ಜಿಲ್ಲಾ ಸುದ್ದಿಗಳು
ಮಸ್ಕಿ:
ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮಸ್ಕಿ ಯಲ್ಲಿ ಸಾರ್ವಜನಿಕರು ಆಧಾರ್ ಕಾರ್ಡ್ ಹಾಗೂ ಇನ್ನಿತರ ದಾಖಲಾತಿ ಗಳಿಗಾಗಿ ವೈದ್ಯಾಧಿಕಾರಿಗಳ ಬಳಿ ಸಹಿ ಹಾಕಿ ಎಂದು ಕೇಳಲು ಹೋದರೆ ಪಟ್ಟಣದ ಅಸ್ಪತ್ರೆಯ ವೈದ್ಯಾಧಿಕಾರಿಯು 12:30 ರಿಂದ 1:30 ವರೆಗೆ ಮಾತ್ರ ಸಹಿ ಮಾಡುವುದು ಎಂದು ಸಮಯ ನಿಗದಿ ಮಾಡಿದ್ದಾರೆ ನಿಗದಿಪಡಿಸಲಾದ ಸಮಯದಲ್ಲಿಯೇ ಹೋದರು ಸರಿಯಾದ ರೀತಿಯ ರೆಸ್ಪಾನ್ಸ್ ಮಾಡದೆ, ಸಹಿಯೂ ಮಾಡದೆ ನಮ್ಮ ಆಸ್ಪತ್ರೆಗೆ ಯಾಕೆ ಬರುತ್ತೀರಾ…? ಬೇರೆ ಒಂದು ಇಲಾಖೆಗೆ ಹೋಗಿ ಸಹಿ ಮಾಡಿಸಿಕೊಳ್ಳಿ ಎಂದು ಹೇಳುತ್ತಾರೆ. ತಾಲೂಕಿನ ಗ್ರಾಮೀಣ ಭಾಗದಿಂದ ಬರುವ ಸಾರ್ವಜನಿಕರು ಆಧಾರ್ ಕಾರ್ಡ್ ಸಮಸ್ಯೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅದು ಬಿಡಿ ಸೂಕ್ತ ಮಾಹಿತಿಯೊಂದಿಗೆ ವರದಿಗಾರರೇ ಅವರ ಬಳಿ ಹೋಗಿ ಸಹಿಮಾಡಿ ಎಂದು ಕೇಳಿದರೆ ನಾನು ಸಹಿ ಮಾಡುವುದಿಲ್ಲ ಎಂದು ಹೇಳುತ್ತಾರೆ.ವೈದ್ಯಾಧಿಕಾರಿ ಸಹಿ ಎಂದು ಇದ್ದರೆ ಮಾತ್ರ ನಾನು ಸಹಿ ಮಾಡುತ್ತೇನೆ ಎಂದು ಹೇಳುತ್ತಾರೆ. ಅಟೆಸ್ಟೆಡ್ ದಾಖಲಾತಿ ಸಹಿ ತೆಗೆದುಕೊಳ್ಳಬೇಕೆಂದರೆ ಅದರ ಮೇಲೆ ವೈದ್ಯಾಧಿಕಾರಿಯ ಸಹಿ ಅಂತ ಇರುವುದಿಲ್ಲ ಎಂದು ವರದಿಗಾರರು ಹೇಳಿದ್ದಾರೆ. ವರದಿಗಾರರು ಮತ್ತು ಸಾರ್ವಜನಿಕರು ವೈದ್ಯಾಧಿಕಾರಿಯೊಂದಿಗೆ ಮಾತನಾಡುತ್ತಿರುವಾಗ ವೈದ್ಯಾಧಿಕಾರಿಯೇ ಪೊಲೀಸ್ ಸಿಬ್ಬಂದಿಗೆ ಕರೆಮಾಡಿ ಕರೆಸುತ್ತಾರೆ. ಹಾಗೂ ಸಾರ್ವಜನಿಕರು ಇತರ ಸಮಸ್ಯೆಗಳು ಕೇಳಿಯೂ ಅವರ ಸಮಸ್ಯೆಗೆ ಸ್ಪಂದಿಸದೆ ಪೊಲೀಸರನ್ನು ಕರೆಸಿ ದಬ್ಬಾಳಿಕೆ ನಡೆಸುವ ಕೆಲಸ ಮಾಡುತ್ತಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಆಧಾರ್ ಕಾರ್ಡ್ ಹಾಗೂ ಇನ್ನಿತರ ದಾಖಲಾತಿಗಳ ಸಹಿಗಾಗಿ ತಾಲೂಕಿನ ಗ್ರಾಮೀಣ ಭಾಗದ ಜನರು ಹಾಗೂ ಬಾಣಂತಿಯರು ಹಾಗೂ ವೃದ್ಧರು, ಮಹಿಳೆಯರು ಇಲಾಖೆ ಇಲಾಖೆಗೆ ಅಲೆದು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಸ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳ ಹತ್ತಿರ ಹೋದರೆ ಸಹಿ ಮಾಡುವುದಿಲ್ಲ ಎಂದು ಹೇಳುತ್ತಾರೆ. ಇನ್ನು ಕೆಲವರು ಸೂಕ್ತ ದಾಖಲೆ ತೆಗೆದುಕೊಂಡು ಹೋದರು ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಇವರು ನಿಗದಿಪಡಿಸಿದ ಸಮಯದಲ್ಲಿ ಸಹಿ ಮಾಡಿಸಲು ತೆಗೆದುಕೊಂದು ಹೋಗುವಷ್ಟರಲ್ಲಿಯೇ ಆಧಾರ್ ಕಾರ್ಡ್ ನೊಂದಣಿ ಕೇಂದ್ರ ಬಂದಾಗಿರುತ್ತದೆ.
