ಕಾಲಜ್ಞಾನಿಯ ನಾಡಲ್ಲಿ ಕುಂಚ ಜಳಪಿಸುತ್ತಿರುವ ಬಾಲ ಕಲಾವಿದ ಸಂಗಮೇಶ ಕೊಡೆಕಲ್

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ಕಲೆಗೆ ಕಲಾವಿದರಿಗೆ ಜಾತಿ,ಧರ್ಮ,ವಯಸ್ಸು,ಆಯಸ್ಸು,ಗಡಿ,ಮೇರೆಗಳಿಲ್ಲ ಸೀಮಾತೀತ,ಜಾತ್ಯಾತೀತ,ಧರ್ಮಾತೀತವಾಗಿ ಬೆಳೆದು ಅಮರಸಾಲುಗಳಲ್ಲಿ ಸಂದೇಶಸಾರುವ ಅಜರಾಮರ ಕಲೆ ಯಾಗಿದೆ.ಮಾತುಗಳಿಂದ ಹೇಳಲಾಗದ್ದನ್ನ ಬಣ್ಣ, ಕುಂಚ ಗಳಿಂದ ಸಮಗ್ರ ಮತ್ತು ಸಮರ್ಪಕವಾಗಿ ಹೇಳಬಲ್ಲ ಮಾಂತ್ರಿಕ ಕಲೆ ಕಲಾವಿದನ ಕುಂಚದಲ್ಲಡಗಿರುತ್ತದೆ.ಇಂದಿಗೂ ನಗುಮೊಗದಿಂದ ಜಗತ್ತನ್ನೇ ತನ್ನತ್ತ ಸೆಳೆದಿರುವ ಅಮರ ಕಲೆ ಮೊನಾಲಿಸಾಳ ನಗುವಿನ ಹಿಂದೆ ಲಿಯನಾರ್ಡೋವಿನ್ಸಿಯ ಕುಂಚವಿದೆ.

CHETAN KENDULI

ರವಿವರ್ಮ ಉದಯೋನ್ಮುಖ ಕಲಾವಿದರ ದಿಗ್ದರ್ಶಕನಾಗಿದ್ದಾನೆ.ಅವರೆಲ್ಲರಂತೆ ನಾವೂ ಆಗಬೇಕೆಂಬ ಕನಸು ಪ್ರತಿಯೊಬ್ಬರಲ್ಲೂ ಅಂಬೆಗಾಲಿಡುತ್ತಿರುತ್ತದೆ.ಅದನ್ನು ಸಾಕಾರಮಾಡಿಕೊಳ್ಳಲು ಪ್ರಯತ್ನಸಿದವರು ಸಾಧಕರಾಗುತ್ತಾರೆ.ಅಂತಹ ಸಾಧನೆಯ ಕನಸನ್ನು ತಲೆಯಲ್ಲಿ ಹೊತ್ತು ಕುಂಚಕೈಗೆತ್ತಿಕೊಂಡ ಬಾಲ ಕಲಾವಿದನ ಬಗ್ಗೆ ಹೇಳ್ತೀನಿ ಕೇಳಿ.ಯಾದಗಿರಿ ಜಿಲ್ಲೆಯ ಸುರಪೂರು ತಾಲೂಕಿನ ಕೊಡೆಕಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿಯ ಸಂಗಮೇಶ ತಂದೆ ಶರಣಪ್ಪ ಹಡಪದ ಎಂಬ ಬಾಲಕ ಪ್ರಾಣಿ ಪಕ್ಷಿ ಸಾಧಕರ ಪ್ರಕೃತಿಯ ಚಿತ್ರಗಳನ್ನು ತೇಟು ಅವುಗಳಂತೇ ಬಿಡಿಸುವದರಲ್ಲಿ ನಿಸ್ಸೀಮನಾಗಿ ನೋಡುಗರನ್ನು ಬೆಕ್ಕಸಬೆರಗಾಗಿಸಿದ್ದಾನೆ.

ಹೌದು ಕೊಡೆಕಲ್ಲಿನ ಮಣ್ಣು ಅಂತಹದ್ದು ಲೋಕಕ್ಕೇ ಕಾಲಜ್ಞಾನವನ್ನು ಕೊಟ್ಟ ಬಸವಣ್ಣನವರು ನಡೆದಾಡಿದ ಪುಣ್ಯಭೂಮಿ.ಅಲ್ಲಿ ಜನಿಸಿದವರು ಸಾಧಕರಾಗುತ್ತಾರೆಂಬುದರಲ್ಲಿ ಎರಡು ಮಾತಿಲ್ಲ. ಈ ಬಾಲಕ ತನ್ನ ಕಲೆಯಲ್ಲಿ ಅರಳಿದ ಚಿತ್ರಗಳನ್ನು ಶಾಲೆಯ ಗೋಡೆಗಳಿಗೆ ಹಾಕುವ ಮೂಲಕ ಸಹಪಾಟಿಗಳಿಗೆ ಮತ್ತು ಶಿಕ್ಷಕರಿಗೆ ಅಚ್ಚು ಮೆಚ್ಚಿನ ಬಾಲಕನಾಗಿದ್ದಾನೆ.ಈರನ ಈ ಸಾಧನೆ ಕಂಡು ತಂದೆ ಶರಣಪ್ಪ, ತಾಯಿ ಗೌರಮ್ಮ ಹರ್ಷಿತರಾಗಿದ್ದಾರೆ. ನೆರೆಹೊರೆಯವರು ಈತನ ಸಾಧನೆಯನ್ನು ತಮ್ಮ ಮಕ್ಕಳಿಗೆ ತೋರಿಸಿ ಅವನಂತಾಗಿ ಎಂದು ಹೇಳುತ್ತಿದ್ದಾರೆ.ಸಂಗಮೇಶನಿಗೆ ಸರಿಯಾದ ತರಬೇತಿ ದೊರೆತರೆ ಮಹಾನ್ ಕಲಾವಿದನಾಗಿ ಬೆಳೆಯುವುದರಲ್ಲಿ ಅನುಮಾನವೇ ಇಲ್ಲ.

Be the first to comment

Leave a Reply

Your email address will not be published.


*