ರಾಜ್ಯ ಸುದ್ದಿಗಳು
ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ನೂತನವಾಗಿ ಆರಂಭಿಸಲಾದ ಸಿದ್ದಾರ್ಥ ಅಡ್ವಾನ್ಸ್ ಹಾರ್ಟ್ ಸೆಂಟರ್ ಹಾಗೂ ಕಾರ್ಡಿಯಾಕ್ ಫ್ರಾಂಟಿಡಾ ವತಿಯಿಂದ 8ತಿಂಗಳ ಮಗುವಿಗೆ ಅಪರೂಪದ ಹೃದಯ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಕಾರ್ಡಿಯಾಕ್ ಸೆಂಟರ್ನ ವೈದ್ಯರಾದ ಡಾಕ್ಟರ್ ತಮಿಮ್ ಹಾಗೂ ಇತರ ವೈದ್ಯರ ನೇತೃತ್ವದಲ್ಲಿ 8 ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಮೊದಲು ಮಗುವಿಗೆ ಶ್ವಾಸಕೋಶದ ತೊಂದರೆ ಎಂದು ಅಂದಾಜಿಸಲಾಗಿತ್ತು ನಂತರದ ದಿನದಲ್ಲಿ ಮಗುವಿಗೆ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದು ಕಂಡುಬಂದಿದ್ದು ಇನ್ನು ಮಗುವಿಗೆ ಕೂಡಲೇ ಶಸ್ತ್ರಚಿಕಿತ್ಸೆ ಮಾಡದಿದ್ದರೆ ಮಗುವಿನ ಪ್ರಾಣಕ್ಕೆ ತೀವ್ರ ತೊಂದರೆ ಉಂಟಾಗುತ್ತಿದ್ದು ಆದ್ದರಿಂದ ಕೂಡಲೇ ಎಚ್ಚೆತ್ತ ವೈದ್ಯರ ತಂಡ ಮೂರು ಗಂಟೆಯ ಶಸ್ತ್ರಚಿಕಿತ್ಸೆ ಮಾಡಿ ಮಗುವಿಗೆ ಪುನರ್ಜನ್ಮ ನೀಡುವಲ್ಲಿ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರು ಯಶಸ್ವಿಯಾಗಿದ್ದಾರೆ ಇದರ ಮೂಲಕ ವೈದ್ಯಲೋಕದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ.
ಇನ್ನು ಈ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಮುಖ್ಯಸ್ಥರಾದ ಡಾಕ್ಟರ್ ಜಿ ಪರಮೇಶ್ವರ್ ಅವರಿಗೆ ಮಗುವಿನ ಸ್ಥಿತಿಗತಿ ಬಗ್ಗೆ ಗಮನಕ್ಕೆ ತಂದ ಕೂಡಲೇ ಡಾಕ್ಟರ್ ಜಿ ಪರಮೇಶ್ವರ್ ಅವರು ಪ್ರತಿಕ್ರಿಯಿಸಿ ಮಗುವಿಗೆ ಶಸ್ತ್ರಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಭರಿಸಲಾಗುವುದು ಇದು ತಿಳಿಸಿದ್ದರು ಇದರ ಅನುಗುಣವಾಗಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮೊತ್ತದ ಶಸ್ತ್ರಚಿಕಿತ್ಸೆಯನ್ನು ಮಗುವಿಗೆ ಸಂಪೂರ್ಣ ಉಚಿತವಾಗಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಶಸ್ತ್ರಚಿಕಿತ್ಸೆಯ ನಂತರ ಮಗು ಆರೋಗ್ಯಕರವಾಗಿದ್ದು ಶ್ರೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.ನೂತನವಾಗಿ ಆರಂಭಗೊಂಡಿದ್ದ ಕಾರ್ಡಿಯಾಕ್ ಸೆಂಟರ್ ಸೆಂಡ್ ವತಿಯಿಂದ ನುರಿತ ಹೃದ್ರೋಗ ತಜ್ಞರಾದ ಡಾಕ್ಟರ್ ತಮಿಮ್ ನೇತೃತ್ವದಲ್ಲಿ ಇದುವರೆಗೂ 8 ತಿಂಗಳ ಹಸುಗೂಸು 75 ವರ್ಷದ ವಯೋವೃದ್ಧರ ವರೆಗೂ ಸುಮಾರು 25ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ .
Be the first to comment