ಪೊಲೀಸರಿಗೆ ತಾಕತ್ತಿಗೆ ಎನರ್ಜಿ ಬೂಸ್ಟ್ ವಿತರಣೆ ಸಮಾಜ ಸೇವಕ ಡಿ.ಎಂ.ದೇವರಾಜ್ ಮತ್ತು ವಾಸ್ತು ತಜ್ಞ ಡಾ.ಆನಂದ್ ಕುಮಾರ್ ನೇತೃತ್ವದಲ್ಲಿ ಸೇವೆ ವಿಜಯಪುರ ವೃತ್ತ ನಿರೀಕ್ಷಕ ಕೆ.ಶ್ರೀನಿವಾಸ್ ಅವರಿಗೆ ಹಸ್ತಾಂತರ ಪೊಲೀಸ್ ಸಿಬ್ಬಂದಿಗೆ ವಿಶೇಷ ಕೊಡುಗೆ 

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿ 

ಪೊಲೀಸರ ಜೊತೆ ಜೊತೆಯಲ್ಲಿ ಸಮಾಜದಲ್ಲಿ ನೊಂದವರಿಗೆ, ಬಡವರಿಗೆ, ನಿರ್ಗತಿಕರಿಗೆ, ಕೋವಿಡ್ ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುವಂತಾಗಬೇಕು ಎಂದು ವಿಜಯಪುರ ವೃತ್ತ ನಿರೀಕ್ಷಕ ಕೆ.ಶ್ರೀನಿವಾಸ್ ತಿಳಿಸಿದ್ರು.

CHETAN KENDULI

 

ದೇವನಹಳ್ಳಿ ತಾಲೂಕಿನ ಚಪ್ಪರದಕಲ್ಲುಸರ್ಕಲ್ ಬಳಿಯ ವಿಶ್ವನಾಥಪುರ ಪೊಲೀಸ್ ಠಾಣೆ ಆವರಣದಲ್ಲಿ ಸಮಾಜ ಸೇವಕ ಡಿ.ಎಂ.ದೇವರಾಜ್ ಮತ್ತು ವಾಸ್ತು ತಜ್ಞ ಡಾ.ಆನಂದ್ ಅವರಿಂದ ಎನರ್ಜಿ ಬೂಸ್ಟ್ ಬಾಟೆಲ್‌ಗಳನ್ನು ಸ್ವೀಕರಿಸಿ ಅವರು ಮಾತನಾಡಿದರು. ಫ್ರಂಟ್‌ಲೇನ್ ವಾರಿಯರ್ಸ್‌ಗಳಾದ ಪೊಲೀಸರಿಗೆ ಇಂತಹದೊಂದು ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯ. ನಿರಂತರವಾಗಿ ಕೋವಿಡ್ ಸೋಂಕಿತರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು. ಜತೆಗೆ ಜನ ಸಾಮಾನ್ಯರಿಗೆ ಕೋವಿಡ್ ಅರಿವು ಮತ್ತು ಸಾಮಾಜಿಕ ಅಂತರದ ಜಾಗೃತಿಯನ್ನು ಮೂಡಿಸಬೇಕು. ಪೊಲೀಸರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದ್ರು.

ವಾಒ: ವಾಸ್ತು ತಜ್ಞ ಡಾ.ಆನಂದ್ ಮಾತನಾಡಿ, ಇಡೀ ಪ್ರಪಂಚಕ್ಕೆ ಮಾರಕವಾಗಿರುವ ಕೊರೊನಾ ವಿರುದ್ಧ ಹೋರಾಡುವ ಪೊಲೀಸರ ಕಾರ್ಯ ಶ್ಲಾಘನೀಯ. ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ವಿಶ್ವನಾಥಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಅಭಿನಂದಿಸುತ್ತೇನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಶ್ರೀನಿವಾಸ್ ಅವರಿಗೆ ವಾಸ್ತು ತಜ್ಞ ಡಾ.ಆನಂದ್ ವಾಸ್ತು ಶಾಸ್ತ್ರದ ಪುಸ್ತಕಗಳನ್ನು ವಿತರಿಸಿದರು. ಇನ್ನೂ ಈ ಸಂದರ್ಭದಲ್ಲಿ ವಿಶ್ವನಾಥಪುರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ವೆಂಕಟೇಶ್, ಸಮಾಜ ಸೇವಕ ಡಿ.ಎಂ.ದೇವರಾಜ್, ಪೊಲೀಸ್ ಸಿಬ್ಬಂದಿ ಮತ್ತಿತರರು ಇದ್ದರು.

Be the first to comment

Leave a Reply

Your email address will not be published.


*