ಜಿಲ್ಲಾ ಸುದ್ದಿಗಳು
ಉಡುಪಿ
ಅಖಿಲ ಭಾರತ ಜರ್ನಲಿಸ್ಟ್ ಫೆಡರೇಶನ್ (ರಿ) ದೆಹಲಿ (ರಾಷ್ಟ್ರೀಯ ಜರ್ನಲಿಸ್ಟ್ ಯೂನಿಯನ್ . ದೆಹಲಿ) ನ ಉಡುಪಿ ಜಿಲ್ಲಾಧ್ಯಕ್ಷರಾಗಿ ವಾರ್ತಾ ಭಾರತಿ ಕನ್ನಡ ದಿನಪತ್ರಿಕೆ ಕುಂದಾಪುರ ವರದಿಗಾರ ಹಿರಿಯ ಪತ್ರಕರ್ತ ಇಬ್ರಾಹಿಂ ಬ್ಯಾರಿ ಕೋಟ ಅವರನ್ನು ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಕುಮಾರ ನಾಯ್ಕ ಭಟ್ಕಳ ಅವರ ಸೂಚನೆಯ ಮೇರೆಗೆ ಆಯ್ಕೆ ಮಾಡಿ ರಾಷ್ಟ್ರೀಯ ಅಧ್ಯಕ್ಷರಾದ ಜಿ. ರಾಜೇಶ್ ಅವರು ಆದೇಶ ಹೊರಡಿಸಿದ್ದಾರೆ. ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿ ಭೀಮಾ ವಾದ ಪತ್ರಿಕೆಯ ಉಡುಪಿ ಜಿಲ್ಲಾ ವರದಿಗಾರರು ಆದ ಶೇಖರ್ ಹವಂಜೆ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಕರಾವಳಿಯ ಜಿಲ್ಲೆಯ ಪತ್ರಕರ್ತರ ಧ್ವನಿಯಾಗಿ , ಪತ್ರಕರ್ತರಿಗೆ ಯಾವುದೇ ರೀತಿ ತೊಂದರೆ ಆದರೆ ಅವರಿಗೆ ಸಹಾಯ ಸಹಕಾರ ನೀಡುವುದರ ಜೊತೆಗೆ , ಸದಾ ಬಡ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
Be the first to comment