ಜಿಲ್ಲಾ ಸುದ್ದಿಗಳು
ಶಿರಸಿ
ತಮ್ಮ ಜೀವನದುದ್ದಕ್ಕೂ ಜಾತಿ ವ್ಯವಸ್ಥೆಯ ವಿರುದ್ಧ ಕನಕದಾಸರು ಹೋರಾಡಿದರೂ ೬ ನೇ ಶತಮಾನದಿಂದ ಜಾತಿ ಪಿಡುಗು ಇಂದಿಗೂ ಹಸಿರಾಗಿರುವುದು ನಮ್ಮ ದುರಂತ ಎಂದು ನ್ಯಾಯವಾದಿ ಶಿವರಾಯ ದೇಸಾಯಿ ಹೇಳಿದರು.ಇಲ್ಲಿನ ಮಿನಿ ವಿಧಾನಸೌದದ ಸಭಾಭವನದಲ್ಲಿ ಸೋಮವಾರ 534 ನೇ ಕನಕದಾಸ ಜಯಂತಿಯಲ್ಲಿ ಮಾತನಾಡಿದ ಅವರು, ಕನಕದಾಸರದ್ದು ಜಾತಿ ವ್ಯವಸ್ಥೆ ವಿರುದ್ದದ ಹೋರಾಟ. ಜಾತಿ ವ್ಯವಸ್ಥೆಯನ್ನು ಶತಮಾನಗಳಿಂದ ಇಂದಿಗೂ ಪಾಲಿಸುತ್ತಾ ಬರಲಾಗಿದೆ. ಕನಕದಾಸರ ಜಾತಿ ವಿರುದ್ಧದ ಹೋರಾಟ ಇಂದಿಗೂ ಪ್ರಸ್ತುತದಲ್ಲಿದೆ. ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ನಡೆಸಿದ ಹೋರಾಟ ಅವರ ವಚನ ಸಾಹಿತ್ಯದಲ್ಲಿ ಕಾಣಸಿಗುತ್ತದೆ ಎಂದರು.
ಕನಕದಾಸರ ಆದರ್ಶ ಮೌಲ್ಯ ಹಾಗೂ ಚಿಂತನೆಗಳನ್ನು ಗಮನಿಸಿದರೆ ಇಂದಿನ ಸಮಾಜ ಅವರ ಮೌಲ್ಯಗಳ ಜೊತೆ ಸಾಗುತ್ತಿದೆಯೇ ಎಂದು ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳುವ ಕಾಲ ಘಟ್ಟದಲ್ಲಿದ್ದೇವೆ. ಕನಕದಾಸರ ಸಾಹಿತ್ಯದುದ್ದಕ್ಕೂ ಜಾತಿ ಪದ್ದತಿಯ ವಿರುದ್ಧರ ಹೋರಾಟವಿದೆ. ಅವರ ಸಾಹಿತ್ಯದ ಮೂಲಕ ಸಮಾಜದಲ್ಲಿನ ಕೆಳ, ನೀಚ ಉಚ್ಚ ಎನ್ನುವ ಓರೆಕೋರೆಗಳನ್ನು ತಿದ್ದುವ ಕೆಲಸ ಮಾಡಿದರು. 6 ನೇ ಶತಮಾನದಲ್ಲಿ ಕನಕದಾಸರು ಹೇಳಿದ ಆದರ್ಶವನ್ನು ಪಾಲಿಸಿದ್ದರೆ ಜಾತಿ ಪಿಡುಗಿನ ಹೋರಾಟಗಳೇ ಇರುತ್ತಿರಲಿಲ್ಲ.
ಭಕ್ತಶ್ರೇಷ್ಠ ಕನಕದಾಸ ಸೇವಾ ಟ್ರಸ್ಟ್ ಅಧ್ಯಕ್ಷ ಬಂಗಾರಪ್ಪ, ಕನಕದಾಸರು ಕೃಷ್ಣನ್ನೇ ತನ್ನ ಭಕ್ತಿಯ ಮೂಲಕ ಒಲಿಸಿದ ಶ್ರೇಷ್ಠರು. ಕೇವಲ ಕನಕದಾಸ ಜಯಂತಿ ದಿನ ಮಾತ್ರ ಸ್ಮರಿಸದೇ ಅವರ ಆದರ್ಶಗಳನ್ನು ಪಾಲಿಸಬೇಕು. ಕನಕದಾಸ ಟ್ರಸ್ಟ್ ಗೆ ನಿವೇಶನಕ್ಕಾಗಿ ಬೇಡಿಕೆ ಇಟ್ಟಿದ್ದೆವು. ಆದರೆ ಇಲ್ಲಿಯ ತನಕ ಮಂಜೂರಿಯಾಗಿಲ್ಲ. ಆದರೆ ಈ ನಿಟ್ಟಿನಲ್ಲಿನಲ್ಲಿ ಸಾಕಷ್ಟು ಪ್ರಯತ್ನ ನಡೆದಿದ್ದು, ನಿವೇಶನ ಮಂಜೂರಾತಿಯಾಗುವ ಭರವಸೆ ಇದೆ ಎಂದರು.ತಹಸೀಲ್ದಾರ್ ಎಂ ಆರ್ ಕುಲಕರ್ಣಿ ಸ್ವಾಗತಿಸಿ ಮಾತನಾಡಿ, ಕನಕದಾಸರು ತಮಗೆ ಬಂದ ಸಂಪತ್ತು ಬಂದರೂ ಅದನ್ನು ಎಲ್ಲರಿಗೆ ಹಂಚಿದರು. ಭಕ್ತರಲ್ಲಿಯೇ ಕನಕದಾಸರು ಶ್ರೇಷ್ಠರು ಎಂದರು. ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಆಚರಿಸಲಾಯಿತು. ಮಲ್ಲಿಕಾರ್ಜುನ ಹಾದಿಮನಿ ಕನಕದಾಸರ ಭಕ್ತಿಗೀತೆ ಹಾಡಿದರು. ಮಾಲತೇಶ ಹೆಬ್ಬಾಳ್ ಕನಕದಾಸರ ಬಗ್ಗೆ ಅನಿಸಿಕೆ ಹಂಚಿಕೊಂಡರು. ಉಪತಹಸೀಲ್ದಾರ್ ರಮೇಶ ಹೆಗಡೆ ಕಾರ್ಯ ಕ್ರಮ ನಿರ್ವಹಿಸಿದರು.
Be the first to comment