ಮಕ್ಕಳ ಆರೋಗ್ಯ ಹಿತದೃಷ್ಠಿಯಿಂದ ಕಡ್ಡಾಯವಾಗಿ ಲಸಿಕೆ ಪಡೆಯಲು ಪೋಷಕರು ಪ್ರೇರೆಪಿಸಬೇಕು ಕೋವಿಡ್ ಲಸಿಕೆ ಪಡೆಯಲು ಯಾವುದೇ ಆತಂಕ ಬೇಡ : ಉಪತಹಶೀಲ್ದಾರ್ ಚೈತ್ರ ಸಲಹೆ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಮಕ್ಕಳ ಆರೋಗ್ಯ ಹಿತದೃಷ್ಠಿಯಿಂದ ಸರಕಾರ ೧೫-೧೮ವರ್ಷದ ಮಕ್ಕಳಿಗೆ ಉಚಿತ ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನವನ್ನು ಹಮ್ಮಿಕೊಂಡಿದೆ. ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದುಕೊಳ್ಳಲು ಪ್ರೇರೆಪಿಸಬೇಕು ಎಂದು ಕುಂದಾಣ ನಾಡಕಚೇರಿ ಉಪತಹಶೀಲ್ದಾರ್ ಚೈತ್ರ ಸಲಹೆ ಮಾಡಿದರು.

CHETAN KENDULI

 

ದೇವನಹಳ್ಳಿ ತಾಲೂಕಿನ ಕುಂದಾಣ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕುಂದಾಣ ಹೋಬಳಿಯಲ್ಲಿ ೧೫-೧೮ವರ್ಷದ ಮಕ್ಕಳಿಗೆ ಸರಕಾರದ ಆದೇಶದಂತೆ ಕೋವಿಡ್ ಲಸಿಕೆಯನ್ನು ಹಾಕಲಾಗುತ್ತಿದೆ. ಪ್ರತಿ ವಿದ್ಯಾರ್ಥಿಗಳಿಗೆ ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಮಕ್ಕಳ ಆರೋಗ್ಯವನ್ನು ತಪಾಸಣೆ ನಡೆಸಿ, ನಂತರ ಕೋವಿಡ್ ಲಸಿಕೆಯನ್ನು ಹೋಬಳಿಯಲ್ಲಿ ೩೭ ಸರಕಾರಿ ಪ್ರೌಢ ಶಾಲೆಗಳು ಬರಲಿದ್ದು, ಎಲ್ಲಾ ಶಾಲೆಯಲ್ಲೂ ಲಸಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಕೋವಿಡ್ ಲಸಿಕೆಯನ್ನು ಪಡೆಯುವುದರಿಂದ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ಈ ಬಗ್ಗೆ ಶಾಲಾ ಶಿಕ್ಷಕರಿಗೆ ತಿಳಿಸಲಾಗಿದೆ. ಅದರಂತೆ ಪೋಷಕರು ಸಹ ಯಾವುದೇ ಆತಂಕವಿಲ್ಲದೆ ತಮ್ಮ ಮಕ್ಕಳಿಗೆ ಕೋವಿಡ್ ಲಸಿಕೆ ಪಡೆದುಕೊಳ್ಳಲು ಸಲಹೆ ಮಾಡಬೇಕು ಎಂದು ಹೇಳಿದರು. 

ಈ ವೇಳೆಯಲ್ಲಿ ಕುಂದಾಣ ನಾಡಕಚೇರಿ ಆರ್‌ಐ ಚಿದಾನಂದ್, ಸಿಬ್ಬಂದಿಗಳಾದ ಲಾವಣ್ಯ, ವಿನಯ್‌ಕುಮಾರ್, ಸುಬ್ರಮಣಿ, ಶಾಲಾ ಮುಖ್ಯ ಶಿಕ್ಷಕಿ ಸುಧಾ, ಶಿಕ್ಷಕರಾದ ರಾಜೇಶ್ವರಿ, ರಾಧಿಕರವೀಂದ್ರಕಾನಡಿ, ಪೂಜಾರಿಶ್ರೀಶೈವ, ಯೂಸೇಫ್, ಸುಮಿತ್ರ, ಹೊನ್ನಪ್ಪ ಹೊನಸಿರಿ, ಕುಂದಾಣ ಆರೋಗ್ಯ ಕೇಂದ್ರದ ವೈದ್ಯ ಡಾ.ರಾಜು, ಆರೋಗ್ಯ ಇಲಾಖೆಯ ಸಹಾಯಕಿಯರಾದ ರೂಹಿಸುಲ್ತಾನ, ಅನಿತಾ, ವಿದ್ಯಾರ್ಥಿಗಳು ಇದ್ದರು.

Be the first to comment

Leave a Reply

Your email address will not be published.


*