ಬಿಜೆಪಿ ಸರ್ಕಾರದ ಜನವಿರೋದಿ ನೀತಿ ಖಂಡಿಸಿ ಜೆಡಿಎಸ್‍ನಿಂದ ಪ್ರತಿಭಟನೆ.

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿ 

CHETAN KENDULI

ಬಿಜೆಪಿ ಸರ್ಕಾರ ಜನವಿರೋದಿ ನೀತಿ ಖಂಡಿಸಿ ಜೆಡಿಎಸ್‍ನಿಂದ ಪ್ರತಿಭಟನೆ ಮಾಡುತ್ತಿದ್ದೇವೆ-ಶಾಸಕ ನಿಸರ್ಗ ನಾರಾಯಣಸ್ವಾಮಿ. ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನವಿರೋಧಿ ನೀತಿ ಅನುಸರಿಸಿ ಕೋರೋನಾ ನಿಯಂತ್ರಣ ಮಾಡುವಲ್ಲಿ ವಿಫಲವಾಗಿವೆ ಎಂದು ಕ್ಷೇತ್ರದ ಶಾಸಕ ನಿಸರ್ಗ ನಾರಾಐಣಸ್ವಾಮಿ ಆರೋಪಿಸಿದ್ದಾರೆ.ಅವರು ಪಟ್ಟಣದಲ್ಲಿ ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ರ್ಯಾಲಿ ಉದ್ದೇಶಿಸಿ ಮಾತನಾಡಿ ಜನಸಾಮಾನ್ಯರ, ರೈತರಹಾಗು ಕೂಲಿ ಕಾರ್ಮಿಕರ ಜೀವನದ ಮೇಲೆ ಚಲ್ಲಾಟವಾಡುತ್ತಿದ್ದು ದಿನಬಳಕೆ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ, ಪೆಟ್ರೋಲ್, ಡೀಸೆಲ್ ಬೆಲೆ 100ರ ಗಡಿ ದಾಟಿದೆ, ಕೊರೋನಾದ ಲಾಕ್‍ಡೌನ್ ಸಂಧರ್ಭದಲ್ಲಿ ರಸಗೊಬ್ಬರ, ವಿದ್ಯುತ್ ಬೆಲೆಗಳನ್ನು ಏರಿಸಿ ಬಡಜನರು ಜೀವನ ನಡೆಸುವುದೇ ಕಷ್ಟವಾಗಿದೆ ಎಂದರು

ಇನ್ನು ವ್ಯಾಕ್ಸಿನ್ ಹಾಗು ಔಷದಿಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು ಕೋಟ್ಯಾಂತರ ಹಣ ನುಂಗಿರುವ ಸರ್ಕಾರಕ್ಕೆ ಜನರ ಬವಣೆ ತಿಳಿಯುವುದಾದರೂ ಹೇಗೆ, ರೈತರು ಬೆಳೆದ ತರಕಾರಿ,ಹೂವು, ಹಣ್ಣು ಮಾರಾಟಮಾಡಲಾಗದೇ ತೊಟಗಳಲ್ಲೆ ಒಣಗಿ ಹೋಗಿವೆ, ಇದಕ್ಕೆ ಯಾವುದೇ ಪರಿಹಾರ ನೀಡುವಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಇದನ್ನೆಲ್ಲಾ ನೋಡಿ ಸುಮ್ಮನಿರಲಾಗದೇ ಮಾಜಿ ಪ್ರಧಾನಿ ದೇವೇಗೌಡ, ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಲಹೆಯ ಮೇರೆಗೆ ರಾಜ್ಯಾದ್ಯಂತ ತಾಲ್ಲೂಕು ಹಾಗೂ ಜಿಲ್ಲಾ ಜೆಡಿಎಸ್ ಘಟಕಗಳು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಾಗೂ ರಾಜ್ಯಪಾಲರಿಗೆ ತಲುಪಿಸಲು ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದರು.

ಈ ಸಮಯದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ, ತಾಲ್ಲೂಕು ಕಾರ್ಯಾದ್ಯಕ್ಷ, ಆರ್.ಮುನೇಗೌಡ, ಪ್ರ.ಕಾರ್ಯದರ್ಶಿ, ಜಿ.ಎ.ರವೀಂದ್ರ, ಗ್ರಾ.ಪಂ. ಅಧ್ಯಕ್ಷರುಗಳಾದ ಹುರುಳುಗುರ್ಕಿ ಶ್ರೀನಿವಾಸ್, ಬೈಚಾಪುರದ ವೇಣುಗೋಪಾಲ್, ಕಾರಹಳ್ಳಿ ಶ್ರೀನಿವಾಸ್ ಪುರಸಭಾ ಸ್ಥಾಯಿಸಮಿತಿ ಅಧ್ಯಕ್ಷ ಎಸ್.ನಾಗೇಶ್, ಸದಸ್ಯರಾದ ಪುಷ್ಪ ಲಕ್ಷ್ಮೀನಾರಾಯಣ್, ವಿಜಯಪುರದ ಭಾಸ್ಕರ್, ಕೇಶವಪ್ಪ, ವಿಜಯಕುಮಾರ್, ನೆರಗನಹಳ್ಳಿ ಶ್ರೀನಿವಾಸ್, ತಾಲ್ಲೂಕು ಸೊಸೈಟಿ ಅಧ್ಯಕ್ಷ ನಾರಾಯಣಸ್ವಾಮಿ, ರಾಮಾಂಜನೇಯದಾಸ್, ಮಹಿಳಾ ಘಟಕದ ಮೀನಾಕ್ಷಿ ಮುನಿಕೃಷ್ಣಪ್ಪ ಸೇರಿದಂತೆ ತಾಲ್ಲೂಕಿನ ಜೆಡಿಎಸ್ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*