ಜಿಲ್ಲಾ ಸುದ್ದಿಗಳು
ಕರೋನಾ ಮಾಹಾಮಾರಿ ಎರಡನೆ ಅಲೆ ತಿರ್ವವಾಗಿ ಹೆಚ್ಚಾಗುತಿದ್ದಂತೆ ಭಯದ ವಾತಾವರಣ ನಿರ್ಮಾಣ ವಾಗಿತ್ತು ಕರೋನಾ ಸೊಂಕಿತರಿಗೆ ಬೆಡ್ ಸಿಗುತ್ತಿರಲಿಲ್ಲ, ಆಕ್ಸಿಜನ್ ಕೊರತೆ, ಮದ್ಯಮ ವಯಸ್ಸಿನ ಜನರು ಸಾವು, ನಗರದಲ್ಲಿ ಹೆಚ್ಚು ಭಯವನ್ನುಂಟು ಮಾಡಿತ್ತು.ಲಾಕಡೌನ ದಿಂದ ನಗರದಲ್ಲಿ ಯಾವುದೇ ಹೊಟೆಲ್, ಖಾನಾವಳಿ ಗಳಾಗಲಿ ಪ್ರಾರಂಭ ಇರಲಿಲ್ಲ ಇದನ್ನು ನೋಡಿ ಸೊಂಕಿತರ ಸಂಭಂದಿಕರು ಊಟಕ್ಕಾಗಿ ಪರದಾಡಬಾರದು ಎಂದು ಯೋಚಿಸಿ
ಜಿಲ್ಲಾ ಆಸ್ಪತ್ರೆ ಯಲ್ಲಿ ಸೊಂಕಿತರಾಗಿ ಚಿಕಿತ್ಸೆ ಪಡೆಯುತ್ತಿರವ ಸೊಂಕಿತರಿಗೆ ಹಾಗೂ ಅವರ ಸಂಭಂದಿಕರಿಗೆ ಊಟ Home isolation, ಹಾಗೂ ಕಡು ಬಡವರಿಗಾಗಿ ಕಾಮಧೇನು ಸಂಸ್ಥೆ ಊಟದ ಸೇವೆ ಮಾಡಲು ನಿರ್ಣಯ ಮಾಡಿ ಪ್ರಾರಂಭ ಮಾಡಿತು.
ಬಾಗಲಕೋಟೆ: ಕಾಮಧೇನು ಸಂಸ್ಥೆ ಜಿಲ್ಲಾ ಆಸ್ಪತ್ರೆ ಹತ್ತಿರ ಮಧ್ಯಾಹ್ನ ಊಟದ ಪೊಟ್ಟಣ ಶುದ್ಧ ಕುಡಿಯುವ ನೀರು ವಿತರಣೆ ಪ್ರಾರಂಭ ಮಾಡಿತು ಸೊಂಕಿತರ ಸಂಭಂದಿಕರ ಊಟದ ಪೊಟ್ಟಣ ಪಡೆಯುವ ಸಂಧರ್ಭದಲ್ಲಿ ಅವರ ಭಾವನೆ ಯನ್ನೂ ಅರಿತು ಅದರ ಅವಶ್ಯಕತೆ ಹೆಚ್ಚಾಗಿ ಇದೆ ಎಂಬುದು ಗೊತ್ತಾಯಿತು.
ಮಧ್ಯಾಹ್ನ ಮಾತ್ರ ಪ್ರಾರಂಭವಾಗಿದ್ದ ಸೇವೆ ವಿಸ್ತರಿಸಿ ರಾತ್ರಿಯೂ ಊಟದ ವ್ಯವಸ್ಥೆಯನ್ನು ಮಾಡಬೇಕು ಎಂದು ಯೋಚಿಸುವ ಸಂಧರ್ಭದಲ್ಲಿ ಬಾಗಲಕೋಟ ನಗರದ ವಿಪ್ರ ಸಮಾಜದ ಕೇಸರಿ ಟ್ರಸ್ಟ ಪದಾಧಿಕಾರಿಗಳು ನಮಗೆ ಸಂಪರ್ಕಿಸಿ ಕಾಮಧೇನು ಸಂಸ್ಥೆಯ ಸಹಯೋಗದಲ್ಲಿ ರಾತ್ರಿ ಊಟದ ಸೇವೆ ನಾವು ಕಲ್ಪಿಸುತ್ತೆವೆ ಎಂದು lockdown unlock ಆಗುವರೆಗೆ ಜವಾಬ್ದಾರಿ ಯನ್ನು ವಹಿಸಿಕೊಂಡರು
ಹೀಗೆ ರಾತ್ರಿ ಊಟದ ಸೇವೆ ಪ್ರಾರಂಭ ವಾಯಿತು ಬೆಳಿಗ್ಗೆ ಉಪಹಾರದ ವ್ಯವಸ್ಥೆ ಮಾಡುವ ಯೋಚನೆ ಯಲ್ಲಿ ಇದ್ದಾಗ ಬ್ರಾಹ್ಮಣ ಸಮಾಜ ತರುಣ ಸಂಘದ ಪದಾದಿಕಾರಿಗಳು ನಮ್ಮನ್ನು ಸಂಪರ್ಕಿಸಿ ನಿಮ್ಮ ಜೊತೆಗೆ ನಾವು ಕೈ ಜೋಡಿಸಿ ಸೇವೆಯಲ್ಲಿ ಭಾಗಿಯಾಗುತ್ತೆವೆ ಎಂದು ತಿಳಿಸಿದರು ಬೆಳಿಗ್ಗೆ ಉಪಹಾರದ ಜವಾಬ್ದಾರಿ ವಹಿಸಿಕೊಂಡರು ಕಾಮಧೇನು ಸಂಸ್ಥೆ ಸಹಯೋಗದೊಂದಿಗೆ ಉಪಹಾರ ವ್ಯವಸ್ಥೆ ಮಾಡಿ ಸೇವೆ ಯನ್ನೂ ಮಾಡಿದರು.ಈ ಸೇವಾ ಕಾರ್ಯದಲ್ಲಿ ಅನೇಕರು ವಯಸ್ಸಿನಲ್ಲಿ ಹಿರಿಯರಾದರೂ ಉತ್ಸಾಹದಲ್ಲಿ ತರುಣರು ಇದು ನಮಗೆಲ್ಲಾ ಪ್ರೇರಕ ಸಂಗತಿ.
