2014 ರ ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣ ದಲ್ಲಿ ರಾಘವೇಂದ್ರ ಶ್ರೀಗಳಿಗೆ ಬಿಗ್ ರಿಲೀಫ್​ ಸಿಕ್ಕಿದ್ದು ಹೇಗೆ?

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಶಿವಮೊಗ್ಗ

2014 ರ ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣ ದಲ್ಲಿ ರಾಘವೇಂದ್ರ ಶ್ರೀಗಳಿಗೆ ಬಿಗ್ ರಿಲೀಫ್​ ಸಿಕ್ಕಿದ್ದು ಹೇಗೆ?ರಾಘವೇಶ್ವರ ಸ್ವಾಮೀಜಿ ತಮ್ಮ ಮೇಲೆ 169 ಕ್ಕೂ ಹೆಚ್ಚು ಭಾರಿ ಅತ್ಯಾಚಾರವೆಸಗಿದ್ದಾರೆ ಎಂದು 2014 ರ ಆ.17 ರಂದು ಸಂತ್ರಸ್ತೆಯೊಬ್ಬರು ದೂರು ನೀಡಿದ್ದರು.ಈ ಪ್ರಕರಣ ಸಿಐಡಿ ತನಿಖೆಗೆ ಒಳಪಟ್ಟಿತ್ತು. ಅಲ್ಲದೆ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ್ದರು,ಈ ಸಂಬಂದ 2016 ಮಾರ್ಚ್​ 31 ರಂದು ಬೆಂಗಳೂರಿನ 54 ಹೆಚ್ಚುವರಿ ಸಿಸಿ ಸಿವಿಲ್​ ಮತ್ತು ಸೆಷನ್ಸ್​ ಕೋರ್ಟ್​ ಶ್ರೀಗಳ ವಿರುದ್ಧದ ಅತ್ಯಾಚಾರ ಆರೋಪ ವನ್ನ ಕೈ ಬಿಟ್ಟಿತ್ತು.ಅಲ್ಲದೆ ಅತ್ಯಾಚಾರ ಆರೋಪ ಸಾಬೀತು ಮಾಡಲು ಸೂಕ್ತ ಸಾಕ್ಷ್ಯಾಧಾರ ಗಳಿಲ್ಲ ಎಂದಿತ್ತು.

CHETAN KENDULI

ಈ ತೀರ್ಪನ್ನ ಪ್ರಶ್ನಿಸಿ ರಾಜ್ಯ ಸರ್ಕಾರ ( ಸಿಐಡಿ ತನಿಖಾಧಿಕಾರ) ಹಾಗೂ ಸಂತ್ರಸ್ತೆ ಪ್ರತ್ಯೇಕ ಮರುಪರಿಶೀಲನಾ ಅರ್ಜಿಯನ್ನ ಹೈಕೋರ್ಟ್​ ನಲ್ಲಿ ಸಲ್ಲಿಸಿದ್ರು.ಇದರ ವಿಚಾರಣೆಯನ್ನ ಪೂರ್ಣ ಗೊಳಿಸಿದ್ದ ಹೈಕೋರ್ಟ್​ ಕಳೆದ ಡಿಸೆಂಬರ್​ 22 ರಂದು ತೀರ್ಪು ಕಾದಿರಿಸಿತ್ತು. ಇದೀಗ ಅಂತಿಮ ತೀರ್ಪು ನೀಡಿದೆ.2014 ರ ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣ ದಲ್ಲಿ ರಾಘವೇಂದ್ರ ಶ್ರೀಗಳಿಗೆ ಬಿಗ್ ರಿಲೀಫ್​ ಸಿಕ್ಕಿದ್ದು ಹೇಗೆ?ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ , ರಾಘವೇಶ್ವರ ಶ್ರೀಗಳ ರನ್ನ ಆರೋಪದಿಂದ ಮುಕ್ತಗೊಳಿಸಿದ್ದ ವಿಚಾರಣದೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್​ ಎತ್ತಿ ಹಿಡಿದಿದೆ.

ಅಲ್ಲದೆ ಕೆಳ ಹಂತದ ಕೋರ್ಟ್​ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯ ಕಂಡು ಬರುತ್ತಿಲ್ಲ ಎಂದು ತಿಳಿಸಿದೆ.ಇದರಿಂದಾಗಿ ರಾಘವೇಶ್ವರ ಭಾರತೀ ಶ್ರೀಗಳ ಕಾನೂನು ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

Be the first to comment

Leave a Reply

Your email address will not be published.


*