ಜಿಲ್ಲಾ ಸುದ್ದಿಗಳು
ಸಿದ್ದಾಪುರ
ತಮ್ಮೆದುರು ನನ್ನದೊಂದು ಅಭಿಪ್ರಾಯವನ್ನು ಮಂಡಿಸಬೇಕೆಂದು ಬರೆಯುತ್ತಿದ್ದೇನೆ. ಪರಸ್ಪರರ ಅಭಿಪ್ರಾಯ ಒಂದೇ ಇರಬೇಕೆಂದೇನು ಇಲ್ಲ. ಆದರೆ ವಸ್ತುಸ್ಥಿತಿಯನ್ನು ಪ್ರತಿಫಲಿಸುವ ಅಭಿಪ್ರಾಯಗಳು ಎಂದೂ ಸರ್ವಸಮ್ಮತ ಎಂಬುದು ನನ್ನ ನಂಬಿಕೆ. ಕೆಲವೇ ದಿನಗಳಲ್ಲಿ ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ಅದಕ್ಕಾಗಿ ಎಲ್ಲ ಪಕ್ಷಗಳೂ ತಮ್ಮ ಅಭ್ಯರ್ಥಿ ಹುಡುಕಾಟದಲ್ಲಿ ಮಗ್ನರಾಗಿರುವುದು ಬಹಿರಂಗ ರಹಸ್ಯ. ಅಂತೆಯೇ ನಮ್ಮ ಬಿ.ಜೆ.ಪಿ ಪಕ್ಷದಲ್ಲಿಯೂ ಸಹಿತ ಚಟುವಟಿಕೆಗಳು ಪ್ರಾರಂಭವಾಗಿವೆ. ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷ ವಾದ ಬಿ. ಜೆ. ಪಿ. ಸಹಜವಾಗಿ ಆಕಾಂಕ್ಷಿಗಳ ದಂಡನ್ನೆ ಹೊಂದಿದೆ. ಇದು ಸಹಜ. ಆದರೆ ಸಂಘಟನೆ ಯಾವತ್ತೂ, ಜವಾಬ್ದಾರಿಗಳನ್ನು ಹಂಚಿಕೆಯನ್ನು ಮಾಡುವಾಗ ಪಕ್ಷಕ್ಕಾಗಿ ಮಾಡಿದ ತ್ಯಾಗ, ಹೋರಾಟ, ಸಂಘಟನೆ ಮುಂತಾದ ವಿಚಾರಗಳು ಬಹು ಮುಖ್ಯವಾಗಿರುತ್ತದೆ ಎಂಬುದು ಪಕ್ಷದ ಕಾರ್ಯಕರ್ತನಾಗಿ ನಾನು ಅರಿತುಕೊಂಡಿದ್ದೇನೆ.
ಈ ದೃಷ್ಟಿಕೋನದಿಂದ ನೋಡಿದಾಗ, ಆಕಾಂಕ್ಷಿಗಳ ಪಟ್ಟಿಯಲ್ಲಿ ಅಗ್ರಗಣ್ಯವಾಗಿ ಕಾಣುವ ಹೆಸರು, ಕೆ ಜಿ ನಾಯ್ಕ್ ಹಣಜಿಬೈಲ್. ಸರಿ ಸುಮಾರು 32 ವರ್ಷಗಳಿಂದ ನಿರಂತರವಾಗಿ ಪಕ್ಷದ ಒಂದಿಲ್ಲೊಂದು ಜವಾಬ್ದಾರಿಯನ್ನು ನಿಭಾಯಿಸಿದ ಧೀಮಂತ ನಾಯಕ. ಸಿದ್ದಾಪುರದ ಬಿ. ಜೆ. ಪಿ ಇತಿಹಾಸವನ್ನು ಒಮ್ಮೆ ಕಣ್ಣು ಹಾಯಿಸಿದಾಗ ಪಕ್ಷ ಸಂಘಟನೆಯನ್ನು ಅಮೂಲಾಗ್ರವಾಗಿ ಬೆಳೆಸಿಕೊಂಡು ಬಂದ ಕೀರ್ತಿ ಇವರಿಗೆ ಸಲ್ಲುತ್ತದೆ. ವಿದ್ಯಾರ್ಥಿ ದಿನಗಳಿಂದ ಸಹ ಹೋರಾಟದ ಮನೋಭಾವನೆಯನ್ನು ಹೊಂದಿದ್ದ ಶ್ರೀಯುತರು, ತಮ್ಮ ಕಾಲೇಜ್ ದಿನಗಳಲ್ಲಿ ಶ್ರೀ ಅಯೋಧ್ಯಾ ರಾಮ ಮಂದಿರದ ಹೋರಾಟದಿಂದ ಪ್ರಭಾವಿತರಾಗಿ 1989ರಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಆಗಷ್ಟೆ BA B.ed ಪದವಿ ಪಡೆದು ತಮಗೆ ಬೇಕಾದ ಸರ್ಕಾರಿ ಕೆಲಸ ಪಡೆಯಬಹುದಿತ್ತು. ಆದರೆ ಅವರ ಹೋರಾಟದ ಮನೋಭಾವ ಅವರನ್ನು ಸಮಾಜ ಸೇವೆಗೆ ಆಕರ್ಷಿಸಿತು. 1989 ರಲ್ಲಿ ಬಿಜೆಪಿ ಸೇರ್ಪಡೆ ಗೊಂಡ ನಂತರ, ಅವಿರತ ಶ್ರಮ ಮತ್ತು ಹೋರಾಟದ ಮೂಲಕ ಪಕ್ಷ ಸಂಘಟನೆ ಮಾಡಿದರು. ಆರಂಭಿಕ ದಿನಗಳಲ್ಲಿ ಸಿದ್ದಾಪುರ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ, ಯುವಮೋರ್ಚಾ ಅಧ್ಯಕ್ಷ, ಸಿದ್ದಾಪುರ ನಗರ ಬಿಜೆಪಿ ಅಧ್ಯಕ್ಷ, ಜಿಲ್ಲಾ ಸಮಿತಿ ಸದಸ್ಯ, ಜಿಲ್ಲಾ ಸಹ ಕಾರ್ಯದರ್ಶಿ, ಜಿಲ್ಲಾ ಕಾರ್ಯದರ್ಶಿ, ತಾಲೂಕಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ, ನಂತರ ಸಿದ್ದಾಪುರ ಮಂಡಲ ಅಧ್ಯಕ್ಷ. ಪ್ರಸ್ತುತ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ಕೆ ಜಿ ನಾಯ್ಕ್ ನಿಕಟ ಪೂರ್ವ, ಉತ್ತರಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರು ಆಗಿದ್ದಾರೆ.
