ಸಹಕಾರಕ್ಕೆ ನಿಲುಕದ ಸಾಧನೆ ಯಾವುದೂ ಇಲ್ಲ: ರಾಘವೇಂದ್ರ ಕುಲಕರ್ಣಿ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ಇಂದು ಬಳಗಾನೂರಿನ ಬಂಧುಶತಪುರೇಶ ಪತ್ತಿನ ಸೌಹಾರ್ದ ಸಹಕಾರಿಯ ಮಾಸಿಕ ಸಭೆ, ಸಹಕಾರಿ ದಿನ ಮತ್ತು ಹೊಸವರ್ಷಾಚರಣೆ,ಹಾಗೂ ಸುರೇಶ ಬಳಗಾನೂರರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸಹಕಾರಿ ರತ್ನ ಸಿದ್ದನಗೌಡ ಕಣಗಿನಹಾಳರ ಸಾಧನೆ ಅವಿಸ್ಮರಣೀಯ ಅವರು ಸಹಕಾರಿ ಕ್ಷೇತ್ರದಲ್ಲಿ ತಮ್ಮದೇಯಾದ ಸಾಧನೆಗೈದು ಸಹಕಾರಿ ಪಿತಾಮಹರಾಗಿದ್ದಾರೆ. ಅವರ ಆದರ್ಶ ನಮಗೆ ದಾರಿದೀಪವಾಗಬೇಕು.ಹಣಕಾಸು ಇಲ್ಲದವನು ಬಡವನಲ್ಲ, ಪರಸ್ಪರ ಸಹಕಾರ ಇಲ್ಲದವನು ನಿಜವಾದ ಬಡವ ಎಂದು ಬಳಗಾನೂರಿನ ಬಂಧುಶತಪುರೇಶ ಪತ್ತಿನ ಸೌಹಾರ್ದ ಸಹಕಾರಿಯ ನಿರ್ದೇಶಕ ರಾಘವೇಂದ್ರ ಕುಲಕರ್ಣಿ ಹೇಳಿದರು.

CHETAN KENDULI

ನಮ್ಮ ಸಹಕಾರಿಯಲ್ಲಿ ಸೇಫ್ಟಿಲಾಕರ್ ವ್ಯವಸ್ತೆ, ಠೇವಣಿ, ದ್ವಿಗುಣ, ಬಂಗಾರದ ಅಡಮಾನ ಸಾಲ, ಹಿರಿಯ ನಾಗರಿಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ಠೇವಣಿಗೆ ಅಧಿಕ ಬಡ್ಡಿ, ನೀಡಲಾಗುವುದು. ಜೀವನದಲ್ಲಿ ಅಭಿವೃದ್ದಿ ಹೊಂದುವ ಮನಸ್ಸಿದ್ದವರು ನಮ್ಮ ಸಹಕಾರಿಯಿಂದ ಲಾಭಪಡೆಯಬಹುದೆಂದು ಹೇಳಿದರು.ಸುರೇಶ ಬಳಗಾನೂರರಿಗೆ ಪತ್ರಿಕೋಧ್ಯಮದಲ್ಲಿ ಮಾಡಿದ ಗಣನೀಯ ಸೇವೆಗೆ ಸಂಧ ಪತ್ರಿಕೋದ್ಯಮ ರತ್ನ ರಾಜ್ಯ ಪ್ರಶಸ್ತಿಯ ಪ್ರಯುಕ್ತ ಸಹಕಾರಿಯ ಸಕಲ ಪದಾಧಿಕಾರಿಗಳು ಅವರಿಗೆ ಗೌರವ ಸನ್ಮಾನ ಮಾಡುವುದರ ಜೊತೆಗೆ ಹೊಸವರ್ಷಾಚರಣೆ,ಮಾಸಿಕ ಸಭೆ, ಮತ್ತು ಸಹಕಾರಿ ದಿನಾಚರಣೆ ಮಾಡಿದರು.

ಈ ಸಂದರ್ಭದಲ್ಲಿ ಸಹಕಾರಿಯ ಅಧ್ಯಕ್ಷರಾದ ಶ್ರೀಧರ್, ಹಾಗೂ ನಿರ್ದೇಶಕರಾಗಿರುವ ವೆಂಕೋಬ ಪೂಜಾರ್,ಬಿಷ್ಠಪ್ಪ, ಶಿವಾನಂದ ಶೆಳ್ಳಿಗಿ, ಕೃಷ್ಣ,ಶ್ರೀಮತಿ ಲೀಲಾ ಕಟ್ಟಿ, ಶ್ರೀಮತಿ ವೀಣಾ,ಜೊತೆಗೆ ಬಸವರಾಜ ಕರಡಕಲ್ ಸೇರಿದಂತೆ ಸಹಕಾರಿಯ ವ್ಯವಸ್ಥಾಪಕರು, ಕರಣಿಕರು, ಖಜಾಂಚಿಗಳು ಇದ್ದರು.

Be the first to comment

Leave a Reply

Your email address will not be published.


*