39ದಿನ ಸೇವೆಯ ಅನುಭವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪೆಡೆಯುವರು ಅವರ ಸಂಭಂದಿಕರು ಮನೆಯವರಂತೆ ಪರಿಚಯವಾಗಲು ಪ್ರಾರಂಭ ವಾಯಿತು ಸೊಂಕಿತರ ಜೊತೆಗೆ ಯಾರು ವಯಸ್ಸು ಆದವರು ಬರುತ್ತಿದ್ದರು, ಯಾರು ಸಣ್ಣ ವಯಸ್ಸಿನ ಮಕ್ಕಳು ಬರುತ್ತಿದ್ದರು,ಯಾರು ಸಿರಿಯಸ್ ಆಗಿದ್ದಾರೆ, ಯಾರು ಗುಣಮುಖರಾಗಿದ್ದಾರೆ ಎಂದು ನಮ್ಮಲಿ ತಮ್ಮ ಮನಸ್ಸಿನ ಮಾತು ಹಂಚಿಕೊಳ್ಳತ್ತಿದ್ದರು ನಮ್ಮ ಕಾಮಧೇನು ಸಂಸ್ಥೆ ಯಿಂದ ನಿರಂತರ ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯರು ಹಾಗೂ ಸಿಬ್ಬಂದಿ ಜೊತೆಗೆ ಮಾತನಾಡಿ ನಿತ್ಯ ಆಸ್ಪತ್ರೆಯ ಸೊಂಕಿತರ ಬಗ್ಗೆ ವಿವರಣೆ ಪಡೆದು ವೈದ್ಯರಿಗೆ ಸಿಬ್ಬಂದಿ ಗಳಿಗೆ ಕಾಮಧೇನು ಸಂಸ್ಥೆ ಯಿಂದ ಧನ್ಯವಾದ ಸಲ್ಲಿಸುವುದು ಪ್ರತಿನಿತ್ಯ ಪೊಟ್ಟಣ ವಿತರಣೆ ಇರುತಿತ್ತು.
ಇದರ ಜೊತೆಗೆ ಕಾಮಧೇನು ಸಂಸ್ಥೆ ಬಾಗಲಕೋಟೆಯ 25 ಶ್ರಮಿಕ ಸಾಮಾಜ ಗಳನ್ನು ಗುರುತಿಸಿ ಕಡುಬಡವರಿಗೆ 600ಕ್ಕು ಹೆಚ್ಚು ಕಿರಾಣಿ ದಿನಸಿ ಕಿಟ್ವಿತರಿಸಲಾಯಿತು. 300ಕ್ಕು ಹೆಚ್ಚು ಬಡ ಕುಟುಂಬ ಗಳಿಗೆ ದಿನಸಿ ಕಿರಾಣಿ ಕಿಟ್ ವಿತರಿಸಲಾಯಿತು.ಒಟ್ಟು 900 ದಿನಸಿ ಕಿರಾಣಿ ಕಿಟ್ ವಿತರಿಸಲಾಯಿತು.
