ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಕೊರೋನಾ ಲಾಕ್ ಡೌನ್ ಹಾಗೂ ವೈರಸ್ ನಿಂದ ಬಚಾವ್ ಆಗಲು ಗ್ರಾಮೀಣ ಜನತೆ ಜಮೀನಿನಲ್ಲಿ ಕೆಲಸ ನಿರ್ವಹಿಸುವ ಮೂಲಕ ಕಳೆಯುತ್ತಿದ್ದಾರೆ.
ವಿಜಯಪುರ ಜಿಲ್ಲೆಯ ನಾಲತವಾಡ ಪಟ್ಟಣದ ಜನತೆ ವೈರಸ್ ನಿಂದ ಜಾಗೃತರಾಗಿ ಜಮೀನಿನಲ್ಲಿ ಕಾಯಕವೇ ಕೈಲಾಸ ಎನ್ನುವಂತೆ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ನಾಲತವಾಡ ಜನತೆ ಸಾಮಾಜಿಕ ಅಂತರ್ ಕಾಯ್ದುಕೊಂಡು ಜಮೀನಿನ ಕೆಲಸ ಹಾಗೂ ಊಟಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ವೈರಸ್ ಭೀತಿಯಲ್ಲೂ ವೈರಸ್ ನಿಂದ ಪಾರಾಗಲು ಗ್ರಾಮೀಣ ಜನತೆ ಹೊಲಗಳಿಗೆ ತೆರಳಿ ಜೀವನ ಸಾಗಿಸುತ್ತಿದ್ದಾರೆ.
ಇದೇ ವೇಳೆಯಲ್ಲಿ ಬಸವರಾಜ್ ಗಡ್ಡಿ ಮಾತನಾಡಿ, ಸರ್ಕಾರದ ಕೊರೋನಾ ವೈರಸ್ ನಿಯಮಗಳನ್ನು ಜನತೆ ಪಾಲಿಸಬೇಕು. ಅಲ್ಲದೇ, ವೈದ್ಯರು ಹಾಗೂ ಸರ್ಕಾರ ನೀಡುವ ಎಚ್ಚರಿಕೆ ಹಾಗೂ ರೂಲ್ಸ್ ಬ್ರೇಕ್ ಮಾಡದೇ ಪೊಲೀಸ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ರೈತರಾದ ಶೇಖಪ್ಪ ಕಸಬೆಗೌಡರ, ಸಂಗು ಗಂಗನಗೌಡರ, ಸಂಗಪ್ಪ ಕುಳಿಗೇರಿ, ವಿಜಯ ಹಿರೇಮಠ ಸೇರಿದಂತೆ ಉಪಸ್ಥಿತರಿದ್ದರು ಇದ್ದರು.
Be the first to comment