ರಾಜ್ಯ ಸುದ್ದಿ
ಮಠಗಳಿಂದ ಘಟ ಬೆಳೆಯಬಾರದು ಘಟ ವ್ಯಕ್ತಿತ್ವದಿಂದ ಮಠ ಬೆಳೆಯಬೇಕು ಎನ್ನುವು ಮಾತುಗಳು ಇದಕ್ಕೆ ಹೇಳಿದ್ದಾರೆ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು ಹೇಳಿದರು.ಪಟ್ಟಣದ ಖಾಸ್ಗತೇಶ್ವರ ಶಾಖಾ ಮಠದಲ್ಲಿ ವಿಕಲಚೇತನರಿಗೆ ಹಾಗೂ ಮಂಗಳಮುಖಿಯವರಿಗೆ ಮಠದ ಪ್ರಸಾದ(ಆಹಾರ ಕಿಟ್) ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒರ್ವ ಅಂಗವಿಕಲರು ಯಾವ ಮಟ್ಟಿಗೆ ಜನಸೇವಕರಾಗಬಹುದು ಎನ್ನುವುದಕ್ಕೆ ಪುಟ್ಟರಾಜು ಗವಾಯಿ ಹಾಗೂ ನಮ್ಮ ಖಾಸ್ಗತೇಶ ಅಜ್ಜನವರು ಸಾಕ್ಷಿಯಾಗಿದ್ದಾರೆ. ಅದರಂತೆ ಕೆಲವರು ಅಮಂಗಲ ಎಂದು ಮಂಗಳಮುಖಿಯರಿಗೆ ಹೇಳುತ್ತಾರೆ. ಆದರೆ ಮಂಗಳಮುಖಿಯವರು ದೇವರ ಇನ್ನೊಂದು ಪ್ರತಿರೂಪದಂತೆ ಎಂದು ಅವರು ಹೇಳಿದರು.
ವಿಕಲಚೇತನ ಸಂಘದ ಜಿಲ್ಲಾಧ್ಯಕ್ಷ ಎಸ್.ಕೆ.ಘಾಟೆ ಮಾತನಾಡಿ, ಈಗಾಗಲೇ ಕೊರೊನಾ ಸಂಕಷ್ಟದಲ್ಲಿ ಸಿಲುಕಿದ ವಿಕಲಚೇತರಿಗೆ ಹಾಗೂ ಮಂಗಳಮುಖಿಯವರಿಗೆ ಸರಕಾರದಿಂದ ಬರುತ್ತಿದ್ದ ಮಾಶಾಸನ ಕಳೆದ ಮೂರು ತಿಂಗಳಿಂದ ಬಂದಿಲ್ಲ. ಆದರೆ ಸ್ತಳೀಯ ಶಾಸಕರ ಅನುದಾನದಲ್ಲಿ ಅಂಗವಿಕಲರಿಗೆ ಮೀಸಲಾಯಿತಿ ಇರುತ್ತದೆ. ಇದರಿಂದ ತಾಲೂಕಾ ಅಂಗವಿಕಲರಿಗೆ ಬೇಕಾಗುವ ಬೈಕ್ ಸೇರಿದಂತೆ ಇನ್ನಿತರ ಅಗತ್ಯವಸ್ತುಗಳನ್ನು ನೀಡಬೇಕಾಗುತ್ತದೆ. ಆದರೆ ಶಾಸಕರು ಇನ್ನೂವರೆಗೂ ನೀಡಿಲ್ಲ. ಮುಂದಿನ ದಿನಗಳಲ್ಲಾದರೂ ನೀಡಲಿ. ಚುನಾವಣೆ ಸಂದರ್ಭದಲ್ಲಿ ಅಂಗವಿಕಲರಿಗೆ ವ್ಹೀಲಚೇರ್ ವ್ಯವಸ್ಥೆಯನ್ನು ಮಾಡಿಸಿ ಮತದಾನ ಮಾಡಿಸಿಕೊಳ್ಳುತ್ತಾರೆ. ನಂತರ ನಮ್ಮ ಸಂಕಷ್ಟಕ್ಕೆ ಯಾರೂ ಸಹಕಾರಿಯಾಗುವುದಿಲ್ಲ ಎಂದು ಅವರು ತಾಲೂಕಾ ಅಂಗವಿಕಲರ ಕಲಳನ್ನು ತೋಡಿಕೊಂಡರು.
