ಜಿಲ್ಲಾ ಸುದ್ದಿಗಳು
ಕೊರೋನಾ ಹರಡುವಿಕೆ ತಡೆಗಟ್ಟುವಲ್ಲಿ, ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಆಶಾ ಕಾರ್ಯಕರ್ತೆಯರು ಮೊದಲ ಸಾಲಿನಲ್ಲಿದ್ದಾರೆ. ಕೊರೋನಾ ನಿಯಂತ್ರಣಕ್ಕಾಗಿ ಜನರಲ್ಲಿ ಎಚ್ಚರಿಕೆ ಮೂಡಿಸಲು ಮನೆ ಮನೆಗೆ ಭೇಟಿ ಮೂಲಕ ಕೊರೋನಾ ವಾರಿಯರ್ಸ್ ನಿರಂತರವಾಗಿ ಶ್ರಮಿಸಿದ್ದು, ಅವರ ಕಾರ್ಯ ಅಭಿನಂದನಾರ್ಹವಾದುದು ನಗರ ಸಭಾ ಅಧ್ಯಕ್ಷೆ ಜ್ಯೋತಿ ಕೇಶವ ಭಜಂತ್ರಿ.
ಬಾಗಲಕೋಟೆ:ಕೊರೊನ ಎರಡನೆ ಅಲೆ ವ್ಯಾಪಕವಾಗಿ ಹರಡುತ್ತಿರು ಹಿನ್ನೆಲೆಯಲ್ಲಿ ಬಾಗಲಕೋಟ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆಶಾ ಕಾರ್ಯಕರ್ತರು ಕೊರೋನಾ ನಿಯಂತ್ರಣಕ್ಕಾಗಿ ಜನರಲ್ಲಿ ಎಚ್ಚರಿಕೆ ಮೂಡಿಸಲು ಮನೆ ಮನೆಗೆ ಭೇಟಿ ಮೂಲಕ ಕೊರೋನಾ ವಾರಿಯರ್ಸ್ ನಿರಂತರವಾಗಿ ಶ್ರಮಿಸಿದ್ದು, ಅವರ ಕಾರ್ಯಕ್ಕೆ ನಗರಸಭಾ ಅಧ್ಯಕ್ಷೆ ಮತ್ತು ಸದಸ್ಯರೆಲ್ಲರು ಅಭಿನಂದಿಸಿ ದಿನಸಿ ಕಿಟ್ ವಿತರಿಸಿದರು.
ಕೊರೊನಾ ವಾರಿಯಸ್೯ ಕಾರ್ಯಕರ್ತರಾದ ಆಶಾ ಕರ್ತೆಯರಿಗೆ ಲಾಕ್ ಡೌನ್ ಜಾರಿಯಾದಾಗಿನಿಂದ ಪ್ರತಿ ದಿನ ನಿರಂತರವಾಗಿ ತಮ್ಮ ಕಾರ್ಯ ಮುಗಿದ ನಂತರ ಅವರೆಲ್ಲರಿಗೂ ನಗರಸಭಾ ಅಧ್ಯಕ್ಷಣೆ ಮತ್ತು ಸದಸ್ಯರೆಲ್ಲರು ಊಟದ ವ್ಯವಸ್ಥೆ ಮಾಡುತ್ತಿದ್ದರು.ಒಂದು ದಿನ ವಿಶೇಷವಾಗಿ ಶಾಸಕರಾದ ವೀರಣ್ಣ ಚರಂತಿಮಠರವರ ಜನ್ಮದಿನದಂದು ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಇಂದು ಸೆಕ್ಟರ್ ನಂಬರ್ 29ರ ಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಆಶಾ ಕಾರ್ಯಕರ್ತೆಯರಿಗೆ ಮತ್ತು ಸ್ಟಾಪ್ ನಸ್೯ಗಳಿಗೆ ದಿನಸಿ ಕಿಟ್ ವಿತರಿಸಿ ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಕೇಶವ ಭಜಂತ್ರಿ, ಸದಸ್ಯರಾದ ಶ್ರೀಮತಿ ನಾಗರತ್ನ ಹೆಬ್ಬಳ್ಳಿ,ಚನ್ನಯ್ಯ ಹಿರೇಮಠ,ಶ್ರೀನಿವಾಸ ಸಜ್ಜನ,ಶಿವ ಬಸವ ಬಳ್ಳಾರಿ,ಪ್ರಕಾಶ ಹಂಡಿ,ಸವಿತಾ ಲೆಂಕೆನ್ನವರ,ಬಸವರಾಜ ಯಂಕಂಚಿ,ಶಿವು ಜಾಲಗಾರ,ಬಸವರಾಜ ಹೆಳವರ,ಶರಣು ಗೌಡರ,ಸಾಲಿಮಠ ಗುರುಗಳು,ಶಿವಶಂಕರ ನಿಂಬರಗಿ ಇತರರು ಉಪಸ್ಥಿತರಿದ್ದರು.
Be the first to comment