ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಗ್ರಾಮೀಣ ಜನರಿಗೂ ಶುದ್ಧ ಹಾಗೂ ಪ್ರತಿನಿತ್ಯವೂ ಕುಡಿಯುವ ನೀರಿನ ತೊಂದರೆಯಾಗದಂತೆ ಕೇಂದ್ರ ಸರಕಾರದ ಜಲಜೀವನ ಯೋಜನೆಯನ್ನು ಸ್ಥಳೀಯ ಶಾಸಕರು ಮುದ್ದೇಬಿಹಾಳ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಿದ್ದು ಗ್ರಾಮೀಣ ಜನರು ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕುಂಟೋಜಿ ಗ್ರಾಪಂ ಅಧ್ಯಕ್ಷ ಶಿವಬಸು ಸಜ್ಜನ ಹೇಳಿದರು.
ತಾಲೂಕಿನ ಕುಂಟೋಜಿ ಗ್ರಾಪಂ ವ್ಯಾಪ್ತಿಯ ಹೊಕ್ರಾಣಿ ಗ್ರಾಮದಲ್ಲಿ ಜಲಜೀವನ ಮೂಶನ್ ಯೋಜನೆಯಡಿಯಲ್ಲಿ ಅಂದಾಜು 25 ಲಕ್ಷ ಮೊತ್ತದ ಗ್ರಾಮದ ಮನೆ ಮನೆಯ ಸಂಪರ್ಕ ಯೋಜೆಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರದ ಎಲ್ಲ ಪಂಚಾಯತಿಗಳ ಬಹುತೇಕ ಗ್ರಾಮದಲ್ಲಿಯೂ ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಶಾಸಕರು ಕುಂಟೋಜಿ ಪಂಚಾಯತಿಗೆ ಒಳಪಡುವ ಯಾವುದೇ ಗ್ರಾಮವೂ ಯೋಜನೆಯಿಂದ ವಂಚಿತವಾಗಬಾರದು ಎಂದು ಎಲ್ಲ ಗ್ರಾಮಕ್ಕೂ ನೀರು ಒದಗಿಸುವಂತೆ ಮಾಡಿದ್ದು ಕಾಮಗಾರಿಗೆ ಸಹಕಾರ ನೀಡಿ ಎಲ್ಲರೂ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಬಸಮ್ಮ ಇಂಗಳಗೇರಿ, ಮೆಬೂಬ ನಿಡಗುಂದಿ, ಶೇಖಪ್ಪ ಒಣರೊಟ್ಟಿ, ನಿಂಗಣ್ಣ ಇಂಗಳಗೇರಿ, ಮಂಜುಳಾ ಹುಲಗಣ್ಣಿ, ಹಣಮಂತ ಮಾರನಾಳ, ಶೀವಪ್ಪ ಒಣರೊಟ್ಟಿ, ಪಿಡಿಓ ಅಯ್ಯಪ್ಪ ಮಲಗಲದಿನ್ನಿ, ಹಣಮಂತ ಬಜಂತ್ರಿ, ಗಣೇಶ ಹೆಬ್ಬಾಳ ಇದ್ದರು.
Be the first to comment