ಕಾಮಧೇನು ಸಂಸ್ಥೆಯ ಜೊತೆಗೆ ಸಹಕರಿಸಿದ ವಿಪ್ರ ಸಮಾಜ ಕೇಸರಿ ಟ್ರಸ್ಟ್, ಬ್ರಾಹ್ಮಣ ತರುಣ ಸಂಘ, ರೊಟರಿ ಕ್ಲಬ್, ನಿರಲಕೇರಿ ಪಿ.ಕೆ.ಪಿ.ಎಸ್. ಸೊಸೈಟಿ,ಇನ್ನರ್ ವ್ಹಿಲ್ ಹಾಗೂ ಮಾಜಿ ಶಾಸಕರು ಪಿ.ಎಚ್. ಪೂಜಾರ. ಮಲ್ಲಿಕಾರ್ಜುನ ಚರಂತಿಮಠ, ಹಿತೇಶ ಪಟೇಲ್,ಪ್ರದೀಪ್ ರಾಯ್ಕರ, ಎಮ್.ಆರ್. ಶಿಂಧೆ, ಸಂಜೆ ದರ್ಶನ ಸಂಪಾದಕರು ಮಹೇಶ್ ಅಂಗಡಿ, ಡಾಕ್ಟರ,ಶಿವಾನಂದ ಬಡದೇಸಾಯಿ ಹಾಗೂ ಅನೇಕ ಗಣ್ಯರು ಕಾಮಧೇನು ಸಂಸ್ಥೆ ಸೇವಾ ಕಾರ್ಯಕ್ಕೆ ಸಹಕರಿಸಿ ಕರೋನಾ ಸಂಧರ್ಭದಲ್ಲಿ ಹಸಿವು ನಿಗಿಸುವ ಸೇವಾ ಪ್ರಯತ್ನ ಕಾಮಧೇನು ಸಂಸ್ಥೆ ಮುಖಾಂತರ ಮಾಡಲಾಯಿತು.
ಇಂದು ರವಿವಾರ ಊಟದ ಸೇವೆ ಸಮಾರೋಪ ಇರುವುದರಿಂದ ವೈದ್ಯರಿಗೆ, ಸೊಂಕಿತರಿಗೆ, ಅವರ ಸಂಭಂದಿಕರಿಗೆ ವಿಶೇಷ ಊಟದ ವ್ಯವಸ್ಥೆ ಮಾಡಿದೆ ಹೋಳಿಗೆ,ಹಾಲು, ಶಿಕರಣಿ, ಬದನೆಕಾಯಿ ಪಲ್ಯ, ಅನ್ನ ,ಕಟ್ಟಿನ್ ಸಾರು ಮೊದಲಾದ ಸವಿ ಭೋಜ್ಯ ದೊಂದಿಗೆ ಊಟದ ಸೇವೆ ಮಾಡಲಾಯಿತು.39ದಿನಗಳು ಕರೋನಾ ಮಹಾಮಾರಿ ಎರಡನೇ ಅಲೆ ಸಂಕಷ್ಟದ ಸಂಧರ್ಭದಲ್ಲಿ 32ಸಾವಿರ ಉಪಹಾರ ಊಟದ ಪೊಟ್ಟಣ ವಿತರಣೆ.
ಉಪ್ಪಿಟ್ಟು, ಶಿರಾ,ಇಡ್ಲಿ, ವಡಾ,ಅವಲಕ್ಕಿ, ಶಾಂವಗಿ ಬಾತ್,ಮತ್ತು ಊಟ ಚಪಾತಿ, ಪಲ್ಯ, ಅನ್ನ ,ಹೋಳಿಗೆ, ಪಲಾವ್, ಪೊಂಗಲ್, ಬಿಸಿ ಬೆಳೆಬಾತ್,ಮೊಸರ ಅನ್ನ, ಇನ್ನಿತರ ಊಟದ ಪೊಟ್ಟಣ ಶುದ್ಧ ಕುಡಿಯುವ ನೀರು ಕಾಮಧೇನು ಸಂಸ್ಥೆ ಪೂರೈಸಿ ಚಿಕ್ಕ ಸೇವಾ ಕಾರ್ಯ ಮಾಡಲಾಯಿತು.ಇಂತಹ ವಿಷಮ ಸಂದರ್ಭದಲ್ಲಿ
ಸಹಕರಿಸಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು ಸಲ್ಲಿಸುತ್ತದೆ.
ಸದಾ ಸೇವೆ ಯಲ್ಲಿ ಕಾಮಧೇನು ಸಂಸ್ಥೆ ಪ್ರಮುಖರು
ರವಿ ಕುಮುಟಗಿ,ವಿಜಯ ಸುಲಾಖೆ,ಅಶೋಕ ಮುತ್ತಿನಮಠ,ಶಿವುಕುಮಾರ ಮೇಲ್ನಾಡ,ಸಂತೋಷ ಹೊಕ್ರಾಣಿ,ಬಸವರಾಜ ಕಟಗೇರಿ ಹಾಗೂ ಕಾರ್ಯಕರ್ತರು ಆನಂದ ಬಾಂಡಗೆ, ಅಶೋಕ ಮಹಿಂದ್ರಕರ, ರಾಘು ಕಲಾಲ, ಮಲ್ಲು ಸಜ್ಜನ,ಶಂಕರ ಕಂಗನಾಳ,ಮಲ್ಲು ವಡಗೇರಿ,ಸಂತೋಷ ಕಪಾಟೆ,ರಾಜು ಗೌಳಿ ರಾಘು ಯಾದಗಿರಿ, ಗಣೇಶ ಸುರಪುರ ಇತರರಿದ್ದರು.
Be the first to comment