ಗವಿಶ್ರೀಗಳಿಂದ ಅಭಿನಂದನ್ ಸಂಸ್ಥೆಯ ಡಿಜಿಟಲ್ ರಸಪ್ರಶ್ನೆಯ 500 ರ ಸಂಚಿಕೆಗೆ ಚಾಲನೆ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ಅಭಿನಂದನ್ ಸಂಸ್ಥೆ ವತಿಯಿಂದ ಕಳೆದ ಒಂದುವರೆ ವರ್ಷದಿಂದ ಸತತವಾಗಿ ನಡೆಸಿಕೊಂಡು ಬರುತ್ತಿರುವ “ಡಿಜಿಟಲ್ ರಸಪ್ರಶ್ನೆ ಥಟ್ ಅಂತ ಉತ್ತರಿಸಿ” ಕಾರ್ಯಕ್ರಮವು ಯಶಸ್ವಿಯಾಗಿ 500 ಸಂಚಿಕೆಯನ್ನು ತಲುಪಿದೆ. ಈ ಯಶಸ್ವಿ 500 ರ‌ ಸಂಚಿಕೆಯನ್ನು ಕೊಪ್ಪಳದ ಗವಿಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿ ಚಾಲನೆಯನ್ನು ನೀಡಿದರು.

CHETAN KENDULI

ಚಾಲನೆಯನ್ನು ನೀಡಿ ಮಾತನಾಡಿದ ಶ್ರೀಗಳು ಸತತವಾಗಿ 499 ಸಂಚಿಕೆಯ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಸ್ಪರ್ಧಾರ್ಥಿಗಳಿಗೆ ಉತ್ತಮವಾದ ರೀತಿಯಲ್ಲಿ ಸಹಕಾರ ನೀಡುವ ದೃಷ್ಟಿಯಲ್ಲಿ ಕಾರ್ಯ ನಿರ್ವಹಿಸಿರುವುದು ಅಮೋಘ ಸಾಧನೆಯಾಗಿದೆ. ಹಾಗೂ ಈ ಅಭಿನಂದನ್ ಸಂಸ್ಥೆಯ ಸಾಮಾಜಿಕ ಕಾರ್ಯಗಳ ಪಟ್ಟಿಯನ್ನು ಗಮನಿಸಿದರೆ ಬಹಳ ಹೆಮ್ಮೆಯ ಸಂಗತಿ ಎಂದೆನಿಸುತ್ತದೆ.

ಈ ಸಂಸ್ಥೆಯ ಈ ಕಾರ್ಯಗಳು ಹೀಗೆ ಮುಂದುವರಿದು ತಮ್ಮ ಸೇವಾ ಕಾರ್ಯಗಳ ಮೂಲಕ ಜಗದಗಲ ವ್ಯಾಪಿಸಲಿ ಎಂದ ಹರಸುವ ಮೂಲಕ ತಮ್ಮ ಆಶಿರ್ವಾಧ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಕಳಕಪ್ಪ‌ ಹಾದಿಮನಿ ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಸದಸ್ಯರಾದ ಶೃತಿ ರಾಮಣ್ಣ ಹಂಪರಗುಂದಿ, ಮಲ್ಲಿಕಾರ್ಜುನ ಬಡಿಗೇರ, ಅಮೀತ್ ಕುಮಾರ್ ಪುಟ್ಟಿ ಮತ್ತು ಗವಿಶ್ರೀ ಮಠದ ಭಕ್ತಾದಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*