ಜಿಲ್ಲಾ ಸುದ್ದಿಗಳು
ಕೋಟ
ಕೋಟತಟ್ಟು ಗ್ರಾಮದ ಕೊರಗ ಸಮುದಾಯದ ಮೇಲೆ ಪೋಲಿಸರು ಲಾಠಿ ಚಾರ್ಜ್ ನಡೆಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಗ ಸಮುದಾಯದ ಕುಟುಂಬಿಕರು ಕೋಟದ ಅಮೃತೇಶ್ವರಿ ದೇವಿಗೆ ಮೊರೆ ಇಟ್ಟ ಘಟನೆ ಶನಿವಾರ ನಡೆಯಿತು.ಕೊರಗ ಸಮಾಜದ ಮುಖಂಡ ಗಣೇಶ್ ಬಾರ್ಕೂರು ಮಾತನಾಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಳದ ಹೊರಭಾಗದಲ್ಲಿ ಕುಟುಂಬ ಸಹಿತ ತೆಂಗಿನ ಕಾಯಿ ಒಡೆದು ತಮ್ಮ ನೋವಿಗೆ ಕಾರಣಿಕರ್ತರಾದ ಯಾರೇ ಇರಬಹುದು ಅಂತವರನ್ನು ತಾಯಿ ನೋಡಿಕೊಳ್ಳಲಿ.
ನಾವು ಅನ್ಯಾಯ ಮಾಡಿ ಬದುಕಿದವರಲ್ಲ. ನಮ್ಮ ಕಾರ್ಯಕ್ರಮ ವಸ್ತುನಿಷ್ಟೆಯಾಗಿ ನಡೆಯುವ ಸಂದರ್ಭದಲ್ಲಿ ನಮ್ಮ ಮೇಲೆ ಏಕಾಏಕಿ ಹಲ್ಲೆ ಮಾಡಿ ಇಡೀ ಕುಟುಂಬ ಭಯದಲ್ಲಿ ಬದುಕುವಂತೆ ಮಾಡಿದ್ದಾರೆ. ನಮ್ಮನ್ನು ಕಾಯುವ ದೇವರ ಮೊರೆ ಹೋಗಲು ಹಿರಿಯರು ಸೂಚಿಸಿದ್ದಾರೆ.ಯಾರನ್ನಾದರೂ ಕಣ್ಣು ಕಟ್ಟಬಹುದು ಆದರೆ ದೇವಿಯ ಕಣ್ಣು ಕಟ್ಟಲು ಸಾಧ್ಯವಿಲ್ಲ. ಅಂತಯೇ ನೊಂದ ನಮ್ಮ ಸಮಯದಾಯಕ್ಕೆ ಆ ತಾಯಿ ನ್ಯಾಯ ಒದಗಿಸುತ್ತಾಳೆ ಎಂಬ ನಂಬಿಕೆ ಇಟ್ಟಿದ್ದೇವೆ. ಇಂದಿನಿಂದಲೇ ನೆಮ್ಮದಿಯ ಜೀವನ ಸಾಗಿಸಲು ತಾಯಿ ಅನುಗ್ರಹಿಸಲಿ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ನಾಗರಾಜ್ ಪುತ್ರನ್ ಹಾಗೂ ನಾಗೇಂದ್ರ ಪುತ್ರನ್ ಇವರ ಮೇಲೂ ಪೊಲೀಸರು ಸುಳ್ಳು ಕೇಸು ದಾಖಲಿಸಿದ್ದುರಿಂದ ಇವರು ಕೊಡ ತಾಯಿ ಅಮೃತೇಶ್ವರಿ ದೇವಿಗೆ ಮೊರೆ ಹೋಗಿ ಪೂಜೆ ಸಲ್ಲಿಸಿ, ತೆಂಗಿನಕಾಯಿ ಹೊಡೆದಿರುತ್ತಾರೆ.ದೇವಳದ ಭೇಟಿಯ ನೇತೃತ್ವವನ್ನು ಸಾಮಾಜಿಕ ಕಾರ್ಯಕರ್ತ ಕೋಟ ದಿನೇಶ ಗಾಣಿಗ ವಹಿಸಿದರು. ಜೀವನ್ ಮಿತ್ರ ಆಂಬ್ಯುಲೆನ್ಸ್ ಮಾಲಿಕ ನಾಗರಾಜ್ ಪುತ್ರನ್, ನಾಗೇಂದ್ರ ಪುತ್ರನ್, ಕೃಷ್ಣ ಪುತ್ರನ್, ರಾಮ ತೋಳಾರ್, ಭರತ್ ಗಾಣಿಗಮತ್ತಿತರರು ಉಪಸ್ಥಿತರಿದ್ದರು.
Be the first to comment