ರಾಜ್ಯ ಸುದ್ದಿಗಳು
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ನಗರದ ಹೃದಯ ಭಾಗದಲ್ಲಿರುವ ಐತಿಹಸಾಸಿಕ ದೇವನಹಳ್ಳಿ ಕೋಟೆಗೆ ರಕ್ಷಣೆ ಇಲ್ಲದೆ ಅಭಿವೃದ್ಧಿ ಕ್ಷೀಣಿಸುತ್ತಿದ್ದು, ಬರುವ ಪ್ರವಾಸಿಗರಿಂದ ಹಿಡಿ ಶಾಪ ಹಾಕುವ ಪರಿಸ್ಥಿತಿ ಎದುರಾಗಿದೆ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೇವಲ ೫ಕಿಮೀ. ದೂರದಲ್ಲಿರುವ ಟಿಪ್ಪುಜನ್ಮಸ್ಥಳವಾಗಿರುವ ದೇವನಹಳ್ಳಿಯಲ್ಲಿ ರಣಭೈರೇಗೌಡ ಕಟ್ಟಿಸಿದ ಮಣ್ಣಿನ ಕೋಟೆಯು ಕಾಲಾಂತರದಲ್ಲಿ ಟಿಪ್ಪುಸುಲ್ತಾನ್ ಆಡಳಿತಕ್ಕೆ ಒಳಪಟ್ಟು ಕಲ್ಲಿನ ಕೋಟೆಯಾಗಿ ಮಾರ್ಪಾಟು ಆದಗಿನಿಂದಲೂ ಕೋಟೆಯ ಮೂಲ ಸ್ವರೂಪ ಕಾಲಕಳೆದಂತೆ ಶಿಥಿಲಾವಸ್ಥೆಗೆ ತಲುಪುತ್ತಿದೆ. ಕೋಟೆಯ ಹೊರಭಾಗದಲ್ಲಿ ಗಿಡಗಂಟೆಗಳು ಆಳುದ್ದ ಬೆಳೆದಿದ್ದು, ಈ ಹಿಂದೆ ಪುರಾತತ್ವ ಇಲಾಖೆ ಕೋಟೆಯ ಸುತ್ತ ಬೆಳೆದಿದ್ದ ಗಿಡಗಂಟೆಗಳನ್ನು ತೆರವುಗೊಳಿಸಿದ್ದರು. ಆದರೆ, ಒಂದು ದಿನಕ್ಕೆ ಮಾತ್ರ ಸಿಮೀತವಾಗಿದ್ದ ಸ್ವಚ್ಛತೆ ಇದೀಗ ಮತ್ತೇ ಅವ್ಯವಸ್ಥೆಯಿಂದ ಗಿಡಗಂಟೆಗಳಿಂದ ತುಂಬಿ ತುಳುಕುತ್ತಿದೆ.
ಅಭಿವೃದ್ಧಿ ಕ್ಷೀಣ: ಭಾರತದ ಭೂಪmದಲ್ಲಿ ಗುರ್ತಿಸಿಕೊಂಡಿರುವ ದೇವನಹಳ್ಳಿ ನಗರದಲ್ಲಿ ಅಭಿವೃದ್ಧಿ ಕ್ಷೀಣಿಸುತ್ತಿದ್ದು, ರಾಜವಂಶಸ್ಥರು ಆಳಿದ ಕೋಟೆಗೆ ಭದ್ರತೆ ಇಲ್ಲ, ಬರುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳಿಲ್ಲ, ಗೈಡ್ ಇಲ್ಲ, ಉಪಹಾರ ಮಂದಿರಗಳಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಬೇಗಾಬಿಟ್ಟಿಯಾಗಿ ಕೋಟೆ ಅನಾಥವಾಗುತ್ತಿದ್ದು, ಅಭಿವೃದ್ಧಿ ಮಾತ್ರ ಯಾರಿಗೂ ಬೇಕಾಗಿಲ್ಲವೆಂಬಂತೆ ಮಾರ್ಪಾಟಾಗಿದೆ.ಪುಂಡರ ತಾಣವಾದ ಟಿಪ್ಪು ವೃತ್ತ: ಬಿಬಿ ರಸ್ತೆಗೆ ಹೊಂದಿಕೊಂಡಿರುವ ಟಿಪ್ಪು ವೃತ್ತದಲ್ಲಿನ ಉದ್ಯಾನವನದಲ್ಲಿ ಅಸ್ವಚ್ಛತೆ ಎದ್ದುಕಾಣುತ್ತಿದೆ. ಇದು ಕುಡುಕರ ತಾಣವಾಗಿ ಮಾರ್ಪಾಟಾಗಿದೆ. ಎಲ್ಲೆಂದರಲ್ಲಿ ಮದ್ಯದ ಪ್ಯಾಕೆಟ್‌ಗಳು, ಪ್ಲಾಸ್ಟಿಕ್ ಮತ್ತು ಮದ್ಯದ ಬಾಟೆಲ್‌ಗಳು, ತ್ಯಾಜ್ಯ ಸೇರಿದಂತೆ ಹಲವು ರೀತಿಯಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ.
ಸ್ವಚ್ಛತೆ ಮರೀಚಿಕೆ: ಕೋಟೆಯ ಹೊರಭಾಗದಲ್ಲಿ ಹಾದುಹೋಗುವ ರಾಜಕಾಲೂವೆಯೂ ಸಹ ಸ್ವಚ್ಛತೆ ಇಲ್ಲದೆ ಪ್ರವಾಸಿಗರು ಮೂಗುಮುಚ್ಚಿಕೊಂಡು ಹೋಗುವ ಪರಸ್ಥಿತಿ ಇದೆ. ಕೋಟೆಯ ಮೇಲ್ಭಾಗದಲ್ಲಿ ಎಲ್ಲಂದರಲ್ಲಿ ಮೂರ್ತವಿಸರ್ಜನೆ ಸೇರಿದಂತೆ ಹಲವು ಅನೈತಿಕ ಚಟುವಟಿಕೆಗಳಿಗೆ ತಾಣವಾಗಿಬಿಟ್ಟಿದೆ.
ಮಂದಿರಗಳ ತಾಣ: ದೇವನಹಳ್ಳಿ ಕೋಟೆಯ ಸುತ್ತಲು ಸಾಕಷ್ಟು ದೇವಾಲಗಳಿದ್ದು, ಇತಿಹಾಸ ಪ್ರಸಿದ್ಧ ಶ್ರೀ ವೇಣುಗೋಪಾಲಸ್ವಾಮಿ, ರಂಗನಾಥಸ್ವಾಮಿ, ಶ್ರೀ ಆಂಜನೇಯಸ್ವಾಮಿ, ಮುನೇಶ್ವರಸ್ವಾಮಿ, ಹೀಗೆ ಹಲವು ದೇವಾಲಯಗಳು ಇದ್ದು, ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತಾಧಿಗಳು ಬರುತ್ತಾರೆ. ಕೋಟೆಗೆ ಒಂದು ಸುತ್ತು ಹೋಗಬೇಕು ಎನ್ನಿಸಿದರೂ ಇಲ್ಲಿನ ಅವ್ಯವಸ್ಥೆ ಕಂಡು ಅಲ್ಲಿಂದಲೇ ಕಾಲ್ಕೀಳುತ್ತಿದ್ದಾರೆ.
Be the first to comment