ಜಿಲ್ಲಾ ಸುದ್ದಿಗಳು
ಕಾರವಾರ
ಜಿಲ್ಲೆಗೆ ಮುಖ್ಯಮಂತ್ರಿ ವಿಶೇಷ ನಿಧಿ ಅಡಿಯಲ್ಲಿ 70 ಕೋಟಿ ರೂ. ಅನುದಾನ ಮಂಜೂರಿಯಾಗಿದ್ದು, ರಸ್ತೆ, ಸೇತುವೆ ಸೇರಿದಂತೆ ಕರಾವಳಿಯ ಐದು ತಾಲೂಕಿಗೆ 55 ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗೆ ಹಣ ಬಿಡುಗಡೆಯಾಗಿದೆ. ಆದರೆ ಈ ಎಲ್ಲಾ ಕಾಮಗಾರಿಗಳನ್ನು ಭೂ ಸೇನಾ ನಿಗಮಕ್ಕೆ(ಕೆಆರ್‍ಐಡಿಎಲ್‍ಗೆ) ನೀಡಿ, ಗುತ್ತಿಗೆದಾರರಿಗೆ ದ್ರೋಹ ಬಗೆದಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷಮಾಧವನಾಯಕಆರೋಪಿಸಿದ್ದಾರೆ.ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈಗಾಗಲೇ ಕೋವಿಡ್ ಮಾಹಾಮಾರಿಯಿಂದ ಗುತ್ತಿಗೆದಾರರು ಸಂಕಷ್ಟದಲ್ಲಿ ಇದ್ದಂತಹ ಸಂದರ್ಭದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಸರಕಾರದಿಂದ ಬಿಡುಗಡೆಯಾಗಿದ್ದ ಕೋಟ್ಯಾಂತರ ರೂ. ವೆಚ್ಚದ ಕಾಮಗಾರಿಗಳನ್ನು ಭೂ ಸೇನಾ ನಿಗಮ, ಕೆಆರ್‍ಐಡಿಎಲ್‍ಗೆ ಕೊಡುವಂತೆ ಶಿಫಾರಸ್ಸು ಮಾಡಿದೆ. ಈ ಸಂಸ್ಥೆಗೆ ಕಾಮಗಾರಿ ನೀಡುವ ಮೊದಲು ಇಂಜಿನಿಯರ್ ಮೂಲಕ, ಪಂಚಾಯತ್ ರಾಜ್ ಇಲಾಖೆಯಿಂದ ಕ್ರಿಯಾ ಯೋಜನೆ ಮಾಡಬೇಕು.ಆಗ ಮಾತ್ರ ಕಾಮಗಾರಿ ಕೆಆರ್‍ಐಡಿಎಲ್‍ಗೆ ನೀಡಬಹುದು.
ಈ ಹಿಂದೆ ಜಿ.ಪಂ ಸಾಮಾನ್ಯ ಸಭೆಯಲ್ಲಿ ಭೂ ಸೇನಾ ನಿಗಮಕ್ಕೆ ಯಾವುದೇ ಕೆಲಸ ಕೊಡಬಾರದು ಎಂದು ಠರಾವಾಗಿತ್ತು. ಆದರೆ ಅಧಿಕಾರಿಗಳು ಠರಾವಿನ ನಿಯಮ ಪಾಲಿಸದೇ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಈ ರೀತಿ ನಿಯಮ ಉಲ್ಲಂಘನೆ ಮಾಡಿದ ಸಂಸ್ಥೆಯನ್ನು ಬ್ಲಾಕ್ ಲಿಸ್ಟ್‍ಗೆ ಸೇರಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯ ಜನಪತ್ರಿನಿಧಿಗಳು ಕೆಆರ್‍ಐಡಿಎಲ್‍ಗೆ ಕೆಲಸ ನೀಡುವಂತೆ ಶಿಫಾರಸ್ಸು ಪತ್ರ ನೀಡುತ್ತಾರೆ. ಆದರೆ ಇಷ್ಟು ಕೆಲಸ ಮಾಡಬೇಕಾದರೆ ಕೆಆರ್‍ಐಡಿಎಲ್ ಜೊತೆಗೆ ಯಾವ ಯಂತ್ರಗಳು ಇದೆ ಎಂಬ ಬಗ್ಗೆ ಮಾಹಿತಿ ಹಕ್ಕು ಅಡಿ ಮಾಹಿತಿ ಪಡೆದಾಗ ಸ್ವಿಫ್ಟ್ ಡಿಸೈರ್ ಕಾರು ಹಾಗೂ ಬೊಲೇರೂ ಜೀಪ್ ಬಿಟ್ಟರೆ ಕಾಮಗಾರಿ ನಡೆಸಲು ಬೇಕಾದ ಜೆಸಿಬಿ,ಹಿಟಾಚಿ, ಕಾಂಕ್ರೀಟ್ ಮಿಕ್ಸರ್,ಎಜೆಕ್ಷ ಕಾಂಕ್ರೀಟ್, ರೋಡ್ ರೋಲರ್, ಹಾಟ್ ಮಿಕ್ಸಿಂಗ್ ಸೇರಿದಂತೆ ಇನ್ನಿತರರ ಯಾವುದೇ ವಾಹನಗಳು ಇಲ್ಲ. ಇದರಿಂದ ಕೆಲವು ಕಡೆಗಳಲ್ಲಿ ಅರ್ಧಮರ್ಧ ಕಾಮಗಾರಿ ನಡೆಸಿದ್ದಾರೆ. ಅಲ್ಲದೇ, ಕಳಪೆ ಕಾಮಗಾರಿಯೂ ನಡೆದಿದೆ. ಯಂತ್ರೋಪಕರಣಗಳು ಹಾಗೂ ಸಿಬ್ಬಂದಿಗಳ ಕೊರತೆ ಇರುವ ಸಂಸ್ಥೆಗೆ ಜಿಲ್ಲೆಯ ಜನಪತ್ರಿನಿಧಿಗಳು ಕಾಮಗಾರಿ ನೀಡುತ್ತಿದ್ದಾರೆ ಎಂಬುದು ಬೇಸರದ ಸಂಗತಿ.
ಕರಾವಳಿ ಭಾಗದ ಜನಪ್ರತಿನಿಧಿಗಳೇ ಹೆಚ್ಚು ಶಿಪಾರಸ್ಸು ಪತ್ರ ನೀಡುತ್ತಿದ್ದಾರೆ. ಜನಪತ್ರಿನಿಧಿಯಾದವರು ಜನರ ಹೀತ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.ನೆರೆ ಪ್ರವಾಹದಿಂದ ಜಿಲ್ಲೆಗೆ 100 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಆ ಹಣ ಇದೀಗ ಜಿಲ್ಲಾಧಿಕಾರಿ ಅವರ ಖಾತೆಯಲ್ಲಿ ಇದೆ. ಈ ಹಣ ಯಾವ ಇಲಾಖೆಗೆ ಹಂಚಿಕೆ ಮಾಡುತ್ತಾರೆ ಎಂದು ನೋಡಬೇಕು ಎಂದರು. ತಾಲೂಕಿನ ಅಮದಳ್ಳಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮವಿಕಾಸ ಯೋಜನೆಯಡಿ ಕಳೆದ 2016ರಲ್ಲಿ 1 ಕೋಟಿ ರೂ. ವೆಚ್ಚದ 20 ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಇದುವರೆಗೆ ಕಾಮಗಾರಿ ಪ್ರಾರಂಭ ಮಾಡಿಲ್ಲ. ಈ ಕಾಮಗಾರಿ ಕೆಆರ್‍ಐಡಿಎಲ್ ಅವರಿಗೆ ನೀಡಿದ್ದಾರೆ ಎಂದು ಚಂದ್ರಕಾಂತ ಆಗೇರೆ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರಾದ ರವಿ ನಾಯ್ಕ, ದೀಪಕ ನಾಯ್ಕ, ಗೋವಿಂದ ಗೌಡ, ಸತೀಶ ನಾಯ್ಕ, ಪ್ರವೀಣ ತಳೇಕರ, ರವಿದಾಸ ಕೋಠಾರಕರ್, ರಾಜೇಶ ಶೇಟ್, ಛತ್ರಪತಿ ಮಾಳ್ಸೇಕರ್, ರಾಮ ಜೋಶಿ, ಸುಮೀತ್ ಅಸ್ನೋಟಿಕರ್ ಮುಂತಾದವರು ಉಪಸ್ತಿತರಿದ್ದರು.
Be the first to comment