ಮಸ್ಕಿಯ ವೈದ್ಯಾಧಿಕಾರಿಗಳ ಹತ್ತಿರ ಸಾರ್ವಜನಿಕರು ತಮ್ಮ ಸಮಸ್ಯೆ ಹೇಳಿವಾಗ ವೈದ್ಯಾಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆದಿದೆ ಆಗ ಪೊಲೀಸರನ್ನು ಕರೆಸಿ ಅವರ ಮೇಲೆ ದಬ್ಬಾಳಿಕೆ ಮಾಡುವ ಕೆಲಸ ಮಾಡಿದ್ದಾರೆ. ಇನ್ನು ಸಹಿ ವಿಚಾರವಾಗಿ ವರದಿಗಾರರು ಅಧಿಕಾರಿಯ ಬಳಿ ಕೇಳಿದರೆ ಮಸ್ಕಿ ಪಟ್ಟಣದಲ್ಲಿ ವರದಿಗಾರರ ಹಾವಳಿ ಹೆಚ್ಚಾಗಿದೆ ಇವರ ಮೇಲೆ ಕೇಸ್ ಮಾಡುತ್ತೇನೆ ಎಂದು ಸಾರ್ವಜನಿಕರ ಮುಂದೆ ಮಾತನಾಡಿರುತ್ತಾರೆ.
ಸಾರ್ವಜನಿಕರ ಸಮಸ್ಯೆ ಕುರಿತು ಇವರಿಗೆ ಮನವರಿಕೆ ಮಾಡಿದರೆ ಪೊಲೀಸರನ್ನು ಕರೆಸಿ ಅವರಿಂದಲೇ ದಬ್ಬಾಳಿಕೆ ಮಾಡುತ್ತಾರೆ. ಪೊಲೀಸ್ ಅಧಿಕಾರಿಗಳು ಇವರಿಗೆ ಸಾಥ್ ನೀಡುತ್ತಾರೆ. ವೈದ್ಯಾಧಿಕಾರಿಯು ನಮ್ಮ ಕೆಲಸದ ಸಮಯದಲ್ಲಿ ತೊಂದರೆ ಕೊಡುತ್ತಿದ್ದಾರೆ ಎಂದಾಕ್ಷಣ ಪೊಲೀಸರು ಬರುತ್ತಾರೆ. ಅದೇ ಆಧಾರ್ ಕಾರ್ಡ್ ಗೆ ಸಹಿ ಮಾಡುತ್ತಿಲ್ಲ ಸರ್ ನೀವು ಬನ್ನಿ ಎಂದು ಪೊಲೀಸ್ ಠಾಣೆಗೆ ಕರೆ ಮಾಡಿದರೆ ಬರುತ್ತಾರಾ…..? ನಮ್ಮ ಜನರು ಪೊಲೀಸ್ ಎಂದತಕ್ಷಣ ಭಯಬಿದ್ದು ಸತ್ಯ ಸತ್ಯಾಂಶವನ್ನು ಬಿಟ್ಟು ನಮಗ್ಯಾಕೆ ಬೇಕು ಎಂದು ಆಸ್ಪತ್ರೆಯಿಂದ ತೆರಳಿ ತಮ್ಮ ದಾ ಲಾತಿಗಳನ್ನು ಬೇರೆ ಇಲಾಖೆಗೆ ತೆರಳಿ ಸಹಿ ಮಾಡಿಸಿಕೊಳ್ಳುವ ವ್ಯವಸ್ಥೆ ನಿರ್ಮಾಣವಾಗಿದೆ.ಇದಕ್ಕೆ ಕಡಿವಾಣ ಬೀಳಲ್ವಾ ಕೇವಲ ಅಧಿಕಾರಿಗಳ ಮೇಲೆ ಸಾರ್ವಜನಿಕರು ದಬ್ಬಾಳಿಕೆ ಮಾಡುವುದಿಲ್ಲ, ಅಧಿಕಾರಿಗಳು ಸಾರ್ವಜನಿಕರ ಮೇಲೆ ದಬ್ಬಾಳಿಕೆ ಮಾಡುತ್ತಾರೆ.? ಇದನ್ನು ಪೊಲೀಸ್ ಇಲಾಖೆ ಸೂಕ್ತ ಮಾಹಿತಿಯೊಂದಿಗೆ ಯಾರ ಯಾರ ತಪ್ಪು ಇದೆ ಎಂದು ಪರಿಗಣಿಸಬೇಕು.
