ಮಾನವಿಯತೆಗೆ ಸಾಕ್ಷಿಯಾದ ಗಂಗೊಳ್ಳಿಯ SSC ಸಂಸ್ಥೆ”

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು

*ಗಂಗೊಳ್ಳಿ -“ಹಸಿದವನಿಗೆ ಓಪೂತ್ತಿನ ಅನ್ನ ಕೊಟ್ಟರೆ ಒಂದೊತ್ತಿನ ಆಹಾರ”*
*”ಅದೇ ದುಡಿಯುವ ವ್ಯವಸ್ಥೆ ಕಲ್ಪಿಸಿ ಕೊಟ್ಟರೆ ಜೀವನಪೂರ್ತಿ ಆಹಾರ”*
ಎಂಬ ಸ್ವಾಭಿಮಾನದ ಸಿದ್ಧಾಂತದಂತೆ ನಡೆಯುವ ಗಂಗೊಳ್ಳಿಯ ಸೋಶಿಯಲ್ ಸ್ಪೋರ್ಟ್ಸ್ ಅಂಡ್ ಚ್ಯಾರಿಟೇಬಲ್ ಅಸೋಸಿಯೇಷನ್ (SSC ಆಂಬ್ಯುಲೆನ್ಸ್ ಸಂಸ್ಥೆ) ಮಾನವೀಯತೆಗೆ ಸೈ ಎನಿಸಿಕೊಂಡಿದೆ.

CHETAN KENDULI

*ಸತೀಶ್ ಹಾಗೂ ಶಾರದಾ ಎಂಬ ದಂಪತಿಗಳು ಗಂಗೊಳ್ಳಿಯ ರಾಮಮಂದಿರ ಬಳಿಯ ನಿವಾಸಿಯಾಗಿದ್ದು..* ಸ್ವಾಭಿಮಾನದಿಂದ ಡ್ರೈವರ್ ಉದ್ಯೋಗ ಮಾಡಿ ತನ್ನ ಎರಡು ಹೆಣ್ಣು ಮಕ್ಕಳೊಡನೆ ಕುಟುಂಬವನ್ನು ಸಣ್ಣ ದುಡಿಮೆಯೊಂದಿಗೆ ನಡೆಸುತ್ತಿದ್ದ ಸತೀಶ್ ಅವರಿಗೆ ದುರದ್ರಷ್ಟಾವಶಾತ್ ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ನಡೆದ ವಾಹನ ಆಫಘಾತದ ನಂತರ,ಗಾಯಳಾಗಿದ್ದ ಕಾರಣ…ಕಷ್ಟಗಳ ಕಾಲದ ಜೀವನಕ್ಕೆ ಕಾಲಿಡುತ್ತಾರೆ.ಕರುಳು ಹಿಂಡುವ ಬಡತನದ ಬೇಗೆಯಿಂದ ದಿನನಿತ್ಯದ ಆಹಾರದ ವ್ಯವಸ್ಥೆ ಮಾಡಲು ಕೂಡ ಅಸಾದ್ಯವಾದ ಈ ಕುಟುಂಬವು…ಇತರ ಅವರ ಪರಿಚಯ ಇರುವ ಸಂಘಟನೆಗಳಿಗೆ ಮನವಿ ನೀಡಿದರೂ, ಹತ್ತಿರಕ್ಕೊ ಬಾರದ ಅವರ ಪರಿಚಯದ ಸಂಘಟನೆಗಳಿಂದ ಸೋತು ಹತಾಶರಾಗಿ..

ಆಶಾಕಿರಣವಾದ
ನಮ್ಮ SSC ಸಂಸ್ಥೆಯಲ್ಲಿ ಕೋರಿಕೆ ನೀಡಿದ ತಕ್ಷಣವೇ
ಕಾರ್ಯಪ್ರವ್ರತ್ತಿಯಾದ SSCಯ ಪದಾಧಿಕಾರಿಗಳು ಕೂಡಲೇ….ಆ ಕುಟುಂಬದ ನೈಜ ಸ್ಥಿತಿಗತಿಯನ್ನು ಕಣ್ಣಾರೆ ಪರೀಶಿಲಿಸಿದಾಗ ,ಒಪ್ಪೊತ್ತಿನ ಆಹಾರಕ್ಕೊ ಪರದಾಡುತ್ತಿವುದನ್ನು ನೋಡಿ…*ಆ ಕುಟುಂಬಕ್ಕೆ ಆಹಾರ ಸಾಮಾಗ್ರಿಗಳನ್ನು ನೀಡಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವುದಕ್ಕಿಂತ,* *ದುಡಿದು ಅನ್ನ ಸಂಪಾದನೆ ಮಾಡಿದರೆ ಶಾಶ್ವತವಾಗಿ ಪರಿಹಾರ ನೀಡಬಹುದು ಎನ್ನುವ ಉದ್ದೇಶದಿಂದ…*

*SSC ಆಂಬ್ಯುಲೆನ್ಸ್ ಸಂಸ್ಥೆಯು ಹಳೆ ರಿಕ್ಷಾ ಖರೀದಿ ಮಾಡಿ SSC ಸಂಸ್ಥೆಯ ಅಧ್ಯಕ್ಷರಾದ ಶಹಜಾನ್ ಹಂಗಾರಕಟ್ಟೆ ಅವರ ಮೂಲಕ, ಈ ಬಡ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.**ರಿಕ್ಷಾ ಬಾಡಿಗೆ ಮಾಡುವುದರ ಮೂಲಕ ತನ್ನ ಕುಟುಂಬಕ್ಕೆ ತಮ್ಮ ನೆರವು,ನಮ್ಮ ಬದುಕಿಗೆ ಆಶಾಕಿರಣದಂತೆ ಆಸರೆಯಾಗಲಿದೆ ಎಂದು ಆ ಕುಟುಂಬ ಮನದಾಳದಿಂದ ಕಣ್ಣಿರಿನಿಂದ ಗಂಗೊಳ್ಳಿಯ SSC ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದೆ.*ನಮ್ಮ ಸಂಘಟನೆ ಎಂದು ಪ್ರೋತ್ಸಾಹಿಸಿದ ಸಂಘಟನೆಗಳು ಕೇವಲ ನಮ್ಮಲ್ಲಿ ಹಣವಿರುವಾಗ ಮಾತ್ರ ನಮ್ಮ ಕಡೆ ಮುಖ ಮಾಡಿದ್ದು…ಈಗ ನಾವುಗಳು ಯೋಚನೆ ಮಾಡದೇ ಇರುವ ಮುಸ್ಲಿಂ ಸಮುದಾಯದ SSC ಆಂಬ್ಯುಲೆನ್ಸ್ ಸಂಸ್ಥೆಯೇ ಜಾತಿಮತ ಬೇಧವಿಲ್ಲದೆ ನಾವೆಲ್ಲಾರು ಭಾರತೀಯರು ಎಂದು ನೈಜ ಮಾನವಿಯತೆಗೆ ಪ್ರಾಯೋಗಿಕವಾಗಿ ಸಾಕ್ಷಿಯಾಗಿದ್ದಾರೆ ಎಂದು ಆ ಕುಟುಂಬದ ಸತೀಶ್ ಅವರು ಕಣ್ಣೀರಿನಿಂದ ಅಭಿಪ್ರಾಯ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ SSC ಯ ,ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*