ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಬಾಗಲಕೋಟೆ:(ಕಮತಗಿ)ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನಿರಂತರವಾಗಿ ಏರಿಕೆ ಮಾಡುತ್ತಿರುವುದರಿಂದ ಜನ ಸಾಮಾನ್ಯರಿಗೆ ಹೊರೆಯಾಗುತ್ತಿದ್ದೂ ಕೂಡಲೆ ದರವನ್ನು ಇಳಿಸಬೇಕು ಎಂದು ಮಾಜಿ ಸಚಿವ ಎಚ್ ವಾಯ್ ಮೇಟಿ ಆಗ್ರಹಿಸಿದರು.

ಕಮತಗಿ ಕ್ರಾಸ್ ಹತ್ತಿರ ಇರುವ ಕಡ್ಲಿಮಟ್ಟಿ ಪೆಟ್ರೋಲ್ ಪಂಪ್ ನಲ್ಲಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪೆಟ್ರೋಲ್ ಹಾಗೂ ಡೀಸೆಲ್ ಮತ್ತು ಅಡುಗೆ ಅನಿಲ, ದಿನಸಿ ವಸ್ತುಗಳ ಬೆಲೆ ಏರಿಕೆ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ಯ ನೇತೃತ್ವ ವಹಿಸಿ ಮಾತನಾಡಿದರು.ಹಿಂದಿನ ಯುಪಿಎ ಆಡಳಿತದ ಅವಧಿಯಲ್ಲಿ ಪೆಟ್ರೋಲ್ ದರ 50ರೂ ಮತ್ತು ಸಿಲಿಂಡರ್ ದರ 350 ರೂ ಇದ್ದಾಗಲೂ ಬಿಜೆಪಿ ಪಕ್ಷವು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿತು. ಆದರೆ ಈಗ ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ 100 ರೂ ಗಡಿ ದಾಟಿದರೂ ಕೂಡಾ ಬಿಜೆಪಿ ಪಕ್ಷದ ಸಂಸದರು ಹಾಗೂ ಶಾಸಕರು ಯಾರೊಬ್ಬರೂ ಮಾತನಾಡುತ್ತಿಲ್ಲ. ಲಾಕ್ ಡೌನ ಸಂದರ್ಭದಲ್ಲಿ ತೈಲ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರ ಬದುಕೆ ಅತಂತ್ರವಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮುರುಗೇಶ ಕಡ್ಲಿಮಟ್ಟಿ, ಬಸವರಾಜ ಕುಂಬಳಾವತಿ,ಹುಚ್ಚಪ್ಪ ಸಿಂಹಾಸನ, ಸಿದ್ದು ಹೊಸಮನಿ, ದೇವಿಪ್ರಸಾದ್ ನಿಂಬಲಗುಂದಿ, ರಮೇಶ ಜಮಖಂಡಿ, ಸುರೇಶ್ ಹುಲಿಮನಿಗೌಡ್ರ, ಗುರಲಿಂಗಪ್ಪ ಪಾಟೀಲ, ಬಸವರಾಜ ನರಗುಂದ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

Be the first to comment

Leave a Reply

Your email address will not be published.


*