ದೈವೈಕ್ಯರಾದ ಪರ್ತಗಾಳಿ ಶ್ರೀವಿದ್ಯಾಧಿರಾಜತೀರ್ಥ ಸ್ವಾಮಿಗಳು

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು

ಕುಮಟಾ

CHETAN KENDULI

ಗೋಕರ್ಣದ ಪರ್ತಗಾಳಿ ಮಠದ ಶ್ರೀವಿದ್ಯಾಧಿರಾಜತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಸೋಮವಾರ ಮಧ್ಯಾಹ್ನ 1.10 ಕ್ಕೆ ಅವರು ವಿಷ್ಣುಪಾದ ಸೇರಿಕೊಂಡಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಗಂಗೊಳ್ಳಿಯ ಸೇನಾಪುರ ಆಚಾರ್ಯ ಮನೆತನದವರಾದ ಅವರು ಗಂಗೊಳ್ಳಿಯ ಶ್ರೀ ವೇಂಕಟರಮಣ ದೇವಾಲಯದ ಅರ್ಚಕ ಮನೆತನದವರು. ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಮತ್ತ ಶ್ರೀಮತಿ ದಂಪತಿಯ ದ್ವಿತೀಯ ಪುತ್ರರಾಗಿ ಜನಿಸಿದರು. ಅವರ ಪೂರ್ವಾಶ್ರಮದ ಹೆಸರು ರಾಘವೇಂದ್ರ, ಗಂಗೊಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮ ಶಿಕ್ಷಣ ಪಡೆದು ಕುಂದಾಪುರದ ಭಂಡಾರಕರ ಕಾಲೇಜಿನಲ್ಲಿ ಓದುವಾಗ ಶ್ರೀ ದ್ವಾರಕಾನಾಥ ಶ್ರೀಗಳ ಶಿಷ್ಯತ್ವ ಹೊಂದುವ ಅವಕಾಶ ಬಂತು. ಗುರುವರ್ಯರ ಆದೇಶ ಕೇಳಿ ಖುಷಿಯಿಂದ ಸನ್ಯಾಸಾಶ್ರಮ ಸ್ವೀಕಾರಕ್ಕೆ ಒಪ್ಪಿದರು. ಮುಂಬಯಿ ವಡಾಲಾದ ದ್ವಾರಕಾನಾಥ ಭವನದಲ್ಲಿ ಅವರು ಶ್ರೀ ದ್ವಾರಕಾನಾಥ ಸ್ವಾಮಿಗಳಿಂದ 9-2-1967ರಲ್ಲಿ ಸನ್ಯಾಸ ದೀಕ್ಷೆ ಪಡೆದು ಶ್ರೀಮದ್ ವಿದ್ಯಾಧಿರಾಜ ತೀರ್ಥ ಸ್ವಾಮಿಗಳಾಗಿ ನಾಮಕರಣಗೊಂಡರು. ಸುಮಾರು ಐದು ದಶಕಗಳ ಸನ್ಯಾಸಾಶ್ರಮದಲ್ಲಿದ್ದ ಅವರು ಶ್ರೀಗಳು 1971ರಲ್ಲಿ ಗೋಕರ್ಣ ಪರ್ಥಗಾಳಿ ಮಠದ ಪೀಠಾಧಿಪತಿಗಳಾಗಿದ್ದರು.


ಮೂಲತಃ ಉಡಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯವರಾದ ಶ್ರೀಗಳು ಇದೇ ಜುಲೈ.28 ರಂದು ಪರ್ತಗಾಳಿ ಮಠದಲ್ಲಿ ಚಾತುರ್ಮಾಸ್ಯ ವ್ರತ ಸ್ವೀಕಾರ ಮಾಡುವವರಿದ್ದರು. ಶ್ರೀಗಳು ತಮ್ಮ ಅವಧಿಯಲ್ಲಿ ಪರ್ತಗಾಳಿ ಮೂಲಮಠದ ಜೊತೆಗೆ ಶಾಖಾ ಮಠಗಳ ಅಭಿವೃದ್ಧಿ ಮಾಡಿದ್ದರು.

Be the first to comment

Leave a Reply

Your email address will not be published.


*