ಸದನದ ಕಾರ್ಯಕಲಾಪಗಳಿಗೆ ಸದಸ್ಯರು ಅಡ್ಡಿಪಡಿಸಿದರೆ ಕಠಿಣ ಕ್ರಮ – ವಿಶ್ವೇಶ್ವರ ಹೆಗಡೆ ಕಾಗೇರಿ…!

ವರದಿ: ಸುಚಿತ್ರಾ ನಾಯ್ಕ, ಹೊನ್ನಾವರ

ಜಿಲ್ಲಾ ಸುದ್ದಿಗಳು 

ಶಿರಸಿ:

CHETAN KENDULI

ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಸದನದ ಕಾರ್ಯಕಲಾಪಗಳಿಗೆ ಸದಸ್ಯರು ಅಡ್ಡಿಪಡಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಎಚ್ಚರಿಕೆ ನೀಡಿದ್ದಾರೆ.

ಅವರು ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ಕಾರ್ಯಕಲಾಪಗಳಿಗೆ ಅಡ್ಡಿಪಡಿಸಿದರೆ ಕಠಿಣ ನಿಲುವು ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ. ಸದನದಲ್ಲಿ ಎಲ್ಲ ಸದಸ್ಯರಿಗೂ ಮಾತನಾಡಲು ಅವಕಾಶವಿದೆ. ಆದರೆ ಸದನದ ಕಾರ್ಯಕಲಾಪಗಳನ್ನು ಅಡ್ಡಿಪಡಿಸಲು ಯಾರಿಗೂ ಅವಕಾಶವಿಲ್ಲ. ಮಾತನಾಡಲು ಕೊಟ್ಟ ಅವಕಾಶವನ್ನೇ ದುರುಪಯೋಗ ಪಡಿಸಿಕೊಂಡು ಸದನಕ್ಕೆ ಅಡ್ಡಿಪಡಿಸಿದರೆ ಕಠಿಣಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. 

ಸದಸ್ಯರು ತಮ್ಮ ಯಾವುದೇ ಭಿನ್ನಾಭಿಪ್ರಾಯ ಹಾಗೂ ಬೇಧಭಾವ ಇದ್ದರೂ ತಮ್ಮ ಸಮಸ್ಯೆಯನ್ನು ಸದನದ ಗಮನಕ್ಕೆ ತರುವುದು ಹಾಗೂ ಸರಕಾರಕ್ಕೆ ಅದನ್ನು ತಿಳಿಸುವ ಪ್ರಯತ್ನ ಮಾಡಬೇಕೆ ವಿನಃ ಸದನ ಕಾರ್ಯಕಲಾಪಗಳಿಗೆ ಅಡ್ಡಿಪರಿಸುವಂತೆ ಆಗಬಾರದು. ಈ ಹಿನ್ನೆಲೆಯಲ್ಲಿ ಕಠಿಣ ನಿಲುವುಗಳನ್ನು ಸಭಾಧ್ಯಕ್ಷರಾಗಿ ತೆಗೆದುಕೊಳ್ಳಬೇಕು ಎನ್ನುವುದನ್ನು ದೆಹಲಿಯಲ್ಲಿ ನಡೆದ ಸ್ಪೀಕರ್‌ಗಳ ಸಮಾವೇಶದಲ್ಲಿ ಸ್ಪಷ್ಟ ಸಂದೇಶ ನೀಡಲಾಗಿದೆ ಎಂದರು.

ಬೆಳಗಾವಿ ಅಧಿವೇಶನ ನಡೆಸಲು ಎಲ್ಲ ರೀತಿಯ ಸಕಲ ಸಿದ್ದತೆ ನಡೆದಿದ್ದು, ವಿಧಾನ ಸಭೆ ನಮ್ಮ ಸಚಿವಾಲಯ, ಜಿಲ್ಲಾಡಳಿತ, ಸರಕಾರ, ಎಲ್ಲರೂ ಜೊತೆ ಸೇರಿ ಬೆಳಗಾವಿ ಅಧಿವೇಶನ ನಡೆಸಲು ಸಕಲ ಸೌಲಭ್ಯ ಮಾಡಿಕೊಳ್ಳಲಾಗಿದೆ. ಸದನದ ಕಲಾಪ ನಡೆಸಲು ಈಗಾಗಲೇ ಕಲಾಪಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಕಲಾಪಗಳು ಹೇಗೆ ನಡೆಯುತ್ತವೆಯೋ ಹಾಗೆಯೇ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯಲಿದೆ ಎಂದರು.  

ಇತ್ತೀಚೆಗೆ ಸಿಮ್ಲಾದಲ್ಲಿ ದೇಶ ಮಟ್ಟದ ಸ್ಕೀಕರ್‌ ಗಳ ಎರಡು ಮಹತ್ವದ ಸಮ್ಮೇಲನ ನಡೆಯಿತು. ೧೯೫೧ ರಲ್ಲಿ ಮೊದಲ ಸ್ಕೀಕರ್‌ಗಳ ಸಭೆ ನಡೆದಿತ್ತು. ೨೦೨೧ರಲ್ಲಿ ಶತಮಾನೋತ್ಸವದ ಹಿನ್ನೆಲೆಯಲ್ಲಿ ಸಮ್ಮೇಲನ ನಡೆದಿದೆ. ದೆಹಲಿಯಲ್ಲೂ ಸ್ಪೀಕರ್‌ಗಳ ಸಭೆ ನಡೆಯಿತು. ಓಂ ಬಿರ್ಲಾ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆಯ ಶತಮಾನೋತ್ಸವ ನಡೆದಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶಕ್ತಿಶಾಲಿ ಮಾಡಬೇಕು ಎನ್ನುವ ಉದ್ದೇಶದಿಂದ ಸ್ಪೀಕರ್‌ಗಳು ನಮ್ಮ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬೇಕು ಎನ್ನುವ ಸುದೀರ್ಘ ಚರ್ಚೆಯಾಗಿದೆ ಎಂದರು. 

ಕಾರ್ಯಕಲಾಪಗಳ ಸಲಹಾ ಸಮಿತಿಯ ಕಾರ್ಯಕ್ರಮ ಡಿ.೧೩ ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ಬೆಳಗ್ಗೆ ೧೦.೩೦ ರಿಂದ ನಡೆಯಲಿದೆ. ೧೧ ಗಂಟೆಯಿಂದ ಕಲಾಪಗಳು ಆರಂಭವಾಗಲಿದೆ. ಸದನ ನಡೆಯುವ ಸಂದರ್ಭದಲ್ಲಿ ಯಾವುದೇ ಕುಂದುಕೊರತೆ ಆಗದಂತೆ ಕ್ರಮ ವಹಿಸಲಾಗಿದೆ. ಮೂರು ವರ್ಷಗಳ ನಂತರ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದು, ಸವಾಲುಗಳೂ ಸಾಕಷ್ಟು ಇವೆ. ಕರೋನಾ ಸಮಸ್ಯೆ, ಅತಿವೃಷ್ಟಿಯ ಹಾನಿಯ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಎಲ್ಲವನ್ನೂ ಸರಿಪಡಿಸಿ ಉತ್ತಮವಾಗಿ ಅಧಿವೇಶನ ನಡೆಯಲಿದೆ ಎಂದರು.

Be the first to comment

Leave a Reply

Your email address will not be published.


*