ಹಲವು ಸಮಸ್ಯೆಗಳನ್ನೋತ್ತ ಶಾಲೆಯು ಅಭಿೃವೃದ್ಧಿ ಕಾಣೋದು ಯಾವಾಗ ? 

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ರಾಜ್ಯ ಸುದ್ದಿಗಳು 

ಮಸ್ಕಿ

CHETAN KENDULI

ಕನ್ನಡ ಶಾಲೆ ಉಳಿಯಬೇಕೆಂದು ಸರಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಪ್ರಯತ್ನ ಮಾಡುತ್ತಾ ಬಂದಿದೆ, ಹತ್ತಾರು ಸಮಸ್ಯೆ ಇರುವ ಸರಕಾರಿ ಶಾಲೆಗಳ ಪರಿಸ್ಥಿತಿಕೇಳುವವರಿಲ್ಲ. ತಾಲೂಕಿನ ಮಾರಲದಿನ್ನಿ ತಾಂಡಾದ ಸರ್ಕಾರಿ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ ತರಗತಿ ನಡೆಯುತ್ತಿದೆ. ಕಟ್ಟಡದ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ತೊಲೆ, ಕಂಬ ಮುರಿದಿವೆ, ಯಾವುದೇ ಕ್ಷಣದಲ್ಲಿ ಮೇಲ್ಚಾವಣಿ, ಗೋಡೆಗಳು ಕುಸಿದು ಬೀಳುವ ಸಾಧ್ಯತೆಗಳಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ.

ಸುಮಾರು 70 ವರ್ಷಗಳ ಹಿಂದೆ ನಿರ್ಮಿಸಿರುವ ಐದು ಕಟ್ಟಡಗಳು ಕುಸಿದು ಬೀಳುವ ಹಂತದಲ್ಲಿದೆ. ಇರುವ ಎರಡು ಕಟ್ಟಡದಲ್ಲಿ ಒಂದು ಕಾರ್ಯಾಲಯ ಇದ್ದು, ಇನ್ನೊಂದು ಕೊಠಡಿಯಲ್ಲಿ 110ಕ್ಕೂ ಹೆಚ್ಚು ಮಕ್ಕಳಿಗೆ ಪಾಠ ಕಲಿಸುವ ಸ್ಥಿತಿ ಇದ್ದು. ಇನ್ನೂ ನೂತನ ಬಿಸಿ ಊಟದ ಕೊಠಡಿ ಹಾಗೂ ಶಾಲಾ ಕೊಠಡಿ ನಿರ್ಮಿಸಿ ಅನೇಕ ತಿಂಗಳು ಗತಿಸಿದೆ. ಶಾಲೆಯ ಸಿಬ್ಬಂದಿಗೆ ಒಪ್ಪಿಸಿಲ್ಲ ಇದರಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿದೆ.ಇನ್ನೂ ಪಾಮನಕೆಲ್ಲೂರು ಜಿಪಂ ವ್ಯಾಪ್ತಿಯ ಸರಕಾರಿ ಶಾಲೆಗಳಲ್ಲಿಯೇ ಅತಿ ಹೆಚ್ಚಿನ ವಿದ್ಯಾರ್ಥಿಗಳ ಸಂಖ್ಯೆ ಇರುವ ಈ ಶಾಲೆಗೆ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಾಣ ಮಾಡಲು ಸರಕಾರ ಹಿಂದೇಟು ಹಾಕಿದೆ.

ತಾಂಡದ ನಿವಾಸಿ ಶಾಲೆಯಲ್ಲಿ 125 ಮಕ್ಕಳು, ಸರಕಾರಿ ಕಿರಿಯ ಪ್ರಾಥಾಮಿಕ ಶಾಲೆಯಲ್ಲಿ 110ಕ್ಕೂ ಸಮೀಪದ ಡಬ್ಬೇರಮಡು ಶಾಲೆ, ಮೂಡಲದಿನ್ನಿ ತಾಂಡಾದ ಶಾಲೆ 100 ಮಕ್ಕಳು ಇದ್ದು ಒಟ್ಟು 300ಕ್ಕೂ ಹೆಚ್ಚಿನ ಮಕ್ಕಳಿಗೆ ಅನುಕೂಲವಾಗುವ ಈ ಶಾಲೆಗೆ ಹಿರಿಯ ಪ್ರಾಥಮಿಕ ಶಾಲೆಯನ್ನಾಗಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ.110 ಮಕ್ಕಳು ಇರುವ ಈ ಶಾಲೆಯಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. 4 ಜನ ಶಿಕ್ಷಕರ ನೇಮಕ ಮಾಡಬೇಕು ಆದರೆ ಈ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಮಾತ್ರ ಇದ್ದು, ಇದರಿಂದ ಮಕ್ಕಳ ಕಲಿಕೆಗೆ ಅಡ್ಡಿ ಉಂಟಾಗಿದೆ. ಎಚ್ಚೆತ್ತುಕೊಳ್ಳುತ್ತಾ ಸರಕಾರ: ಈಗ ಮಳೆಗಾಲ ಪ್ರಾರಂಭವಾಗಿದ್ದು, ಶಾಲಾ ಕೊಠಡಿಗಳ ಮೇಲೆ ನೀರು ನಿಂತು ಸೋರುತ್ತಿದ್ದು, ಚಾವಣಿ ಕುಸಿಯುವ ಹಂತದಲ್ಲಿ ಇದೆ. ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಯಾವುದೇ ದುರಂತವಾಗುವ ಮುನ್ನ ಎಚ್ಚೆತ್ತು ಶಾಲಾ ಕಟ್ಟಡ ದುರಸ್ತಿಗೆ ಮುಂದಾಗಬೇಕು. ಹಾಗೂ ಕಿರಿಯ ಪ್ರಾಥಾಮಿಕ ಇರುವ ಶಾಲೆಗೆ ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು, ಇನ್ನೂ ಇನ್ನಿಬ್ಬರ ಶಿಕ್ಷಕರ ನೇಮಕ ಮಾಡಬೇಕೆಂದು ವಿದ್ಯಾರ್ಥಿಗಳ ಪಾಲಕರು ಒತ್ತಾಯಿಸಿದ್ದಾರೆ

Be the first to comment

Leave a Reply

Your email address will not be published.


*