ಈ ಎಲ್ಲಾ ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಹಿರಿಮೆ ಇವರದ್ದು, ಇತಿಹಾಸ ದಲ್ಲಿ ಮೊದಲ ಬಾರಿಗೆ ಎಂಬಂತೆ 6 ರಲ್ಲಿ 5 ಎಂ.ಎಲ್.ಎ ಗಳನ್ನು ಗೆಲ್ಲಿಸಿದ ಜಿಲ್ಲಾಧ್ಯಕ್ಷ ಯಾರಾದರೂ ಇದ್ದರೆ ಅದು ಕೆ ಜಿ ನಾಯ್ಕ್ ಮಾತ್ರ. M P ಚುನಾವಣೆಯಲ್ಲಿ ಅನಂತಕುಮಾರ ಹೆಗಡೆ ಅವರ 4.70 ಸಾವಿರದ ಅಂತರದ ಗೆಲುವಿನಲ್ಲಿ ಸಹ ಇವರ ಪಾಲಿದೆ ಎಂದರೆ ಅತಿಶಯೋಕ್ತಿ ಆಗಲಾರದು. 1996 ಪ್ರಥಮ ಬಾರಿಗೆ ಪಟ್ಟಣ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ನಂತರ ಹಿಂದಿರುಗಿ ನೋಡದ ಗೆಲುವಿನ ಸರ್ದಾರ. ನಂತರ 3 ಬಾರಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಇವರು, ಸಿದ್ದಾಪುರದ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದರು. ಕೋಟಿಗಟ್ಟಲೆ ಹಣವನ್ನು ತಂದು ಸಿದ್ದಾಪೂರವನ್ನು ಪಟ್ಟಣದ ರೂಪಿಗೆ ತಂದವರು ಕೆ ಜಿ ನಾಯ್ಕ್. ಹೀಗೆ ತಮ್ಮ 32 ವರ್ಷಗಳ ರಾಜಕೀಯ ಜೀವನದಲ್ಲಿ, ಒಂದೂ ಕಪ್ಪು ಚುಕ್ಕೆ ಇಲ್ಲದ ಶುಭ್ರ ವ್ಯಕ್ತಿತ್ವ. ತಮ್ಮ ರಾಜಕೀಯ ಬಲವಾಗಿದ್ದ, ಯಡ್ಯೂರಪ್ಪ ಅವರು ಕೆಜೆಪಿ ಕಟ್ಟಿ, ಸಿರ್ಸಿ ಸಿದ್ದಾಪುರ ಕ್ಷೇತ್ರಕ್ಕೆ ಉಮೆದುದಾರ ಆಗುವಂತೆ ಹೇಳಿದಾಗಲೂ ಕೂಡ ಮಾತೃ ಪಕ್ಷಕ್ಕೆ ದ್ರೋಹ ಮಾಡದೆ, ಪಕ್ಷದಲ್ಲೇ ಉಳಿದ ನಿಷ್ಠಾವಂತ. ಇಂತಹ ಹೋರಾಟಗಾರರನ್ನು ಪಕ್ಷ ಬಳಸಿಕೊಂಡಿದೆ ಹೊರತು, ಪಕ್ಷದಿಂದ ಯಾವುದೇ ಲಾಭವನ್ನು ಪಡೆದುಕೊಂಡವರಲ್ಲ. ಈ ಸಂದರ್ಭದಲ್ಲಿ ಜನ ಸಾಮಾನ್ಯರ ಆಶಾಕಿರಣ ಆಗಿರುವ ಇವರಿಗೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಯಾಗಿ ಘೋಷಣೆ ಮಾಡಬೇಕೆಂದು ಜನಸಾಮಾನ್ಯರ ಒಕ್ಕೊರಲ ಆಶಯವಾಗಿದೆ. ತನ್ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ, ಪಕ್ಷದ ಗೆಲುವಿಗೆ ಕಾರಣ ಆಗುವ ಕೆ ಜಿ ನಾಯ್ಕ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಬೇಕೆಂದು ಆಗ್ರಹ ಪೂರ್ವಕ ವಾಗಿ ವಿನಂತಿಸುತ್ತೇನೆ.ವಿನಂತಿಸುತ್ತೇನೆ ಎಂದು ತಿಳಿಸಿದ್ದಾರೆ.
Be the first to comment