1 ಕೋಟಿ ರೂ.ವೆಚ್ಚದಲ್ಲಿ ವಿವಿಧ ಗ್ರಾಮಗಳಲ್ಲಿ ಸಿಸಿ ರಸ್ತೆಗೆ ಶಾಸಕರ ನೇತೃತ್ವದಲ್ಲಿ ಗುದ್ದಲಿ ಪೂಜೆ  ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿಯೇ ನನ್ನ ಗುರಿ : ಶಾಸಕ ಎಲ್.ಎನ್.ನಾರಾಯಣಸ್ವಾಮಿ ಅಭಿಮತ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಗ್ರಾಮೀಣ ಭಾಗದ ರಸ್ತೆಗಳು ಸರ್ವತೋಮುಖವಾಗಿ ಅಭಿವೃದ್ಧಿಗೊಂಡರೆ ದೇಶ ಅಭಿವೃದ್ಧಿಗೊಳ್ಳುತ್ತದೆ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ಅಭಿಮತ ವ್ಯಕ್ತಪಡಿಸಿದರು.ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಬಹು ವರ್ಷಗಳ ಕನಸು ಇದೀಗ ನೆರವೇರಿದೆ. ವಿಶಿಷ್ಟ ಅನುದಾನದಲ್ಲಿ ಸುಮಾರು ೧ಕೋಟಿ ರೂ. ವೆಚ್ಚದಲ್ಲಿ ಕುಂದಾಣ ಹೋಬಳಿಯ ವಿವಿಧ ಗ್ರಾಮಗಳಿಗೆ ಡಾಂಬರೀಕರಣಕ್ಕಾಗಿ ಅನುದಾನವನ್ನು ಮಂಜೂರು ಮಾಡಲಾಗಿದೆ. ವಿಶ್ವನಾಥಪುರ ಗ್ರಾಮದ ರಸ್ತೆಗೆ ೪೦ಲಕ್ಷ ರೂ., ಭೈರದೇನಹಳ್ಳಿ ಗ್ರಾಮದ ರಸ್ತೆಗೆ ೨೦ಲಕ್ಷ ರೂ., ಬೀರಸಂದ್ರ ಗ್ರಾಮದ ರಸ್ತೆಗೆ ೨೦ಲಕ್ಷ ರೂ., ದೊಡ್ಡಗೊಲ್ಲಹಳ್ಳಿ ಗ್ರಾಮದ ರಸ್ತೆಗೆ ೨೦ಲಕ್ಷ ರೂ.ಗಳಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಲಾಗಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ದಿನನಿತ್ಯ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ಗ್ರಾಮಗಳು ಹಂತ ಹಂತವಾಗಿ ಅಭಿವೃದ್ಧಿಗೊಂಡರೆ ದೇಶ ಅಭಿವೃದ್ಧಿಗೊಳ್ಳುತ್ತದೆ ಎಂದು ಹೇಳಿದರು.

CHETAN KENDULI

ಗುಣಮಟ್ಟದ ಕಾಮಗಾರಿಗೆ ಒತ್ತು: ಗ್ರಾಮೀಣ ಭಾಗದ ರಸ್ತೆಗಳ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ರಸ್ತೆ ಕಾಮಗಾರಿಯನ್ನು ಮಾಡುವ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಕಾಮಗಾರಿಯು ಸಂಪೂರ್ಣವಾಗಿ ಗುಣಮಟ್ಟದಿಂದ ಕೂಡಿರಬೇಕು. ಸ್ಥಳೀಯರು ಕಾಮಗಾರಿ ನಡೆಸುವಾಗ ಮುಂದಿದ್ದು, ಕಾಮಗಾರಿಯನ್ನು ಪರಿಶೀಲಿಸಬೇಕು ಎಂದು ಹೇಳಿದರು. 

ಈ ವೇಳೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಹಿರಿಯ ಮುಖಂಡ ಆರ್.ಕೆ.ನಂಜೇಗೌಡ, ಕುಂದಾಣ ಹೋಬಳಿ ಅಧ್ಯಕ್ಷ ಚಂದ್ರೇಗೌಡ, ವಿಶ್ವನಾಥಪುರ ಗ್ರಾಪಂ ಮಾಜಿ ಅಧ್ಯಕ್ಷ ರಾಮಮೂರ್ತಿ, ಗ್ರಾಪಂ ಅಧ್ಯಕ್ಷೆ ಮಂಗಳನಾರಾಯಣಸ್ವಾಮಿ, ಉಪಾಧ್ಯಕ್ಷ ವಿನಯ್‌ಕುಮಾರ್, ಸದಸ್ಯರಾದ ದಿನ್ನೇಸೋಲೂರು ಶ್ರೀನಿವಾಸ್, ಲಕ್ಷ್ಮೀನರಸಮ್ಮ, ಕಲ್ಪನಾ, ಆಂಜಿನಮ್ಮ, ವೆಂಕಟಮ್ಮಗಂಗಪ್ಪ, ಭವ್ಯ ವಸಂತ್‌ಕುಮಾರ್, ಮುಖಂಡರಾದ ವಕೀಲ ಮನೋಜ್‌ಗೌಡ, ಮನಗೊಂಡನಹಳ್ಳಿ ಜಗದೀಶ್, ಲಕ್ಷ್ಮಣ್, ಮುನಿರಾಜಪ್ಪ, ರಾಮಮೂರ್ತಿ, ಮಂಜುನಾಥ್, ರಘು, ಗುತ್ತಿಗೆದಾರ ರಮೇಶ್ ಹಾಗೂ ಗ್ರಾಮಸ್ಥರು ಇದ್ದರು.

Be the first to comment

Leave a Reply

Your email address will not be published.


*