗಸುಗೂರ ವರದಿ.ಲಿಂಗಸುಗೂರ ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶಾಲೆಯ ಶಿಕ್ಷಕರಾದ ಅಚ್ಚಮ್ಮ .ಪಿ.ಟಿ.ಟೀಚರ್. ಇವರು ಮಕ್ಕಳಿಗೆ ಯೋಗ ಮಾಡಿಸುವ ಮೂಲಕ ಯೋಗ ದಿನಾಚರಣೆ ಮಾಡಿದರು ಈ ಸಂದರ್ಭದಲ್ಲಿ ಶಾಲೆಯ ಮುಖ್ಯೆಪಾಧ್ಯಾಯರಾದ ಸಂಗಮ್ಮ .ಹಾಗೂ ಪಿರಣ್ಣ ಸಹ ಶಿಕ್ಷಕರು ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ಜೂನ್ ೨೧ ಅನ್ನು ಅಂತರಾಷ್ಟ್ರೀಯ ಯೋಗ ದಿನವೆಂದು ಸಂಯುಕ್ತ ರಾಷ್ಟ್ರ ಸಂಸ್ಥೆ ಘೋಷಿಸಿದೆ.ಯೋಗವು ಭಾರತೀಯ ಮೂಲದ, ೬,೦೦೦ ವರ್ಷ ಹಳೆಯದಾದ, ಭೌತಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಭಾರತದ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯ ತಮ್ಮ ಭಾಷಣದಲ್ಲಿ ವರ್ಷದ ಅತಿ ದೀರ್ಘ ದಿನವಾದ ಜೂನ್ ೨೧ ರಂದು ವಿಶ್ವ ಯೋಗ ದಿನ ಆಚರಿಸುವಂತೆ ಕರೆ ನೀಡಿದರು. ಮೊದಲ ಅಂತಾರಾಷ್ಟ್ರೀಯ ಯೋಗ ದಿನಈ ದಿನ ಪ್ರಾರಂಭಕ್ಕೆ ಅನೇಕ ವಿಶ್ವ ನಾಯಕರಿಂದ ಸಹಕಾರ ದೊರೆತಿದೆ..ಅಮೇರಿಕ ಸಂಯುಕ್ತ ಸಂಸ್ಥಾನ, ಕೆನಡಾ, ಚೀನಾ ಸೇರಿ, ೧೭೭ (177) ಕ್ಕೊ ಹೆಚ್ಚಿನ ದೇಶಗಳು ಈ ಪ್ರಸ್ತಾವನೆಗೆ ತಮ್ಮ ಬೆಂಬಲವನ್ನು ಸೂಚಿಸಿವೆ. ಅವುಗಳಲ್ಲಿ ೧೭೫ ದೇಶಗಳು ಈ ನಿರ್ಧಾರವನ್ನು ಪುರಸ್ಕರಿಸಿದವು. ಎಂದು ಶಾಲೆಯ ಶಿಕ್ಷಕರಾದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಬಗ್ಗೆ ಮಕ್ಕಳಿಗೆ ಹೇಳಿದರು

Be the first to comment

Leave a Reply

Your email address will not be published.


*