ಮಸ್ಕಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಕಮ್ಮಿ 100 ಹಾಸಿಗೆ ಇಲ್ಲದ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ತುಂಬಾ ಬ್ಯುಸಿಯಾಗಿರುತ್ತಾರೆ. ಸಹಿ ಮಾಡಲು ಅವರು ಸಮಯವಿಲ್ಲದಷ್ಟು ರೋಗಿಗಳು ಬರುತ್ತಿದ್ದಾರಾ ಮಸ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ……? ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರಾ..? ಶವಾಗಾರ ನ ರೂಮಿಗೆ ಒಂದು ಲೈಟಿನ ವ್ಯವಸ್ಥೆ ಇದೇನಾ…? ಸುತ್ತ ಮುತ್ತಲಿನ ಪರಿಸರ ಸರಿ ಇದೇನಾ…? ಬಸವಶ್ರೀ ವೈದ್ಯಾಧಿಕಾರಿ ಬಂದಾಗಿನಿಂದ ಅಸ್ಪತ್ರೆಯ ವ್ಯವಸ್ಥಿತ ಬದಲಾಗಿದೆನಾ…? ಈ ಹಿಂದೆ ಇದ್ದಂತಹ ವೈದ್ಯಾಧಿಕಾರಿ ಇರುವಾಗ ಗೆಜೆಟೆಡ್ ಸಹಿ ಸಮಸ್ಯೆ ಇರಲಿಲ್ಲ ಆಗ ಸಾರ್ವಜನಿಕರಿಗೆ ಸಮಸ್ಯೆಗೆ ಸ್ಪಂದಿಸುವ ಅಧಿಕಾರಿಯಾಗಿದ್ದರು. ಈಗಿರುವ ವೈದ್ಯಾಧಿಕಾರಿ ಈ ಆಧಾರ್ ಕಾರ್ಡ್ ಸಹಿ ವಿಚಾರವನ್ನು ದೊಡ್ಡ ವಿಷಯವನ್ನಾಗಿ ಮಾಡುತ್ತಿದ್ದಾರೆ ಯಾಕೆಂದು ತಿಳಿಯದಾಗಿದೆ. ಅದು ಬಿಡ್ರಿ ವ್ಯವಸ್ಥಿತ ಬಗ್ಗೆ ಬಿಟ್ಟು ಇನ್ನೊಂದು ವಿಷಯಕ್ಕೆ ಬರೋಣ ಇವರು ಸರಕಾರಿ ಗೆಜೆಟೆಡ್ ಆಫೀಸರ್ ತಾನೇ…? ಗೆಜೆಟೆಡ್ ಸಹಿ ಮಾಡಲು ಬೇಸರವೆನಿಸಿದರೆ ಎಂದರೆ ಗೆಜೆಟೆಡ್ ಆಫೀಸರ್ ನಾನಲ್ಲ ಎಂದು ರಾಜೀನಾಮೆ ಪತ್ರ ನೀಡಿದರೆ ಆಯಿತಲ್ವಾ….? ನಿಮ್ಮ ಹತ್ತಿರ ಜನ ಯಾಕೆ ಬರುತ್ತಾರೆ ಬೇರೆಯೊಂದು ಇಲಾಖೆಗೆ ಹೋಗುತ್ತಾರೆ. ಮಸ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಸರಿಯಾದ ಸ್ಪಂದನೆ ಇಲ್ಲ, ಮಾಹಿತಿ ಹಾಗೂ ಇನ್ನಿತರ ಸಹಿ ಕೇಳಲು ಹೋದರೆ ಪೊಲೀಸ್ ಅವರನ್ನು ಕರೆಸಿ ದಬ್ಬಾಳಿಕೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
