ಮಳಗಿ ಕಾಲೇಜಿನಲ್ಲಿ ಡಾ. ಅಂಬೇಡ್ಕರ್ ಓದು ಕಾರ್ಯಕ್ರಮ.

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಶಿರಸಿ 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಮಳಗಿ ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಡಾ. ಅಂಬೇಡ್ಕರ್ ಓದು ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಬೀಳೂರು ಈ ಕಾಲೇಜಿನ ಪ್ರಾಚಾರ್ಯರಾದ ಶ್ರೀ ನಾಗರಾಜ ಗಾಂವಕರ ಇವರು ಆಗಮಿಸಿ ಮಾತನಾಡುತ್ತಾ ಅಂಬೇಡ್ಕರ್ ಬದುಕು ಮತ್ತು ಜೀವನ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಹಾಗೂ ಪ್ರತಿಯೊಬ್ಬ ಭಾರತೀಯ ಪ್ರಜೆಗೆ ನಮ್ಮ ಸಂವಿಧಾನ ಸಾಮಾಜಿಕ ಸಮಾನತೆಯ ನ್ಯಾಯವನ್ನು ಕೊಟ್ಟಿದೆ ಮತ್ತು ವಿದ್ಯಾರ್ಥಿಗಳಾದ ತಾವು ಸಂವಿಧಾನದಲ್ಲಿ ಬರುವ ಎಲ್ಲ ಅಂಶಗಳನ್ನು ತಿಳಿದುಕೊಳ್ಳುವುದು ಅವಶ್ಯ ಎಂದರು. 

CHETAN KENDULI

ಸಭೆಯ ಅಧ್ಯಕ್ಷತೆಯನ್ನು ಮಳಗಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ವಸಂತ ಕೆ ನಾಯಕ ಅವರು ಮಾತನಾಡಿ ಅಂಬೇಡ್ಕರ್ ದೇಶದ ಸಂವಿಧಾನದ ಶಿಲ್ಪಿಯಾಗಿ ದಲಿತ ಸೂರ್ಯನಾಗಿ ಸಂವಿಧಾನದ ಪೂರ್ವ ಪೀಠಕೆಯಲ್ಲಿ ಎಲ್ಲ ಮೂಲಭೂತ ಅಂಶಗಳನ್ನು ನೀಡಿದ್ದಾರೆ ಎಂದರು. ಹಾಗೂ ಅಂಬೇಡ್ಕರ್ರಂತೆ ಸಮಾಜಕ್ಕೆ ಸೇವೆ ಸಲ್ಲಿಸಿದ ಜಗಜೀವನರಾಮ್ ಹಾಗೂ ಸಾವಿತ್ರಿಬಾಯಿ ಪುಲೆ ಇವರನ್ನು ನೆನಪಿಸಿ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡಿದರು. 

ವೇದಿಕೆಯ ಮೇಲೆ ಪ್ರೌಢ ಶಾಲೆಯ ಮುಕ್ಯೋಪಾಧ್ಯಾಯರಾದ ಶ್ರೀ ಅರವಿಂದ ನಾಯ್ಕ್ ಹಾಗೂ ಉಪನ್ಯಾಸಕರಾದ ಶ್ರೀ ಮಾಹಾಬಲೇಶ್ವರ ಉಪಸ್ಥಿತರಿದ್ದರು. ಕುಮಾರ್ ಪ್ರವೀಣ್ ಪ್ರಾರ್ಥನೆ ಹಾಡಿದರು. ಉಪನ್ಯಾಸಕಿ ಶಾಹಿನ್ ಬಾನು ಖಾಜಿ ಸ್ವಾಗತಿಸಿದರು. ಉಪನ್ಯಾಸಕಿ ರಾಜೇಶ್ವರಿ ವಂದಿಸಿದರು. ಉಪನ್ಯಾಸಕಿ ಶ್ರೀಮತಿ ವಿಜಯಾ ನಾಯ್ಕ್ ನಿರ್ವಹಿಸಿದರು. ಕಾರ್ಯಕ್ರಮದದಲ್ಲಿ ಅಂಬೇಡ್ಕರ್ ಬಗ್ಗೆ ಆಯೋಜಿಸಿದ್ದ ಆಶುಭಾಷಣ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

Be the first to comment

Leave a Reply

Your email address will not be published.


*