ವಿಜಯನಗರ ಸುದ್ದಿ ಆ02:
(ಹೊಸಪೇಟೆ-ವಿಜಯನಗರ)ಅತೀ ಹಿಂದುಳಿದ ಅಲೆಮಾರಿ ಹೆಳವ ಸಮುದಾಯವನ್ನು ಪರಿಶಿಷ್ಟ (ಎಸ್ಟಿ) ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಹೆಳವ ಸಮಾಜ ವಿಜಯನಗರ ಜಿಲ್ಲಾ ಘಟಕದ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನೂರಾರು ಜನರೊಂದಿಗೆ ಆರಂಭಗೊಂಡ ಪ್ರತಿಭಟನೆ ಬಸ್ ನಿಲ್ದಾಣ, ಡಾ :ಪುನೀತ್ ರಾಜಕುಮಾರ್ ವೃತ್ತ, ಡಾ: ಬಿ.ಆರ್ ಅಂಬೇಡ್ಕರ್ ವೃತ್ತದ ಮೂಲಕ ಹಾದು ಅಮರಾವತಿಯ ಜಿಲ್ಲಾಧಿಕಾರಿ ಕಚೇರಿ ತಲುಪಿ, ಅಲ್ಲಿ ನೂರಾರು ಜನರೊಂದಿಗೆ ಸಮಾವೇಶಗೊಂಡಿತು.
ನಂತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೆಳವ ಸಮಾಜದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಬಸವ ಬೃಂಗೇಶ್ವರ ಶ್ರೀಗಳು ಮಾತನಾಡಿ ಅತೀ ಹಿಂದುಳಿದ ಹೆಳವ ಸಮಾಜದವರು ಅಲೆಮಾರಿ ಗುಂಪಿಗೆ ಸೇರಿದವರಾಗಿದ್ದಾರೆ.
ಊರೂರು ಅಲೆಯುತ್ತ ರಸ್ತೆಬದಿಗಳಲ್ಲಿ ಟೆಂಟ್ ಹಾಕಿಕೊಂಡು ಕಾಲ ಕಳೆಯುತ್ತಿದ್ದೇವೆ, ಸಾಮಾಜಿಕ ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕ ಸೇರಿದಂತೆ ಎಲ್ಲ ರಂಗದಲ್ಲೂ ನಮ್ಮ ಜನ ಹಿಂದುಳಿದವರಾಗಿದ್ದಾರೆ, ಪರಿಶಿಷ್ಟ ಪಂಗಡ ಪಟ್ಟಿಯಲ್ಲಿರಬೇಕಾದ ಅಲೆಮಾರಿ ಹೆಳವರು ಪ್ರವರ್ಗ-1ರಲ್ಲಿ ದ್ದಾರೆ. 1975 ರಲ್ಲಿ ಎಲ್ ಜಿ ಹಾವನೂರು ಹಾಗೂ 1992ರಲ್ಲಿ ಡಿ.ಕೆ.ನಾಯ್ಕರ್ ಆಯೋಗದ ವರದಿಯು ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡಿದೆ. ಆದರೆ ಅದು ಇನ್ನುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದರು. ಹೆಳವ ಸಮಾಜದವರ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿ 2018ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದರೆ, ಸರ್ಕಾರದ ದಿವ್ಯ ನಿರ್ಲಕ್ಷತನದಿಂದ ಇನ್ನು ಸಮಾಜ ಕಲ್ಯಾಣ ಇಲಾಖೆ ಬಳಿಯಲ್ಲಿಯೇ ಕಡತ ಉಳಿದಿದೆ.
ಮುಖ್ಯಮಂತ್ರಿಯವರು ಕೂಡಲೇ ಕಡತವನ್ನು ತರಿಸಿಕೊಂಡು ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಿ ಎಸ್ಟಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಬಿ ಹೆಚ್ ಕಲಬುರ್ಗಿ, ಹೆಚ್. ಎನ್. ಗೋಗಿ, ರಾಜ್ಯ ಕಾರ್ಯದರ್ಶಿ ಶರಣಪ್ಪ ಕೆಲೂರ,ಅಮೃತ ದಪ್ಪಿನವರ, ಯಮುನಪ್ಪ ಹೆಳವರ, ಸಮಾಜದ ಜಿಲ್ಲಾಧ್ಯಕ್ಷ ಶೇಕ್ಷ ವಲಿ ಹೆಳವರ, ಬಾಬು ಹೆಳವರ, ಶಿವಶರಣ ಹೆಳವರ, ಗವಿಸಿದ್ದಪ್ಪ ಕೊಪ್ಪಳ, ಕೆಂಚಪ್ಪ ಹೆಳವರ, ಶ್ರೀಮಂತ ಸೌಂದರ್ಗೆ, ಡಾ:ಹಣಮಂತರಾಯ ಯಾದಗಿರಿ,ಚಂದಪ್ಪ ಕಕ್ಕೇರಿ, ನೆಹರೂ, ಮಂಜುನಾಥ, ನಿಂಗಣ್ಣ ಸೇರಿದಂತೆ ಪ್ರತಿಭಟನೆಯಲ್ಲಿ ಅನೇಕ ಜನ ಪಾಲ್ಗೊಂಡಿದ್ದರು.
Be the first to comment