ಪುರಸಭೆ ಅಧ್ಯಕ್ಷ ಪ್ರತಿಭಾ ಅಂಗಡಗೇರಿ ಮಾತನಾಡಿ, ವಿವಿಧ ಸಂಘ ಸಂಸ್ಥೆಗಳು ಹಾಗೂ ರಾಜಕಾರಣಿಗಳು ಮಾಡದಂತಹ ಕಾರ್ಯ ಖಾಸ್ಗತೇಶ್ವರ ಶ್ರೀಗಳು ಮಂಗಳಮುಖಿಗಳಿಗೆ ಹಾಗೂ ವಿಕಲಷೇತನರಿಗೆ ಪ್ರಸಾದ ಕಿಟ್ ವಿತರಣೆ ಮಾಡುವ ಮೂಲಕ ಮಾಡಿದ್ದಾರೆ. ಇನ್ನೂ ಮುಂದಿನ ದಿನಗಳಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಮಾಡಬಹುದಾದ ಸಹಾಯ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇದೇ ವೇಳೆಯಲ್ಲಿ ಮುದ್ದೇಬಿಹಾಳ ನಗರದ ವ್ಯಾಪ್ತಿಯ ಮಂಗಳಮುಖಿಯರಿಗೆ ಹಾಗೂ ವಿಕಲಚೇತನರಿಗೆ ಮಠದ ಪ್ರಸಾದದ ಕಿಟ್ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಸವರಾಜ ಮುರಾಳ, ಕರ್ನಾಟಕ ಬ್ಯಾಂಕ್ ನಿರ್ದೇಶಕ ರಾಜು ಕರಡ್ಡಿ, ಸಮಾಜ ಸೇವಕ ಅಶೋಕ ನಾಡಗೌಡ, ಸಂಗನಗೌಡ ಬಿರಾದಾರ, ಸಂಗನಗೌಡ ಪಾಟೀಲ(ಕವಡಿಮಟ್ಟಿ) ರಾಜು ಕಲಬುರ್ಗಿ ಇದ್ದರು.ಹಾಸ್ಯ ಕಲಾವಿದ ಗೋಪಾಲ ಹೂಗಾರ ಸ್ವಾಗತಿಸಿದರು. ಮಹಾಂತೇಶ ಬೂದಿಹಾಳಮಠ ವಂದಿಸಿದರು.
ಕೊರೊನಾ ಎರಡನೇ ಅಲೆ ಎಲ್ಲರಿಗೂ ಸಂಕಷ್ಟಕ್ಕೆ ಸಿಲುಕಿಸಿದೆ. ಆದರೆ ಇಂದಿನ ಸರಕಾರ ಕೆಲವರಿಗೆ ಗುರುತಿಸಿ ಅವರಿಗೆ ಪ್ಯಾಕೇಜ್ ಘೋಷನೆ ಮಾಡಿದೆ. ಆದರೆ ಸರಕಾರಕ್ಕೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ವಿಕಲಚೇತನರು ಹಾಗೂ ಮಂಗಳಮುಖಿಯವರು ಕಾಣಿಸಿಲ್ಲ. ಇಂತಹ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಮಠದ ಪ್ರಸಾದ ಕಿಟ್ ವಿತರಣೆ ಮಾಡುತ್ತಿರುವುದು ಮಠದ ಶ್ರೀಗಳ ಮಾದರಿ ಕಾರ್ಯವಾಗಿದೆ.- ಎಸ್.ಕೆ.ಘಾಟೆ, ವಿಕಲಚೇತನ ಸಂಘದ ಜಿಲ್ಲಾಧ್ಯಕ್ಷರು, ವಿಜಯಪುರ.
Be the first to comment