ರಾಜ್ಯ ಸುದ್ದಿಗಳು
ದೊಡ್ಡಬಳ್ಳಾಪುರ
ಹಬ್ಬದ ದಿನದಂದು ನಿರಾಶ್ರಿತ ಕಡುಬಡವರಿಗೆ ದಿನ ನಿತ್ಯದ ಆಹಾರದೊಂದಿಗೆ ಕಬ್ಬು ಕಡಲೆಕಾಯಿ ಮತ್ತು ಅವರೆಕಾಯಿಯ ನೀಡುವುದರ ಮುಖಾಂತರ ಸುಗ್ಗಿ ಆಚರಿಸಿಕೊಂಡ ಅನ್ನದಾಸೋಹ ಸಮಿತಿ ಸತತವಾಗಿ ದಾನಿಗಳ ನೆರವಿನಿಂದ ಸಾಗುತ್ತಿರುವ ಅನ್ನದಾಸೋಹ ಕಾರ್ಯಕ್ರಮವು ಹಲವಾರು ನಿರಾಶ್ರಿತ ಬಡಕುಟುಂಬಗಳಿಗೆ ಆಸರೆಯಾಗಿದೆ ಅಂತಹ ಕಡುಬಡವ ನಿರಾಶ್ರಿತ ಕುಟುಂಬಗಳಿಗೆ ಇಂದು ಸುಗ್ಗಿ ಸಂಭ್ರಮವನ್ನು ಹಂಚುವ ಸಲುವಾಗಿ ಕಬ್ಬು ಕಡಲೆಕಾಯಿ ಇತ್ಯಾದಿ ವಸ್ತುಗಳ ನೀಡುವುದರ ಮುಖಾಂತರ ಅನ್ನ ದಾಸೋಹ ಸಮಿತಿಯು ಹಬ್ಬವನ್ನು ಆಚರಿಸಿದೆ.
ಕಾರ್ಯಕ್ರಮ ಕುರಿತಾಗಿ ಭಾರತೀಯ ಜನತಾ ಪಾರ್ಟಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿಯಾದ ರಾಮಕೃಷ್ಣಯ್ಯ ಮಾತನಾಡಿ ಈ ಹಬ್ಬವು ವರ್ಷದ ಮೊದಲ ಹಬ್ಬವಾಗಿದ್ದು ಈ ಹಬ್ಬವನ್ನು ಸುಗ್ಗಿ ಹಬ್ಬ ಎಂತಲೂ ಕರೆಯುತ್ತೇವೆ ರೈತರು ತಾವು ಬೆಳೆದಿರುವ ಬೆಳೆಯನ್ನು ಸಂಭ್ರಮಿಸುವ ಹಬ್ಬ ಇದಾಗಿದೆ ಇಂದು ಸ್ಥಳೀಯ ಕಡುಬಡಕುಟುಂಬಗಳಿಗೆ ಹಬ್ಬದ ಸಡಗರವನ್ನು ತಂದುಕೊಡುವ ಕಾಯಕ ಅನ್ನ ದಾಸೋಹ ಸಮಿತಿ ಮಾಡಿದೆ ಸಮಿತಿಯ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳಿಗೆ ಶುಭವಾಗಲಿ ಎಂದು ಹಾರೈಸಿದರು.ಅನ್ನದಾಸೋಹ ಸಮಿತಿಯ ಮುಖ್ಯಸ್ಥ ಮಲ್ಲೇಶ್ ಮಾತನಾಡಿ ದಾನಿಗಳು ಸದಾ ಸಹಕರಿಸಿ ಅನ್ನದಾಸೋಹ ಕಾರ್ಯಕ್ರಮವನ್ನು ಮುಂದುವರಿಸುವಂತೆ ಮನವಿ ಮಾಡಿದರು.
Be the first to comment