ಯಕ್ಷ‌ಋಷಿ ಹೊಸ್ತೋಟ ಮಂಜುನಾಥ ಭಾಗವತ ಅಶ್ವತ್ಥಧಾಮ ಯಕ್ಷ ಸಾಧಕರ ನೆನಪಿನ ನೆಲೆ ಕಾರ್ಯಕ್ರಮ* ಇಂದು ಅಂಕೋಲಾದಲ್ಲಿ ಜರುಗಿತು

ವರದಿ-ದೀಪಕ್ ಶೇಟ್ ಕುಮಟಾ

ಜಿಲ್ಲಾ ಸುದ್ದಿಗಳು 

ಅಂಕೋಲಾ ತಾಲ್ಲೂಕಿನ ಅಚವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೋತಿಗುಡ್ಡದಲ್ಲಿ ಯಕ್ಷ‌ಋಷಿ ಹೊಸ್ತೋಟ ಮಂಜುನಾಥ ಭಾಗವತ ಅಶ್ವತ್ಥಧಾಮ ಯಕ್ಷ ಸಾಧಕರ ನೆನಪಿನ ನೆಲೆ ಕಾರ್ಯಕ್ರಮ ನೆರವೇರಿಸಲಾಯಿತು.ಯಕ್ಷ‌ಋಷಿ ಹೊಸ್ತೋಟ ಮಂಜುನಾಥ ಭಾಗವತರವರು ತಮ್ಮ ಕಾರ್ಯಸಾಧನೆ ಮೂಲಕ ಮೋತಿಗುಡ್ಡದಲ್ಲಿ ಇಂದಿಗೂ ನೆಲೆಸಿದ್ದಾರೆ. ಯಕ್ಷಗಾನದಲ್ಲಿ ಅಪಾರ ಸಾಧನೆ ಮಾಡಿ ಮನೆ ಮಾತಾಗಿದ್ದಾರೆ. ಸುಮಾರು 250ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಯಕ್ಷಗಾನದ ಭಾಗವತಿಕೆ, ಪಾತ್ರಗಳನ್ನು ಮಾಡುವುದು, ಯಕ್ಷಗಾನ ಕಲಿಸುವುದನ್ನು ತಮ್ಮ ಬದುಕಿನುದ್ದಕ್ಕೂ ಮಾಡಿದ್ದಾರೆ.

CHETAN KENDULI

 

ಅಂಧ ಮಕ್ಕಳಿಗೆ ಯಕ್ಷಗಾನ ಹೇಳಿ ಕೊಡುವ ಮೂಲಕ ವಿಶೇಷ ಸಾಧನೆಯನ್ನು ಮಾಡಿದ್ದಾರೆ. ಅವರ ಸಾಧನೆಗೆ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿಗಳು ಅರಸಿ ಬಂದಿವೆ. ಈ ಬಗೆಯಲ್ಲಿ ಸಾಧನೆ ಮಾಡಿದ ಮಹಾನ ವ್ಯಕ್ತಿಯ ಜ್ಞಾನವನ್ನು ಎಲ್ಲರಿಗೂ ತಲುಪುವ ಕೆಲಸವಾಗಬೇಕು.ಹೊಸ್ತೋಟ ಮಂಜುನಾಥ ಭಾಗವತ ಅವರ ಪುತ್ಥಳಿ, ಅಶ್ವತ್ಥ ಕಟ್ಟೆ, ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದ ಕಟ್ಟೆ, ಅವರಿಗೆ ಬಂದ ಪ್ರಶಸ್ತಿ, ಓದುತ್ತಿದ್ದ, ಬರೆದ ಪುಸ್ತಕಗಳು, ವಾಸವಿದ್ದ ಕುಟೀರವನ್ನು ಲೋಕಾರ್ಪಣೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಜಲಕಾರ್ಯಕರ್ತರಾದ ಶ್ರೀ ಶಿವಾನಂದ ಕಳವೆ, ಊರಿನ ಮುಖಂಡರಾದ ಶ್ರೀ ಮಾಧವ ಹೊಸ್ಮನೆ ಹಾಗೂ ಭಾಗವತರಾದ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*