ಜಿಲ್ಲಾ ಸುದ್ದಿಗಳು
ಕೋಟ
ಕೋಟ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತಿದ್ದ ಜಯರಾಮ ನಾಯ್ಕ ಎಲ್ (27) ಇವರು ಕೋಟದಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 27 ರಂದು ಠಾಣಾ ಮೀಸಲು ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ಕರ್ತವ್ಯ ಮುಗಿಸಿ ವಸತಿ ಗೃಹದಲ್ಲಿ ವಿಶ್ರಾಂತಿಯಲ್ಲಿರುವಾಗ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸಂತೋಷ್ ಬಿ.ಪಿ ರವರು ರಾತ್ರಿ 10:45 ಗಂಟೆಗೆ ಕರೆ ಮಾಡಿ ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟುವಿನ ರಾಜೇಶ್ ಎಂಬುವವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮಕ್ಕೆ ಏರುಧ್ವನಿಯಲ್ಲಿ ಡಿಜೆ ಸೌಂಡ್ ನ್ನು ಹಾಕಿ ಮೆಹಂದಿ ಮನೆಯ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಸುಮಾರು 30-50 ಜನ ಮಧ್ಯ ಸೇವನೆ ಮಾಡಿ ಕೇಕೆ ಹಾಕುತ್ತಾ ನೃತ್ಯ ಮಾಡುತ್ತಿದ್ದು ಈ ಬಗ್ಗೆ ಪಿರ್ಯಾದಿದಾರರು ಇಲಾಖಾ ಜೀಪಿನಲ್ಲಿ ಪಿ.ಎಸ್.ಐ ಸಂತೋಷ್ ರವರೊಂದಿಗೆ ರಾತ್ರಿ 11:10 ಗಂಟೆಗೆ ಸ್ಥಳಕ್ಕೆ ತಲುಪಿ ನೋಡಿದಲ್ಲಿ ಆರೋಪಿತರಾದ ರಾಜೇಶ್, ಸುದರ್ಶನ್, ಗಣೇಶ ಬಾರ್ಕೂರು, ಸಚಿನ್, ಗಿರೀಶ್, ನಾಗೇಂದ್ರ ಪುತ್ರನ್, ನಾಗರಾಜ ಪುತ್ರನ್ ಮತ್ತು ಇತರರು ಡಿಜೆ ಸೌಂಡ್ ನ್ನು ಜೋರಾಗಿ ಹಾಕಿಕೊಂಡು ನೃತ್ಯ ಮಾಡುತ್ತಿರುವುದು ಕಂಡು ಬಂದಿದ್ದು ಈ ಬಗ್ಗೆ ಸ್ಥಳದಲ್ಲಿ ಹಾಜರಿದ್ದ ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ಉರಾಳ ರವರು ಪಿ.ಎಸ್ಐರವರ ಬಳಿ ತನ್ನ ತಾಯಿಗೆ ಹೃದಯ ಸಂಬಂಧಿ ತೊಂದರೆ ಇದ್ದು ಡಿಜೆ ಸೌಂಡ ನ್ನು ಮೆಲ್ಲನೆ ಇಡುವಂತೆ 112 ಗೆ ಮಾಹಿತಿ ನೀಡಿದ್ದು 112 ಸಿಬ್ಬಂದಿಯವರು ಸ್ಥಳಕ್ಕೆ ಬಂದಾಗ ಅವರಲ್ಲಿಯೂ ಸಹ ಆರೋಪಿತರು ಉಡಾಫೆಯಾಗಿ ಮಾತನಾಡಿರುವುದಾಗಿ ತಿಳಿಸಿರುತ್ತಾರೆ. ಆಗ ಪಿ.ಎಸ್.ಐ ರವರು ಡಿಜೆ ಸೌಂಡ್ ನ್ನು ಕಡಿಮೆ ಮಾಡುವಂತೆ ತಿಳಿಸಿದಾಗ ಆರೋಪಿತರು ಗುಂಪು ಕಟ್ಟಿಕೊಂಡು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಪಿ.ಎಸ್.ಐ ರವರ ಬಳಿ ನೀವು ಏನು ಮಾಡಿತ್ತೀರಾ ನಾವು ಬಂದ್ ಮಾಡುವುದಿಲ್ಲ ಎಂದು ಉಡಾಫೆಯಾಗಿ ಮಾತನಾಡಿ ಸಮವಸ್ತ್ರದಲ್ಲಿದ್ದ ಪಿ.ಎಸ್.ಐ ರವರನ್ನು ಕೈಯಿಂದ ದೂಡಿರುತ್ತಾರೆ. ಆಗ ಕಾನ್ಸ್ಟೇಬಲ್ ಜಯರಾಮ್ ಅವರು ಡಿಜೆಯನ್ನು ಬಂದ್ ಮಾಡಲು ಹೋದಾಗ ಆರೋಪಿತರು ಜಯರಾಮ್ ಆ ಅವರನ್ನು ಸುತ್ತುವರಿದು ದೊಣ್ಣೆಯಿಂದ ಎಡಕೈನ ತೋರು ಬೆರಳು ಮತ್ತು ಮಧ್ಯದ ಬೆರಳಿನ ಬಳಿ ಹೊಡೆದು ಪೊಲೀಸರ ಧರಿಸಿದ ಸಮವಸ್ತ್ರವನ್ನು ಹರಿದು ಹಾಕಿ ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಆರೋಪಿಸಿದ್ದಾರೆ.ಅಲ್ಲದೆ ಆರೋಪಿತರು ಹಲ್ಲೆ ಮಾಡಿದ್ದರಿಂದ ದಿನಾಂಕ 28 ರಂದು ಬೆಳಿಗ್ಗೆ ಕೈ ನೋವು ಜಾಸ್ತಿಯಾಗಿದ್ದರಿಂದ ಸಿ.ಹೆಚ್.ಸಿ ಕೋಟಕ್ಕೆ ಹೋಗಿ ಚಿಕಿತ್ಸೆ ಪಡೆದು ನಂತರ ದಿನಾಂಕ 29 ರಂದು ನೋವು ಜಾಸ್ತಿಯಾದ ಕಾರಣ ಕುಂದಾಪುರ ತಾಲೂಕು ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾಗಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಪೊಲೀಸ್ ಕಾನ್ಸ್ಟೇಬಲ್ ಜಯರಾಮ್ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
Be the first to comment