ಆಧಾರ್ ಕಾರ್ಡ್ ಇನ್ನಿತರ ಸಮಸ್ಯೆಗಾಗಿ ಮಸ್ಕಿ ತಾಲೂಕ ಹಾಗೂ ಗ್ರಾಮೀಣ ಭಾಗದಿಂದ ಬರುವ ಸಾರ್ವಜನಿಕರು ಸರಕಾರಿ ಆಸ್ಪತ್ರೆಗೆ ಆಧಾರ್ ಕಾರ್ಡ್ ಸಮಸ್ಯೆ ತಿದ್ದುಪಡಿ ಸಹಿ ತೆಗೆದುಕೊಳ್ಳಲು ಬಂದರೆ ಮಸ್ಕಿ ವೈದ್ಯಾಧಿಕಾರಿ ಸಹಿ ಮಾಡುವುದಿಲ್ಲ ಸೂಕ್ತ ದಾಖಲಾತಿಗಳು ಇಲ್ಲ ಎಂದು ಸಾರ್ವಜನಿಕರನ್ನು ಅಲೆದಾಡಿಸುತ್ತಿದ್ದಾರೆ. ಮೇಲಧಿಕಾರಿಗಳು ಇವರ ಮೇಲೆ ಸೂಕ್ತ ಕ್ರಮಕೈಗೊಳ್ಳದೇ ಇದ್ದರೆ, ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು.
-ದುರುಗರಾಜ್ ವಟಗಲ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು.
ಈ ತಾಲೂಕಿನ ತಾಂಡದಿಂದ ಬಂದಿದ್ದೇವೆ ಆಧಾರ್ ಕಾರ್ಡ್ ಸಹಿ ಕೇಳಿದರೆ ಆಗುವುದಿಲ್ಲ ಎಂದು ಹೇಳುತ್ತಾರೆ. ಹೆಂಡತಿಯ ಆಧಾರ್ ಕಾರ್ಡ್ ಇಲ್ಲದ ಸಮಯದಲ್ಲಿ ಗಂಡನ ಆಧಾರ್ ಕಾರ್ಡ್ ತೋರಿಸಿದರೆ ಅದಕ್ಕೆ ಸಹಿ ಮಾಡುವುದಿಲ್ಲ ಎಂದು ಹೇಳುತ್ತಾರೆ. ನಾವು ಜಾಸ್ತಿ ಮಾತನಾಡುತ್ತಿದ್ದೇವೆ ಎಂದು ಪೊಲೀಸರನ್ನು ಕರಿಸಿ ನಮ್ಮ ಮೇಲೆ ಬೆದರಿಕೆ ಮಾಡಿಸುತ್ತಿದ್ದಾರೆ ನಮ್ಮ ಸಮಸ್ಯೆ ಯಾರಿಗೆ ಹೇಳಬೇಕು ತಿಳಿಯದಂತಾಗಿದೆ…?
-ಗ್ರಾಮೀಣ ಭಾಗದ ನಿವಾಸಿ
ನಾವು ಎಲ್ಲರಿಗೂ ರಕ್ಷಣೆ ನೀಡುತ್ತೇವೆ ಅಧಿಕಾರಿಗಳು, ಪತ್ರಕರ್ತರು ಹಾಗೂ ಸಾರ್ವಜನಿಕರು ನಮಗೆ ಎಲ್ಲರೂ ಒಂದೇ, ಮಾತಿನಚಕಮಕಿ ಹಾಗೂ ಜಗಳ ಇನ್ನಿತರೆ ಕೇಳಿ ಬಂದಾಗ ನಾವು ಹೋಗಬೇಕಾದ ಪ್ರಸಂಗ ಬರುತ್ತದೆ. ನಾವು ಅಲ್ಲಿ ಹೋಗಿ ಮಾಹಿತಿ ತಿಳಿದುಕೊಳ್ಳುತ್ತೇವೆ ಯಾರ್ ಮೇಲೆ ದೌರ್ಜನ್ಯ ಮಾಡುವುದಿಲ್ಲ ಪೊಲೀಸ್ ಇಲಾಖೆ ಇರುವುದು ಸಾರ್ವಜನಿಕರ ರಕ್ಷಣೆಗಾಗಿ.
-ಸಂಜೀವ್ ಬಳಿಗಾರ ಸಿ.ಪಿ.ಐ ಪೊಲೀಸ್ ಠಾಣೆ ಮಸ್ಕಿ
Be the first to comment